
ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಮುಂದಿನ ಟೂರ್ನಿಗೆ ರೂಪುರೇಷೆಗಳು ಸಿದ್ಧಗೊಂಡಿದೆ. ಅದರಂತೆ 2026 ರಲ್ಲಿ ಐಸಿಸಿ ಟಿ20 ವಿಶ್ವಕಪ್ ಆಯೋಜಿಸಲು ನಿರ್ಧರಿಸಲಾಗಿದೆ. ಈ ಚುಟುಕು ಕ್ರಿಕೆಟ್ ಟೂರ್ನಿಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯವಹಿಸಲಿದೆ. ಅಂದರೆ ಬಹುತೇಕ ಪಂದ್ಯಗಳು ಭಾರತದಲ್ಲಿ ನಡೆದರೆ, ಕೆಲ ಮ್ಯಾಚ್ಗಳು ಶ್ರೀಲಂಕಾದಲ್ಲಿ ಜರುಗಲಿದೆ.
ಇನ್ನು ಈ ಟೂರ್ನಿಯನ್ನು 2026ರ ಫೆಬ್ರವರಿ ಮತ್ತು ಮಾರ್ಚ್ ನಡುವೆ ಆಯೋಜಿಸಲು ಐಸಿಸಿ ಆಡಳಿತ ಮಂಡಳಿ ನಿರ್ಧರಿಸಿದೆ. ಅದಕ್ಕೂ ಮುನ್ನ ಎಲ್ಲಾ ಮಂಡಳಿಗಳು ತಮ್ಮ ಸರಣಿಗಳನ್ನು ಪೂರ್ಣಗೊಳಿಸಲು ತಿಳಿಸಲಾಗಿದೆ.
ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುವುದಿಲ್ಲ. ಏಕೆಂದರೆ ಈ ಇಬ್ಬರು ಆಟಗಾರರು ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ಇಬ್ಬರು ದಿಢೀರ್ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಭಾರತದಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್ ಸಮರದಲ್ಲಿ ಇಬ್ಬರು ದಾಂಡಿಗರು ಕಣಕ್ಕಿಳಿಯುವುದಿಲ್ಲ. ಅಲ್ಲದೆ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.
ಇದಾಗ್ಯೂ ಇಬ್ಬರು ದಿಗ್ಗಜರನ್ನು ಟಿ20 ವಿಶ್ವಕಪ್ನ ರಾಯಭಾರಿಗಳಾಗಿ ಬಳಸಿಕೊಳ್ಳಲು ಐಸಿಸಿ ಚಿಂತಿಸಿದೆ. ಹೀಗಾಗಿ ಮುಂಬರುವ ವಿಶ್ವಕಪ್ ವೇಳೆ ಹಿಟ್ಮ್ಯಾನ್ ಹಾಗೂ ಕಿಂಗ್ ಕೊಹ್ಲಿ ಫೋಟೋಗಳು ಭಾರತದಲ್ಲಿ ರಾರಾಜಿಸಲಿದೆ.
ಇದನ್ನೂ ಓದಿ: IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
ಐಸಿಸಿಯ ಮುಂದಿನ ಟೂರ್ನಿಯಲ್ಲಿ ಒಟ್ಟು 20 ಕಣಕ್ಕಿಳಿಯಲಿವೆ. ಈಗಾಗಲೇ 12 ತಂಡಗಳು ಟಿ20 ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದ್ದು, ಉಳಿದ 8 ತಂಡಗಳನ್ನು ಅರ್ಹತಾ ಸುತ್ತಿನ ಮೂಲಕ ಆಯ್ಕೆ ಮಾಡಲಾಗುತ್ತದೆ. ಟಿ20 ವಿಶ್ವಕಪ್ಗೆ ಅರ್ಹತೆ ಪಡೆದ ತಂಡಗಳು ಈ ಕೆಳಗಿನಂತಿದೆ….