ಸೆಮಿಫೈನಲ್​ಗೂ ಮುನ್ನ ಟೀಮ್ ಇಂಡಿಯಾದ ಅತೀ ದೊಡ್ಡ ‘ಚಿಂತೆ’ ಬಹಿರಂಗ

India vs England Semi Final: ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸಲಿದೆ. ಏಕೆಂದರೆ ಈ ಪಂದ್ಯದ ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಇರುವ ಸಾಧ್ಯತೆಯಿದ್ದು, ಇದರಿಂದ ಬೌಲಿಂಗ್ ಮಾಡುವುದು ಕಷ್ಟಕರ.

ಸೆಮಿಫೈನಲ್​ಗೂ ಮುನ್ನ ಟೀಮ್ ಇಂಡಿಯಾದ ಅತೀ ದೊಡ್ಡ ಚಿಂತೆ ಬಹಿರಂಗ
Team India

Updated on: Mar 05, 2026 | 8:57 AM

ಮಾರ್ಚ್ 5, 2026 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ನಿಮಿತ್ತ ನಡೆದ ಸುದ್ಧಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಕಾಣಿಸಿಕೊಂಡಿದ್ದರು. ಈ ವೇಳೆ ಮಾತನಾಡಿದ ಅವರು ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸಲಿದೆ ಎಂದಿದ್ದಾರೆ.

ವಾಖೆಂಡೆಯಂತಹ ಕ್ರೀಡಾಂಗಣದಲ್ಲಿ ಇಬ್ಬನಿಯು “ದೊಡ್ಡ ಆತಂಕ”ವಾಗಿದೆ. ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಇದು ಆಟದ ಮೇಲೆ ಭಾರಿ ಪ್ರಭಾವ ಬೀರುತ್ತದೆ ಎಂದು ಮೊರ್ಕೆಲ್ ಹೇಳಿದ್ದಾರೆ.

ಅಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಗೆಲ್ಲುವುದು ಮುಖ್ಯ. ಆದರೆ ಅದು ನಮ್ಮ ಕೈಯಲ್ಲಿ ಇಲ್ಲ. ಇದುವೇ ನಮ್ಮ ತಂಡದ ದೊಡ್ಡ ಚಿಂತೆ. ಏಕೆಂದರೆ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಕೂಡ ಮುಖ್ಯವಾಗುತ್ತದೆ. ಅದರಲ್ಲೂ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಗೆಲ್ಲುವುದು ಅನಿವಾರ್ಯ.

ಆದರೆ ಟಾಸ್ ಗೆಲ್ಲುವುದು ನಮ್ಮ ಕೈಯಲ್ಲಿ ಇಲ್ಲ. ಹೀಗಾಗಿ ಸೆಮಿಫೈನಲ್​ನಲ್ಲಿ ನಮ್ಮ ದೊಡ್ಡ ಆತಂಕವೇ ಅದದು. ಏಕೆಂದರೆ ಈ ಮೈದಾನದಲ್ಲಿ ದ್ವಿತೀಯ ಇನಿಂಗ್ಸ್​ನಲ್ಲಿ ಬೌಲಿಮಡಗ್ ಮಾಡುವುದು ಕಷ್ಟಕರ ಎಂದು ಮೊರ್ನೆ ಮೊರ್ಕೆಲ್ ಹೇಳಿದ್ದಾರೆ.

ಇನ್ನು ವಾಂಖೆಡೆ ಮೈದಾನದ ಆಯಾಮಗಳು ಚಿಕ್ಕದಾಗಿರುವುದರಿಂದ ಬೌಲರ್‌ಗಳಿಗೆ ತಪ್ಪು ಮಾಡಲು ಇಲ್ಲಿ ಅವಕಾಶ ಕಡಿಮೆ. ಚೆಂಡು ಇಲ್ಲಿ ವೇಗವಾಗಿ ಸಾಗುತ್ತದೆ. ಹಾಗೆಯೇ ಪಿಚ್‌ನಲ್ಲಿ “ಹೆಚ್ಚುವರಿ ಬೌನ್ಸ್” ಕೂಡ ಇರುತ್ತದೆ.

ಬೌಲರ್‌ಗಳು ಸರಿಯಾದ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಿದರೆ ಇದು ಸಹಕಾರಿ. ಇಲ್ಲದಿದ್ದರೆ ಬ್ಯಾಟರ್‌ಗಳು ಸುಲಭವಾಗಿ ರನ್ ಗಳಿಸಲಿದ್ದಾರೆ ಎಂದು ಮೊರ್ನೆ ಮೊರ್ಕೆಲ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಟಾಸ್ ಹೊರತುಪಡಿಸಿ, ಭಾರತವು ಫೀಲ್ಡಿಂಗ್‌ನಲ್ಲಿ 15-20 ರನ್‌ಗಳನ್ನು ಬಿಟ್ಟುಕೊಡುತ್ತಿರುವುದು ದೊಡ್ಡ ಹಿನ್ನಡೆ ಎಂದು  ಒಪ್ಪಿಕೊಂಡಿರುವ ಮೊರ್ನೆ ಮೊರ್ಕೆಲ್, ನಿರ್ಣಾಯಕ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ಕೂಡ ಪ್ರಧಾನ ಪಾತ್ರವಹಿಸಲಿದೆ ಎಂದಿದ್ದಾರೆ.

ಒಟ್ಟಿನಲ್ಲಿ ವಾಂಖೆಡೆ ಮೈದಾನದ ಪಂದ್ಯಗಳಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸುವುದರಿಂದ, ಟೀಮ್ ಇಂಡಿಯಾ ಟಾಸ್ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಳ್ಳಲಿದೆ ಎಂದು ಮೊರ್ನೆ ಮೊರ್ಕೆಲ್ ಪರೋಕ್ಷ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: IND vs ENG: ‘ನಾಣ್ಯ’ದಲ್ಲೇ ನಿರ್ಧಾರವಾಗಲಿದೆ ಪಂದ್ಯದ ಅರ್ಧ ಫಲಿತಾಂಶ

ಇದಾಗ್ಯೂ ಈ ಪಂದ್ಯದಲ್ಲಿ ಟಾಸ್ ಸೋತರೆ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸಿದರೆ ಪಂದ್ಯವನ್ನು ಗೆದ್ದುಕೊಳ್ಳಬಹುದು. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಬ್ಯಾಟರ್​ಗಳ ಅಬ್ಬರವನ್ನು ನಿರೀಕ್ಷಿಸಬಹುದಾಗಿದೆ.

Published On - 8:53 am, Thu, 5 March 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us