IND vs AUS 2nd Test: ಆಸ್ಟ್ರೇಲಿಯಾ ವಿರುದ್ಧ ಗೆದ್ದ ತಕ್ಷಣ ಟೀಮ್ ಇಂಡಿಯಾ ಆಟಗಾರರು ಭೇಟಿ ನೀಡಿದ್ದು ಎಲ್ಲಿಗೆ ನೋಡಿ
India vs Australia 2nd Test: ಮೂರೇ ದಿನಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಮುಕ್ತಾಯಗೊಂಡ ಪರಿಣಾಮ ಆಟಗಾರರಿಗೆ ಈಗ ವಿಶ್ರಾಂತಿಮ ಸಮಯ. ಇದರ ನಡುವೆ ಭಾರತ ತಂಡದ ಆಟಗಾರರು ನವ ದೆಹಲಿಯಲ್ಲಿರುವ ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ (India vs Australia) ಕ್ರಿಕೆಟ್ ತಂಡ ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ಮುಕ್ತಾಯಗೊಂಡ ಎರಡನೇ ಟೆಸ್ಟ್ನಲ್ಲಿ 6 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ರೋಹಿತ್ ಶರ್ಮಾ ಪಡೆ ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿತು. ಎರಡನೇ ಇನ್ನಿಂಗ್ಸ್ನಲ್ಲಿ ರವೀಂದ್ರ ಜಡೇಜಾ (Ravindra Jadeja) ಸ್ಪಿನ್ ದಾಳಿಗೆ ತತ್ತರಿಸಿದ ಕಾಂಗರೂ ಪಡೆ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಆಸೀಸ್ ಪಡೆಯನ್ನು ಕೇವಲ 118 ರನ್‌ಗಳಿಗೆ ಆಲೌಟ್ ಮಾಡಿ 120 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಸುಲಭ ಜಯ ಸಾಧಿಸಿತು. ಟೀಮ್ ಇಂಡಿಯಾ (Team India) ಗೆದ್ದ ಬಳಿಕ ಎಲ್ಲ ಆಟಗಾರರು ವಿಶೇಷ ಜಾಗಕ್ಕೆ ಭೇಟಿ ನೀಡಿದ್ದಾರೆ.
ಮೂರೇ ದಿನಕ್ಕೆ ಟೆಸ್ಟ್ ಮುಕ್ತಾಯಗೊಂಡ ಪರಿಣಾಮ ಆಟಗಾರರಿಗೆ ಈಗ ವಿಶ್ರಾಂತಿಮ ಸಮಯವಾಗಿದೆ. ಮುಂದಿನ ಪಂದ್ಯ ಆರಂಭವಾಗುವುದು ಮಾರ್ಚ್ 1ರಿಂದ. ಹೀಗಾಗಿ ಇನ್ನೆರಡು ದಿನಗಳ ಕಾಲ ಆಟಗಾರರು ನವ ದೆಹಲಿಯಲ್ಲೇ ಉಳಿಯಲಿದ್ದಾರೆ. ಇದರ ನಡುವೆ ಭಾರತ ತಂಡದ ಎಲ್ಲ ಆಟಗಾರರು ಭಾನುವಾರ ಮಧ್ಯಾಹ್ನದ ಮೇಲೆ ನವ ದೆಹಲಿಯಲ್ಲಿರುವ ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. ಭಾರತ ತಂಡದ ಆಟಗಾರರು ಮ್ಯೂಸಿಯಮ್ಗೆ ಹೋಗಿರುವ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಅಧಿಕೃತ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿದೆ.
A walk through the corridors of history!
Exploring the rich legacy of India’s Prime Ministers, who rebuilt the nation post Independence. #TeamIndia had an immersive experience at the fascinating @PMSangrahalaya, which celebrates and showcases the journey of India. @PMOIndia pic.twitter.com/bcFICzXQOJ
— BCCI (@BCCI) February 19, 2023
ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಈ ಸಂದರ್ಭದಲ್ಲಿ ಸಾತ್ ನೀಡಿದ್ದಾರೆ. ಸ್ವಾತಂತ್ರ್ಯ ಬಳಿಕದ ಭಾರತವನ್ನು ನಿರ್ಮಿಸಿದ ಪ್ರಧಾನ ಮಂತ್ರಿಗಳ ಕುರಿತ ಮಾಹಿತಿಯನ್ನು ನೀಡುವ ಸಂಗ್ರಹಾಲಯ ಇದಾಗಿದೆ. ಬಿಸಿಸಿಐ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದು ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ರಾಹುಲ್ ದ್ರಾವಿಡ್ ಸೇರಿದಂತೆ ಅನೇಕ ಪ್ಲೇಯರ್ಸ್ ವಸ್ತು ಸಂಗ್ರಹಾಲಯದ ವಸ್ತುಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ. ಟೀಮ್ ಇಂಡಿಯಾ ಆಟಗಾರರನ್ನು ಕಂಡು ಅಭಿಮಾನಿಗಳು ಸೆಲ್ಫೀಗಾಗಿ ಮುಗಿಬಿದ್ದ ಘಟನೆ ಕೂಡ ನಡೆಯಿತು.
A trip to cherish! #TeamIndia visited the captivating @PMSangrahalaya, a unique museum dedicated to the Prime Ministers of India, illustrating the journey of India after Independence. @PMOIndia
Stay tuned for the video?. pic.twitter.com/NsUT2wWseW
— BCCI (@BCCI) February 19, 2023
ಎರಡನೇ ಟೆಸ್ಟ್ ಪಂದ್ಯ ಹೇಗಿತ್ತು?:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಉಸ್ಮಾನ್ ಖವಾಜಾ ಅವರ 81 ರನ್ ಹಾಗೂ ಪೀಟರ್ ಹ್ಯಾಡ್ಸ್ಕಾಂಬ್ ಅವರ ಅಜೇಯ 72 ರನ್‌ಗಳ ನೆರವಿನಿಂದ 263 ರನ್ ಗಳಿಸಿತು. ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತರೆ, ರವಿಚಂದ್ರನ್ ಅಶ್ವಿನ್ ಹಾಗೂ ಜಡೇಜಾ ತಲಾ 3 ವಿಕೆಟ್ ಪಡೆದರು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಟೀಮ್ ಇಂಡಿಯಾ 150 ರನ್‌ಗಳ ಒಳಗೆ ಏಳು ವಿಕೆಟ್ಗಳನ್ನು ಕಳೆದುಕೊಂಡು ಅಲ್ಲ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿತ್ತು. ನಂತರ ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ 114 ರನ್ ಜೊತೆಯಾಟ ಆಡಿದ ಕುಸಿಯುತ್ತಿದ್ದ ಭಾರತವನ್ನು ಮೇಲೆತ್ತಿದರು. ಇದರಿಂದ ತಂಡ 250 ರನ್ ಗಡಿ ದಾಟಿತು.
ಅಕ್ಷರ್ 115 ಎಸೆತಗಳಲ್ಲಿ 74 ರನ್, ಅಶ್ವಿನ್ 37 ರನ್ ಮಾಡಿ ಸಾಥ್ ನೀಡಿದರು. ಭಾರತ 83.3 ಓವರ್ಗಳಲ್ಲಿ 262 ರನ್ಗೆ ಇನಿಂಗ್ಸ್ ಮುಗಿಸಿತು. ನೇಥನ್ ಲಿಯಾನ್ 5 ವಿಕೆಟ್ ಪಡೆದರು. 1 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಶುರು ಮಾಡಿದ ಆಸೀಸ್ ಪಡೆ ಜಡೇಜಾ ವಿರುದ್ಧ ಸಂಪೂರ್ಣವಾಗಿ ಕುಸಿಯಿತು. ಈ ಪಂದ್ಯದಲ್ಲಿ ಜಡೇಜಾ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿ 42 ರನ್‌ಗಳಿಗೆ 7 ವಿಕೆಟ್ ಪಡೆದುಕೊಂಡರು. ಈ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಗೆಲ್ಲಲು 114 ರನ್‌ಗಳ ಸುಲಭ ಗುರಿ ನಿಗದಿಪಡಿಸಲು ಕಾರಣವಾದರು. ಈ ಗುರಿಯನ್ನು ಭಾರತ 4 ವಿಕೆಟ್ ಕಳೆದುಕೊಂಡು 26.4 ಓವರ್ನಲ್ಲಿ ಮುಟ್ಟು 6 ವಿಕೆಟ್‌ಗಳಿಂದ ಗೆದ್ದು ಬೀಗಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:46 am, Mon, 20 February 23




