Tanmay Singh: 27 ಸಿಕ್ಸ್​, 19 ಫೋರ್: ರೋಹಿತ್ ಶರ್ಮಾರ ದಾಖಲೆ ಮುರಿದ 15 ವರ್ಷದ ಬ್ಯಾಟ್ಸ್​ಮನ್

| Updated By: ಝಾಹಿರ್ ಯೂಸುಫ್

Updated on: Jun 28, 2022 | 3:59 PM

Tanmay Singh: ಭರ್ಜರಿ ಬ್ಯಾಟಿಂಗ್ ಮೂಲಕ ತನ್ಮಯ್ ಸಿಂಗ್ ಇಡೀ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ 15 ವರ್ಷದ ಯುವ ಆಟಗಾರ ಮುಂಬರುವ ದಿನಗಳಲ್ಲಿ ಅಂಡರ್ 19 ಟೀಮ್ ಇಂಡಿಯಾ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

Tanmay Singh: 27 ಸಿಕ್ಸ್​, 19 ಫೋರ್: ರೋಹಿತ್ ಶರ್ಮಾರ ದಾಖಲೆ ಮುರಿದ 15 ವರ್ಷದ ಬ್ಯಾಟ್ಸ್​ಮನ್
Tanmay Singh-Rohit Sharma
Follow us on

ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ವಿಶ್ವ ದಾಖಲೆ ರೋಹಿತ್ ಶರ್ಮಾ (Rohit Sharma) ಹೆಸರಿನಲ್ಲಿದೆ. 2014 ಹಿಟ್​ಮ್ಯಾನ್ ಶ್ರೀಲಂಕಾ ವಿರುದ್ದ ಬರೋಬ್ಬರಿ 264 ರನ್​ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಮೀರುವಂತೆ 15 ವರ್ಷದ ಯುವ ಬ್ಯಾಟ್ಸ್​ಮನ್​ ಡಬಲ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ವಿಶೇಷ ಎಂದರೆ ರೋಹಿತ್ ಶರ್ಮಾ ಅವರ 264 ರನ್​ಗಳ ದಾಖಲೆಯನ್ನೂ ಕೂಡ ಈ ಯುವ ಆಟಗಾರ ಹಿಂದಿಕ್ಕಿದ್ದಾರೆ. ಆದರೆ ಇದು ಕ್ಲಬ್ ಕ್ರಿಕೆಟ್​ನಲ್ಲಿ ಎಂಬುದಷ್ಟೇ ವ್ಯತ್ಯಾಸ. ದೇಶೀಯ ಅಂಗಳದಲ್ಲಿ ಇಂತಹದೊಂದು ಅಪರೂಪದ ದಾಖಲೆ ಬರೆದ ಬ್ಯಾಟ್ಸ್​ಮನ್ ಹೆಸರು ತನ್ಮಯ್ ಸಿಂಗ್. ನೋಯ್ಡಾದ ಗ್ರೇಟರ್ ವ್ಯಾಲಿ ಮೈದಾನದಲ್ಲಿ ನಡೆದ ಕ್ಲಬ್ ಕ್ರಿಕೆಟ್​ ಪಂದ್ಯದಲ್ಲಿ ದೇವರಾಜ್ ಸ್ಪೋರ್ಟ್ಸ್​ ತಂಡದ ಪರ ಕಣಕ್ಕಿಳಿದ 15 ವರ್ಷದ ಆರಂಭಿಕ ಆಟಗಾರ ತನ್ಮಯ್ ಸಿಂಗ್ ಬರೋಬ್ಬರಿ 268 ರನ್​ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ.

ಆರ್​ಆರ್​ಸಿಎ ತಂಡದ ವಿರುದ್ದ ಮೊದಲು ಬ್ಯಾಟ್ ಮಾಡಿದ ದೇವರಾಜ್ ಸ್ಪೋರ್ಟ್ಸ್​ ತಂಡವು ಭರ್ಜರಿ ಬ್ಯಾಟಿಂಗ್ ನಡೆಸಿತು. ಆರಂಭಿಕನಾಗಿ ಕಣಕ್ಕಿಳಿದ ನಾಯಕ ತನ್ಮಯ್ ಸಿಂಗ್ ಅಮೋಘ ಇನಿಂಗ್ಸ್ ಆಡಿದರು. 111 ಎಸೆತಗಳನ್ನು ಎದುರಿಸಿದ ತನ್ಮಯ್ 27 ಸಿಕ್ಸರ್ ಹಾಗೂ 19 ಫೋರ್​ಗಳನ್ನು ಬಾರಿಸಿದರು. ಈ ಮೂಲಕ ಬರೋಬ್ಬರಿ 268 ರನ್​ಗಳಿಸಿ ಹೊಸ ದಾಖಲೆ ಬರೆದರು.

ತನ್ಮಯ್ ಸಿಂಗ್ ಸಿಡಿಸಿದ ಡಬಲ್​ ಸೆಂಚುರಿ ನೆರವಿನಿಂದ ದೇವರಾಜ್ ಸ್ಪೋರ್ಟ್ಸ್ ಕ್ಲಬ್‌ ತಂಡವು 35 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 464 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್‌ಆರ್‌ಸಿಎ ತಂಡ 32 ಓವರ್‌ಗಳಲ್ಲಿ ಕೇವಲ 236 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ದೇವರಾಜ್ ಸ್ಪೋರ್ಟ್ಸ್ ಕ್ಲಬ್ 228 ರನ್ ಗಳ ಭರ್ಜರಿ ಜಯ ಸಾಧಿಸಿತು. ತನ್ಮಯ್ ಸಿಂಗ್ ಏಕಾಂಗಿಯಾಗಿ ಕಲೆಹಾಕಿದ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಎದುರಾಳಿ ತಂಡ ಆಲೌಟ್ ಆಗಿರುವುದು ವಿಶೇಷ.

ಇದನ್ನೂ ಓದಿ
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

ಈ ಭರ್ಜರಿ ದ್ವಿಶತಕದೊಂದಿಗೆ ತನ್ಮಯ್ ಸಿಂಗ್ ಸೀಮಿತ ಓವರ್​ಗಳಲ್ಲಿ ಅತ್ಯಧಿಕ ರನ್​ಗಳಿಸಿ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಏಕೆಂದರೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ಈ ಹಿಂದೆ 264 ರನ್​ ಕಲೆಹಾಕಿ ದಾಖಲೆ ಬರೆದಿದ್ದರು. ಇದೀಗ ತನ್ಮಯ್ ಸಿಂಗ್ 268 ರನ್​ ಬಾರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದಾಗ್ಯೂ ಇದು ವಿಶ್ವ ದಾಖಲೆಯಾಗಿ ಪರಿಗಣಿಸಲಾಗುವುದಿಲ್ಲ.

ಒಟ್ಟಿನಲ್ಲಿ ದೇಶೀಯ ಕ್ರಿಕೆಟ್​ನಲ್ಲಿ 268 ರನ್​ ಬಾರಿಸುವ ಮೂಲಕ ತನ್ಮಯ್ ಸಿಂಗ್ ಇಡೀ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ 15 ವರ್ಷದ ಯುವ ಆಟಗಾರ ಮುಂಬರುವ ದಿನಗಳಲ್ಲಿ ಅಂಡರ್ 19 ಟೀಮ್ ಇಂಡಿಯಾ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.