AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final 2023: ಆಫ್ರಿಕಾ ಬಳಿ ಇದ್ದ ಚೋಕರ್ಸ್​ ಪಟ್ಟವನ್ನು ತನ್ನದಾಗಿಸಿಕೊಂಡ ಟೀಂ ಇಂಡಿಯಾ

WTC Final 2023: ಐಸಿಸಿ ಟೂರ್ನಮೆಂಟ್‌ಗಳಲ್ಲಿ ಟೀಂ ಇಂಡಿಯಾ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದರೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಇಷ್ಟು ಬೇಸರವಾಗುತ್ತಿರಲಿಲ್ಲವೇನೋ.

WTC Final 2023: ಆಫ್ರಿಕಾ ಬಳಿ ಇದ್ದ ಚೋಕರ್ಸ್​ ಪಟ್ಟವನ್ನು ತನ್ನದಾಗಿಸಿಕೊಂಡ ಟೀಂ ಇಂಡಿಯಾ
ವಿರಾಟ್ ಕೊಹ್ಲಿ
ಪೃಥ್ವಿಶಂಕರ
|

Updated on: Jun 11, 2023 | 6:53 PM

Share

ಲಂಡನ್‌ನಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ಸೌತಾಂಪ್ಟನ್‌ನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಅದೇ ಘಟನೆ ಈಗ ಮತ್ತೊಮ್ಮೆ ನಡೆದಿದೆ. ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (World Test Championship final) ಫೈನಲ್ ತಲುಪಿದ್ದ ಭಾರತ ಕ್ರಿಕೆಟ್ ತಂಡಕ್ಕೆ 2021ರಲ್ಲಿ ಎದುರಾಗಿದ್ದ ಸೋಲಿನ ಮುಜುಗರವೇ ಈ ಬಾರಿಯೂ ಎದುರಾಗಿದೆ. ಮತ್ತೊಮ್ಮೆ ಟೀಂ ಇಂಡಿಯಾ (Team India) ತನ್ನ ಅನುಭವಿ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಭಾರವನ್ನು ಹೊರಬೇಕಾಯಿತು. ಆಸ್ಟ್ರೇಲಿಯಾ ವಿರುದ್ಧದ (India vs Australia) ಫೈನಲ್‌ನ ಕೊನೆಯ ದಿನದಂದು, ಟೀಂ ಇಂಡಿಯಾ ಕೇವಲ 234 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ಪಂದ್ಯದ ಜೊತೆಗೆ 209 ರನ್‌ಗಳಿಂದ ಪ್ರಶಸ್ತಿಯನ್ನು ಕಳೆದುಕೊಂಡಿತು. ಈ ಮೂಲಕ ಕಳೆದ 10 ವರ್ಷಗಳಿಂದ ಭಾರತ ತಂಡ ಎದುರಿಸುತ್ತಿರುವ ಐಸಿಸಿ ಟ್ರೋಫಿಯ ಬರ ಇನ್ನೂ ಮುಂದುವರೆದಿದೆ. 2013ರಲ್ಲಿ ಕೊನೆಯ ಬಾರಿಗೆ ಐಸಿಸಿ (ICC) ಟೂರ್ನಿ ಗೆದ್ದಿದ್ದ ಟೀಂ ಇಂಡಿಯಾ ಆ ನಂತರ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಬಹುಪಾಲು ಐಸಿಸಿ ಟೂರ್ನಿಗಳಲ್ಲಿ ನಾಕೌಟ್ ಸುತ್ತಿಗೆ ಎಂಟ್ರಿಕೊಡುವ ಟೀಂ ಇಂಡಿಯಾ ಫೈನಲ್ ಹಂತದಲ್ಲಿ ಸೋತು, ಪ್ರಶಸ್ತಿಯಿಂದ ವಂಚಿತವಾಗುತ್ತಿದೆ. ಈ ಮೂಲಕ ವಿಶ್ವ ಕ್ರಿಕೆಟ್​ನ ಹೊಸ ಚೋಕರ್ಸ್​ ಎಂಬ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

ಟೀಂ ಇಂಡಿಯಾ ಕಳೆದ 10 ವರ್ಷಗಳಲ್ಲಿ ಸತತ 9 ನೇ ಬಾರಿಗೆ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಅದರಲ್ಲಿ 8 ನಾಕ್ ಔಟ್ ಪಂದ್ಯಗಳಾಗಿವೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಕಳೆದ 10 ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ಯಾವ ರೀತಿ ಪ್ರದರ್ಶನ ನೀಡಿದೆ ಎಂಬುದನ್ನು ನೋಡುವುದಾದರೆ..

WTC Final 2023: ಬೇಡದ ಶಾಟ್ ಆಡಿ ಭಾರತದ ಸೋಲಿಗೆ ಕಾರಣರಾದ ರೋಹಿತ್, ಪೂಜಾರ, ಕೊಹ್ಲಿ..!

ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ಸೋಲು

2013ರಲ್ಲಿ ಭಾರತ ಕೊನೆಯದಾಗಿ ಐಸಿಸಿ ಟೂರ್ನಿಯನ್ನು ಗೆದ್ದಿತ್ತು. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಆ ಬಳಿಕ ಟೀಂ ಇಂಡಿಯಾ ಮತ್ತೊಮ್ಮೆ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. 2014ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಸೋತ ಭಾರತ 2015ರ ಏಕದಿನ ವಿಶ್ವಕಪ್​ನ ಸೆಮಿಫೈನಲ್‌ನಲ್ಲೂ ಸೋಲು ಕಂಡಿತ್ತು. ಆ ಬಳಿಕ 2019 ರ ಏಕದಿನ, 2021ರ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಸೋಲುಕಂಡಿತ್ತು.ಇಷ್ಟು ಸಾಲದೆಂಬಂತೆ 2021 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಿವೀಸ್ ವಿರುದ್ಧ ಸೋತಿದ್ದ ಭಾರತ, 2022ರ ಟಿ20 ವಿಶ್ವ ಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್​ಗಳ ಹೀನಾಯ ಸೋಲುಂಡಿತ್ತು. ಇದೀಗ 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮತ್ತೊಮ್ಮೆ ಎಡವಿದೆ.

10 ವರ್ಷಗಳಲ್ಲಿ 4 ಫೈನಲ್‌ಗಳಲ್ಲಿ ಸೋತ ಭಾರತ

ಐಸಿಸಿ ಟೂರ್ನಮೆಂಟ್‌ಗಳಲ್ಲಿ ಟೀಂ ಇಂಡಿಯಾ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದರೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಇಷ್ಟು ಬೇಸರವಾಗುತ್ತಿರಲಿಲ್ಲವೇನೋ. ಆದರೆ ಐಸಿಸಿ ಟೂರ್ನಿಯಲ್ಲಿ ನಾಲ್ಕು ಬಾರಿ ಫೈನಲ್‌ನಲ್ಲಿ ಸೋತಿದೆ. ಇದು ಟೀಂ ಇಂಡಿಯಾ ಅಭಿಮಾನಿಗಳಿಗೆ ನೋವುಂಟು ಮಾಡಿದೆ.ಹೀಗಾಗಿ ಟೀಂ ಇಂಡಿಯಾ ಪ್ರಶಸ್ತಿ ಸುತ್ತಿನಲ್ಲಿ ಸೋತು ಹೊರಬೀಳುತ್ತಿರುವುದು ಅದನ್ನು ಚೋಕರ್ಸ್​ ತಂಡ ಕರೆಯಲು ಅನುವು ಮಾಡಿಕೊಡುತ್ತಿದೆ. ಒಂದು ಕಾಲದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಚೋಕರ್ಸ್ ಎಂದು ಕರೆಯಲಾಗುತ್ತಿತ್ತು. ಈ ತಂಡ ಕೂಡ ಐಸಿಸಿ ಟೂರ್ನಿಗಳ ನಿರ್ಣಾಯಕ ಪಂದ್ಯಗಳಲ್ಲಿ ಸೋತು ಪ್ರಶಸ್ತಿಯಿಂದ ವಂಚಿತವಾಗುತ್ತಿತ್ತು. ಈಗ ಟೀಂ ಇಂಡಿಯಾದ ಪ್ರದರ್ಶನವನ್ನು ನೋಡಿದರೆ, ಈಗ ಈ ಅನಗತ್ಯ ಟ್ಯಾಗ್ ಅನ್ನು ಟೀಂ ಇಂಡಿಯಾ ತನ್ನ ಖಾತೆಗೆ ಹಾಕಿಕೊಳ್ಳುತ್ತಿದೆ ಎಂಬುದನ್ನು ತೋರುತ್ತಿದೆ. ಆದರೆ ಸೋಲಿಗೆ ಕಾರಣವೇನು ಮತ್ತು ಅದಕ್ಕೆ ಯಾರು ಹೊಣೆ ಎಂಬುದು ಇಲ್ಲಿ ಪ್ರಶ್ನೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ