ಟೀಮ್ ಇಂಡಿಯಾ ಕೋಚ್​ ಗೌತಮ್ ಗಂಭೀರ್​ಗೆ ಕೊಲೆ ಬೆದರಿಕೆ

Team India Coach Gautam Gambhir: ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಬುಧವಾರ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಈ ಪೋಸ್ಟ್ ಬೆನ್ನಲ್ಲೇ ಇದೀಗ ಗಂಭೀರ್​ಗೆ ಐಸಿಸ್ ಕಾಶ್ಮೀರ ಖಾತೆಯಿಂದ ಜೀವ ಬೆದರಿಕೆಯೊಡ್ಡಲಾಗಿದೆ.

ಟೀಮ್ ಇಂಡಿಯಾ ಕೋಚ್​ ಗೌತಮ್ ಗಂಭೀರ್​ಗೆ ಕೊಲೆ ಬೆದರಿಕೆ
Gautam Gambhir

Updated on: Apr 24, 2025 | 9:57 AM

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರಿಗೆ “ಐಸಿಸ್ ಕಾಶ್ಮೀರ” ಖಾತೆಯಿಂದ ಕೊಲೆ ಬೆದರಿಕೆ ಬಂದಿದೆ. ಇಮೇಲ್ ಸಂದೇಶದ ಮೂಲಕ ಜೀವ ಬೆದರಿಕೆಯೊಡ್ಡಲಾಗಿದ್ದು, ಈ ಬಗ್ಗೆ ದೆಹಲಿಯ ರಾಜೇಂದ್ರ ನಗರ ಠಾಣೆಯಲ್ಲಿ ಗಂಭೀರ್ ದೂರು ನೀಡಿದ್ದಾರೆ.

ಗೌತಮ್ ಗಂಭೀರ್ ಅವರು ಬುಧವಾರ ದೆಹಲಿ ಪೊಲೀಸರನ್ನು ಸಂಪರ್ಕಿಸಿ, ಎಫ್‌ಐಆರ್ ದಾಖಲಿಸಿದ್ದಾರೆ. ಹಾಗೆಯೇ ತಮ್ಮ ಕುಟುಂಬದ ಭದ್ರತೆಯನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ ಎಂದು ರಾಜೇಂದ್ರ ನಗರ ಠಾಣೆ ಅಧಿಕಾರಿ ತಿಳಿಸಿದ್ದಾರೆ.

ಏಪ್ರಿಲ್ 22 ರಂದು ಗಂಭೀರ್‌ಗೆ ಎರಡು ಬೆದರಿಕೆ ಇಮೇಲ್‌ಗಳು ಬಂದಿದ್ದವು. ಒಂದು ಇಮೇಲ್ ಮಧ್ಯಾಹ್ನ ಮತ್ತು ಇನ್ನೊಂದು ಸಂಜೆ ಬಂದಿತ್ತು. ಎರಡೂ ಸಂದೇಶಗಳಲ್ಲೂ ಐ ಕಿಲ್ಲ್ ಯು ಎಂದು ಬರೆಯಲಾಗಿತ್ತು.  ಈ ಬೆದರಿಕೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಗೌತಮ್ ಗಂಭೀರ್ ದೆಹಲಿಯ ರಾಜೇಂದ್ರ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಅಂದಹಾಗೆ ಟೀಮ್ ಇಂಡಿಯಾ ಕೋಚ್​ಗೆ ಇಂತಹದೊಂದು ಕೊಲೆ ಬೆದರಿಕೆ ಸಂದೇಶಗಳು ಬರುತ್ತಿರುವುದು ಇದೇ ಮೊದಲೇನಲ್ಲ. 2021 ರಲ್ಲಿ ಬಿಜೆಪಿ ಸಂಸರಾಗಿದ್ದ ವೇಳೆ ಗಂಭೀರ್​ಗೆ ಇದೇ ರೀತಿಯ ಇಮೇಲ್ ಬಂದಿತ್ತು.

ಇದೀಗ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ “ಐಸಿಸ್ ಕಾಶ್ಮೀರ” ಖಾತೆಯ ಹೆಸರಿನಿಂದ ಗೌತಮ್ ಗಂಭೀರ್​ಗೆ ಜೀವ ಬೆದರಿಕೆಯ ಸಂದೇಶ ಬಂದಿದೆ.

ಇದಕ್ಕೂ ಮುನ್ನ ಗೌತಮ್ ಗಂಭೀರ್ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು.

ಇದನ್ನೂ ಓದಿ: ಪಹಲ್ಗಾಮ್ ದಾಳಿಯಲ್ಲಿ ನನ್ನ ದೇಶದ ಕೈವಾಡವಿದೆ: ಪಾಕ್ ಕ್ರಿಕೆಟಿಗನ ಹೇಳಿಕೆ..!

ಮೃತರ ಕುಟುಂಬಗಳಿಗಾಗಿ ಪ್ರಾರ್ಥಿಸುತ್ತೇನೆ. ಇದಕ್ಕೆ ಕಾರಣರಾದವರು ಬೆಲೆ ತೆರಬೇಕಾಗುತ್ತದೆ. ಇದಕ್ಕೆ ಪ್ರತೀಕಾರವಾಗಿ ಭಾರತ ತಿರುಗೇಟು ನೀಡಲಿದೆ ಎಂದು ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ “ಐಸಿಸ್ ಕಾಶ್ಮೀರ” ಹೆಸರಿನ ಮೇಲ್ ಐಡಿಯಿಂದ ಗೌತಮ್ ಗಂಭೀರ್​ಗೆ ಕೊಲೆ ಬೆದರಿಕೆಯೊಡ್ಡಲಾಗಿದೆ.

 

 

 

Published On - 9:46 am, Thu, 24 April 25