ಯಶ ಕಾಣದ ಪುನರಾಗಮನ; ಅಜಿಂಕ್ಯ ರಹಾನೆ ಮಹತ್ವದ ನಿರ್ಧಾರ
Ajinkya Rahane: ವಿಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲೂ ರಹಾನೆ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಕೆಲವು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ಬ್ರೇಕ್ ಪಡೆಯಲು ಮುಂದಾಗಿದ್ದಾರೆ.
ವರ್ಷಗಳಿಂದ ಟೀಂ ಇಂಡಿಯಾದಿಂದ (Team India) ಹೊರಗುಳಿದು ಮತ್ತೆ ತಂಡಕ್ಕೆ ಎಂಟ್ರಿಕೊಟ್ಟಿದ ಅಂಜಿಕ್ಯ ರಹಾನೆಯ (Ajinkya Rahane) ಪುನರಾಗಮನ ನಿರೀಕ್ಷಿತ ಯಶಸ್ಸನ್ನು ಪಡೆದುಕೊಳ್ಳಲಿಲ್ಲ. ಐಪಿಎಲ್ನಲ್ಲಿ (IPL 2023) ಮಿಂಚಿ ಮತ್ತೆ ಭಾರತ ಟೆಸ್ಟ್ ತಂಡಕ್ಕೆ ಉಪನಾಯಕನಾಗಿ ಆಯ್ಕೆಯಾಗಿದ್ದ ರಹಾನೆ, ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ವಿಂಡೀಸ್ ಪ್ರವಾಸಕ್ಕೂ ಮುನ್ನ ನಡೆದ ಡಬ್ಲ್ಯುಟಿಸಿ ಫೈನಲ್ನಲ್ಲಿ (WTC Final 2023) ಕಳಪೆ ಪ್ರದರ್ಶನ ನೀಡಿದ್ದ ರಹಾನೆ, ಆ ಬಳಿಕ ವಿಂಡೀಸ್ ವಿರುದ್ಧದ (India vs West Indies) ಎರಡು ಟೆಸ್ಟ್ ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಸಪ್ಪೆ ಪ್ರದರ್ಶನದೊಂದಿಗೆ ತವರಿಗೆ ಮರಳಿದ್ದ ರಹಾನೆ ಇದೀಗ ಕೆಲವು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ಬ್ರೇಕ್ ಪಡೆಯಲು ಮುಂದಾಗಿದ್ದಾರೆ.
ಅಜಿಂಕ್ಯ ರಹಾನೆ ಮಹತ್ವದ ನಿರ್ಧಾರ
ವಾಸ್ತವವಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ನಂತರ, ರಹಾನೆ ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ತೆರಳಬೇಕಾಗಿತ್ತುಯ. ಆದರೆ ರಹಾನೆ ತಮ್ಮ ಹೆಸರನ್ನು ಕ್ರಿಕೆಟ್ ಕ್ಲಬ್ ಲಿಸ್ಟೆಟರ್‌ಶೈರ್‌ನಿಂದ ಹಿಂಪಡೆದಿದ್ದಾರೆ. ರಹಾನೆ ಮತ್ತು ಲೀಸೆಸ್ಟರ್‌ಶೈರ್ ನಡುವೆ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ, ರಹಾನೆ ಮುಂದಿನ ತಿಂಗಳು ಮೆಟ್ರೋ ಬ್ಯಾಂಕ್ ಏಕದಿನ ಕಪ್‌ನಲ್ಲಿ ತಂಡವನ್ನು ಪ್ರತಿನಿಧಿಸಬೇಕಿತ್ತು. ಆದರೀಗ ಕ್ರಿಕೆಟ್‌ನಿಂದ ಕೊಂಚ ಸಮಯ ಹಿಂದೆ ಸರಿದಿರುವ ರಹಾನೆ, ಈ ವಿದೇಶಿ ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
WTC Final: ಧೋನಿ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕವೇ ಟೀಂ ಇಂಡಿಯಾಕ್ಕೆ ಅಜಿಂಕ್ಯ ರಹಾನೆ ಆಯ್ಕೆ..!
2 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ
ಈ ಬಗ್ಗೆ ಮಾಹಿತಿ ನೀಡಿರುವ ಲೀಸೆಸ್ಟರ್‌ಶೈರ್ ಕ್ಲಬ್ ತನ್ನ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ‘ ಒಪ್ಪಂದದ ಪ್ರಕಾರ ಅಜಿಂಕ್ಯ ರಹಾನೆ ಜೂನ್ ತಿಂಗಳಲ್ಲಿ ತಂಡ ಸೇರಿಕೊಳ್ಳಬೇಕಾಗಿತ್ತು. ಆದರೆ ರಾಷ್ಟ್ರೀಯ ಕರ್ತವ್ಯದ ಕಾರಣ ರಹಾನೆ ತಮ್ಮ ಹೆಸರನ್ನು ಹಿಂಪಡೆದಿದ್ದರು. ಇದೀಗ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ 2 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯುವ ಇಚ್ಛೆಯನ್ನು ರಹಾನೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈಗ ರಹಾನೆ ಜಾಗದಲ್ಲಿ ಪೀಟರ್ ಹ್ಯಾಂಡ್ಸ್‌ಕಾಂಬ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಜನವರಿಯಲ್ಲಿ ರಹಾನೆ, ಲೀಸೆಸ್ಟರ್‌ಶೈರ್‌ನೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರಂತೆ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಒಟ್ಟು 8 ಪ್ರಥಮ ದರ್ಜೆ ಪಂದ್ಯಗಳಿರುವ ರಾಯಲ್ ಲಂಡನ್ ಕಪ್ ಟೂರ್ನಿಯಲ್ಲಿ ರಹಾನೆ ತಂಡದ ಪರ ಆಡಬೇಕಿತ್ತು. ಆದರೆ ಭಾರತ ಟೆಸ್ಟ್ ತಂಡದಲ್ಲಿ ರಹಾನೆಗೆ ಅವಕಾಶ ಸಿಕ್ಕಿದ್ದರಿಂದ ಅವರು ಕೌಂಟಿ ತಂಡವನ್ನು ಸೇರಲು ಸಾಧ್ಯವಾಗಲಿಲ್ಲ.
ರಹಾನೆ ವೃತ್ತಿಜೀವನ
ರಹಾನೆ ಇದುವರೆಗೆ 85 ಟೆಸ್ಟ್, 90 ಏಕದಿನ ಮತ್ತು 20 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ರಹಾನೆ ಟೆಸ್ಟ್ನಲ್ಲಿ 5077 ರನ್, ಏಕದಿನದಲ್ಲಿ 2962 ರನ್ ಮತ್ತು ಟಿ20ಯಲ್ಲಿ 365 ರನ್ ಕಲೆಹಾಕಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ