
ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ 2026 ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಿದೆ. ಕೊಲಂಬೊದಲ್ಲಿ ನಡೆದ ತನ್ನ ಮೊದಲ ಗುಂಪು ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ, ಐರ್ಲೆಂಡ್ (Australia vs Ireland) ತಂಡವನ್ನು 67 ರನ್‌ಗಳಿಂದ ಸುಲಭವಾಗಿ ಸೋಲಿಸಿ ಗೆಲುವಿನ ಖಾತೆ ತೆರೆದಿದೆ. ನಾಯಕ ಮಿಚೆಲ್ ಮಾರ್ಷ್ ಅನುಪಸ್ಥಿತಿಯಲ್ಲಿ ಟ್ರಾವಿಸ್ ತಂಡವನ್ನು ಮುನ್ನಡೆಸಿದರು. ಅದರಂತೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 182 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಐರ್ಲೆಂಡ್ ಕೇವಲ 115 ರನ್‌ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಬೌಲಿಂಗ್ನಲ್ಲಿ ಮಿಂಚಿದ ನಾಥನ್ ಎಲ್ಲಿಸ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು.
ದುರ್ಬಲ ಐರ್ಲೆಂಡ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಹೇಳಿಕೊಳ್ಳುವಂತಹ ಆರಂಭ ಸಿಗಲಿಲ್ಲ. ಆದಾಗ್ಯೂ ಆ ಬಳಿಕ ಬಂದ ಜೋಶ್ ಇಂಗ್ಲಿಸ್ (37), ಮಾರ್ಕಸ್ ಸ್ಟೊಯಿನಿಸ್ (45) ಮತ್ತು ಕ್ಯಾಮರೂನ್ ಗ್ರೀನ್ (21) ಅವರ ಗಮನಾರ್ಹ ಇನ್ನಿಂಗ್ಸ್ ತಂಡವನ್ನು 182 ರನ್‌ಗಳ ಬಲವಾದ ಮೊತ್ತಕ್ಕೆ ಕೊಂಡೊಯ್ಯಿತು.
ಆಸೀಸ್ ಬೌಲಿಂಗ್ ಮುಂದೆ ಐರ್ಲೆಂಡ್ ತಂಡಕ್ಕೆ ಈ ಗುರಿ ಬೆನ್ನಟ್ಟುವುದು ಕಷ್ಟಕರ ಎಂಬುದು ಆರಂಭದಲ್ಲೇ ಸ್ಪಷ್ಟವಾಗಿತ್ತು. ಅದರಂತೆ ನಾಥನ್ ಎಲಿಸ್ ಬೌಲಿಂಗ್ಗೆ ಐರ್ಲೆಂಡ್ ಬ್ಯಾಟರ್ಗಳ ಬಳಿ ಉತ್ತರವಿರಲಿಲ್ಲ. ಇದರ ಜೊತೆಗೆ ನಾಯಕ ಪಾಲ್ ಸ್ಟಿರ್ಲಿಂಗ್ ಗಾಯಗೊಂಡು ನಿವೃತ್ತರಾದರೆ, ಮೂರನೇ ಓವರ್‌ನ ಹೊತ್ತಿಗೆ, ತಂಡದ ಪ್ರಮುಖ ಮೂರು ವಿಕೆಟ್‌ಗಳು ಪತನಗೊಂಡವು. ಅವುಗಳಲ್ಲಿ ಎರಡನ್ನು ಎಲಿಸ್ ಒಂದೇ ಓವರ್‌ನಲ್ಲಿ ಪಡೆದರು. ಏಳನೇ ಓವರ್‌ನ ವೇಳೆಗೆ, ಐರ್ಲೆಂಡ್ ಕೇವಲ 43 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
T20 World Cup: 2ನೇ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್
ತಂಡದ ಪರ ಏಕಾಂಗಿ ಹೋರಾಟ ನೀಡಿದ ಜಾರ್ಜ್ ಡಾಕ್ರೆಲ್ 41 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಇನ್ನು ಲೆಗ್-ಸ್ಪಿನ್ನರ್ ಆಡಮ್ ಜಂಪಾ ಮಧ್ಯಮ ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಐರ್ಲೆಂಡ್ ತಂಡವನ್ನು ಬೇಗನೇ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಎಲಿಸ್ ತಮ್ಮ 3.5 ಓವರ್‌ಗಳಲ್ಲಿ ಕೇವಲ 12 ರನ್‌ಗಳನ್ನು ನೀಡಿ ನಾಲ್ಕು ವಿಕೆಟ್‌ಗಳನ್ನು ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:09 pm, Wed, 11 February 26