T20 World Cup 2024 Schedule: ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಭಾರತ- ಪಾಕ್ ಪಂದ್ಯ ಯಾವಾಗ ಗೊತ್ತಾ?
ಟಿ20 ವಿಶ್ವಕಪ್ 2024 ವೇಳಾಪಟ್ಟಿ: ಈ ವರ್ಷ ಅಂದರೆ 2024 ರ ಜೂನ್ನಲ್ಲಿ ನಡೆಯಲ್ಲಿರುವ ಐಸಿಸಿ ಟಿ20 ವಿಶ್ವಕಪ್ಗೆ ತಯಾರಿ ಶುರುವಾಗಿದೆ. ಈ ಚುಟುಕು ಸಮರಕ್ಕೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯವಹಿಸುತ್ತಿವೆ. ಈ ನಡುವೆ ಐಸಿಸಿ, ಈ ಮಿನಿ ವಿಶ್ವಕಪ್‌ನ ವೇಳಾಪಟ್ಟಿಯನ್ನು ಸಹ ಇಂದು ಬಿಡುಗಡೆಗೊಳಿಸಿದೆ.
ಈ ವರ್ಷ ಅಂದರೆ 2024 ರ ಜೂನ್ನಲ್ಲಿ ನಡೆಯಲ್ಲಿರುವ ಐಸಿಸಿ ಟಿ20 ವಿಶ್ವಕಪ್ಗೆ (T20 World Cup 2024) ತಯಾರಿ ಶುರುವಾಗಿದೆ. ಈ ಚುಟುಕು ಸಮರಕ್ಕೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯವಹಿಸುತ್ತಿವೆ. ಈಗಾಗಲೇ ಈ ವಿಶ್ವಸಮರಕ್ಕೆ 20 ತಂಡಗಳನ್ನು ಸಹ ಅಧಿಕೃತಗೊಳಿಸಲಾಗಿದೆ. ಈ ನಡುವೆ ಐಸಿಸಿ, ಈ ಮಿನಿ ವಿಶ್ವಕಪ್‌ನ ವೇಳಾಪಟ್ಟಿಯನ್ನು ಸಹ ಇಂದು ಬಿಡುಗಡೆಗೊಳಿಸಿದೆ. ವೇಳಾಪಟ್ಟಿಯ ಪ್ರಕಾರ ಜೂನ್ 1 ರಿಂದ ಆರಂಭವಾಗಲಿರುವ ಟೂರ್ನಿ ಜೂನ್ 29 ರಂದು ಮುಕ್ತಾಯವಾಗಲಿದೆ. ಅಂದರೆ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಜೂನ್ 29 ರಂದು ನಡೆಯಲ್ಲಿದೆ. ಉದ್ಘಾಟನಾ ಪಂದ್ಯ ಆತಿಥೇಯ ಯುಎಸ್ಎ ಹಾಗೂ ಕೆನಡಾ (USA and Canada) ನಡುವೆ ನಡೆದರೆ, ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ.
ಎ ಗುಂಪಿನಲ್ಲಿ ಟೀಂ ಇಂಡಿಯಾ
ಟೀಂ ಇಂಡಿಯಾ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಭಾರತವನ್ನು ಹೊರತುಪಡಿಸಿ ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಆತಿಥೇಯ ಯುಎಸ್ಎ ಕೂಡ ಈ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 05 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಈ ಪಂದ್ಯದ ನಂತರ, ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ವಿಶ್ವಕಪ್‌ನ ಅತಿದೊಡ್ಡ ಪಂದ್ಯ ನಡೆಯಲಿದೆ. ಅಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತನ್ನ ಮೂರನೇ ಗುಂಪು ಹಂತದ ಪಂದ್ಯವನ್ನು ಅಮೆರಿಕ ವಿರುದ್ಧ ಜೂನ್ 12 ರಂದು ನ್ಯೂಯಾರ್ಕ್‌ನಲ್ಲಿ ಮತ್ತು ನಾಲ್ಕನೇ ಲೀಗ್ ಪಂದ್ಯವನ್ನು ಕೆನಡಾ ವಿರುದ್ಧ ಜೂನ್ 15 ರಂದು ಫ್ಲೋರಿಡಾದಲ್ಲಿ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಯುಎಸ್ಎನಲ್ಲೇ ಆಡಲಿದ್ದು, ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಯುಎಸ್‌ಎನಲ್ಲಿ ಆಡಲಿದೆ.
Get ready for the ultimate cricket carnival in the West Indies and the USA 🥁
Unveiling the fixtures for the ICC Men’s T20 World Cup 2024 🗓️ 🤩#T20WorldCup | Details 👇
— ICC (@ICC) January 5, 2024
ಟೀಂ ಇಂಡಿಯಾದ ವೇಳಾಪಟ್ಟಿ (ಗುಂಪು ಹಂತ)
- ಜೂನ್ 5 – ಭಾರತ vs ಐರ್ಲೆಂಡ್, ನ್ಯೂಯಾರ್ಕ್
- ಜೂನ್ 9- ಭಾರತ vs ಪಾಕಿಸ್ತಾನ, ನ್ಯೂಯಾರ್ಕ್
- ಜೂನ್ 12- ಭಾರತ vs ಯುಎಸ್ಎ, ನ್ಯೂಯಾರ್ಕ್
- ಜೂನ್ 15- ಭಾರತ vs ಕೆನಡಾ, ಫ್ಲೋರಿಡಾ
India’s schedule in T20 World Cup 2024:
India vs Ireland on June 5th. India vs Pakistan on June 9th. India vs USA on June 12th. India vs Canada on June 15th.
– All games in USA….!!!!! pic.twitter.com/WzYYLyUBW3
— Johns. (@CricCrazyJohns) January 5, 2024
ಯಾವ ಗುಂಪಿನಲ್ಲಿ ಯಾವ ತಂಡವಿದೆ?
- ಗುಂಪು ಎ- ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುಎಸ್ಎ.
- ಗುಂಪು ಬಿ- ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್.
- ಗುಂಪು ಸಿ- ನ್ಯೂಜಿಲೆಂಡ್, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಉಗಾಂಡಾ, ಪಿಎನ್ಜಿ.
- ಗುಂಪು ಡಿ- ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಶ್ರೀಲಂಕಾ, ನೇಪಾಳ.
ICC T20 World Cup 2024 groups have been decided [The Telegraph]
Which group is the toughest? 👀 #T20WorldCup pic.twitter.com/nY3PhGu8aq
— Farid Khan (@_FaridKhan) January 5, 2024
ಪಂದ್ಯಾವಳಿಯ ಸ್ವರೂಪ ಹೇಗಿರುತ್ತದೆ?
ಈ ಟೂರ್ನಿಯ ಸ್ವರೂಪದ ಬಗ್ಗೆ ಮಾತನಾಡುವುದಾದರೆ, ಎಲ್ಲಾ ತಂಡಗಳು ಗುಂಪು ಹಂತದಲ್ಲಿ ತಲಾ 4 ಪಂದ್ಯಗಳನ್ನು ಆಡಲಿವೆ. ಇದರ ನಂತರ, ಪ್ರತಿ ಗುಂಪಿನ ಅಗ್ರ 2 ತಂಡಗಳು ಕ್ವಾರ್ಟರ್ ಫೈನಲ್‌ಗೆ ತಲುಪುತ್ತವೆ. ಸೂಪರ್ 8 ರ ಈ ನಾಕೌಟ್ ಹಂತದ ನಂತರ, ನಾಲ್ಕು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ. ನಂತರ ಸೆಮಿಫೈನಲ್‌ನಲ್ಲಿ ಗೆದ್ದ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಸೆಮಿಫೈನಲ್ ಪಂದ್ಯಗಳು ಜೂನ್ 26 ಮತ್ತು 27 ರಂದು ನಡೆಯಲಿವೆ. ಜೂನ್ 29 ರಂದು ಫೈನಲ್ ಪಂದ್ಯ ನಡೆಯಲಿದೆ.
Published On - 7:05 pm, Fri, 5 January 24