AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆದ್ದವರಿಗೆ ಏಕದಿನ ಸರಣಿ; ಸರಣಿ ನಿರ್ಧಾರಕ ಪಂದ್ಯಕ್ಕೆ ಮಳೆಕಾಟ? ಇಲ್ಲಿದೆ ಟ್ರಿನಿಡಾಡ್‌ ಹವಾಮಾನ ವರದಿ

IND vs WI 3rd ODI, Trinidad Weather Report: ಬಾರ್ಬಡೋಸ್‌ನಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲೂ ಮಳೆಯ ಹಸ್ತಕ್ಷೇಪವಿತ್ತು. ಇದೀಗ ಮಂಗಳವಾರ ಟ್ರಿನಿಡಾಡ್‌ನಲ್ಲಿ ನಡೆಯಲ್ಲಿರುವ ಮೂರನೇ ಏಕದಿನ ಪಂದ್ಯದಲ್ಲೂ ಅದೇ ರೀತಿಯ ಪರಿಸ್ಥಿತಿಗಳನ್ನು ನಿರೀಕ್ಷಿಸಲಾಗಿದೆ.

ಗೆದ್ದವರಿಗೆ ಏಕದಿನ ಸರಣಿ; ಸರಣಿ ನಿರ್ಧಾರಕ ಪಂದ್ಯಕ್ಕೆ ಮಳೆಕಾಟ? ಇಲ್ಲಿದೆ ಟ್ರಿನಿಡಾಡ್‌ ಹವಾಮಾನ ವರದಿ
ಟ್ರಿನಿಡಾಡ್‌ ಹವಾಮಾನ ವರದಿImage Credit source: insidesport
ಪೃಥ್ವಿಶಂಕರ
|

Updated on:Jul 31, 2023 | 1:25 PM

Share

ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ (India vs West Indies), ಎರಡನೇ ಏಕದಿನ ಪಂದ್ಯದಲ್ಲಿ ಸೋಲು ಕಂಡಿದೆ . ಟೀಂ ಇಂಡಿಯಾ (Team India) ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದ ವೆಸ್ಟ್ ಇಂಡೀಸ್ ತಂಡ ಏಕದಿನ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಹೀಗಾಗಿ ಸರಣಿ ನಿರ್ಧಾರಕ ಪಂದ್ಯವಾದ 3ನೇ ಏಕದಿನ ಪಂದ್ಯದತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಆದರೆ ಮೂರನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳು ಹೆಚ್ಚಿವೆ. ವಾಸ್ತವವಾಗಿ ಬಾರ್ಬಡೋಸ್‌ನಲ್ಲಿ (Barbados) ನಡೆದ 2 ನೇ ಏಕದಿನ ಪಂದ್ಯದಲ್ಲೂ ಮಳೆಯ ಹಸ್ತಕ್ಷೇಪವಿತ್ತು. ಹೀಗಾಗಿ ಎರಡು ಬಾರಿ ಪಂದ್ಯವನ್ನು ಸ್ಥಗಿತಗೊಳಿಸಬೇಕಾಯಿತು. ಇದೀಗ ಮಂಗಳವಾರ ಟ್ರಿನಿಡಾಡ್‌ನಲ್ಲಿ (Tarouba Trinidad) ನಡೆಯಲ್ಲಿರುವ ಮೂರನೇ ಏಕದಿನ ಪಂದ್ಯದಲ್ಲೂ ಅದೇ ರೀತಿಯ ಪರಿಸ್ಥಿತಿಗಳನ್ನು ನಿರೀಕ್ಷಿಸಲಾಗಿದೆ.

ಆಗಸ್ಟ್ 01 ರಂದು, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಟ್ರಿನಿಡಾಡ್‌ನ ತರೂಬಾದಲ್ಲಿರುವ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸರಣಿಯನ್ನು ತನ್ನದಾಗಿಸಿಕೊಳ್ಳಬೇಕೆಂದರೆ ಉಭಯ ತಂಡಗಳಿಗೂ ಈ ಗೆಲುವು ಅವಶ್ಯಕವಾಗಿದೆ. ವಿಶ್ವಕಪ್​ಗೂ ಮುನ್ನ ಈ ಸರಣಿಯನ್ನು ಸಿದ್ಧತೆಯಾಗಿ ಪರಿಗಣಿಸಿರುವ ಟೀಂ ಇಂಡಿಯಾಕ್ಕೆ ಈ ಸರಣಿ ಗೆಲುವು ಬಹಳ ಮಹತ್ವದ್ದಾಗಿದೆ. ಇತ್ತ ಏಕದಿನ ವಿಶ್ವಕಪ್​ನಿಂದ ಹೊರಬಿದ್ದಿರುವ ವಿಂಡೀಸ್ ತಂಡಕ್ಕೆ ತವರಿನಲ್ಲಿ ಟೀಂ ಇಂಡಿಯಾವನ್ನು ಮಣಿಸಿದ ನಿರಾಳತೆ ಸಿಗಲಿದೆ.

IND vs WI: ಸೂರ್ಯ, ಸಂಜುಗೆ ಮತ್ತೊಂದು ಅವಕಾಶ? ಸರಣಿ ನಿರ್ಧಾರಕ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಇಲ್ಲಿದೆ

ಟ್ರಿನಿಡಾಡ್ ಹವಾಮಾನ ಮುನ್ಸೂಚನೆ

ಆದರೆ ಈ ಮಹತ್ವದ ಪಂದ್ಯಕ್ಕೂ ಮುನ್ನ ಟ್ರಿನಿಡಾಡ್​ನ ಹವಾಮಾನ ವರದಿ ಹೊರಬಿದ್ದಿದ್ದು, ಪಂದ್ಯದ ದಿನ ಅಂದರೆ ಆಗಸ್ಟ್ 1 ರ ಮಂಗಳವಾರದಂದು ದಿನವಿಡಿ ಮೋಡ ಕವಿದ ವಾತಾವರಣ ಇರಲಿದೆ. ಹಾಗೆಯೇ 34ºC ಹೆಚ್ಚಿನ ತಾಪಮಾನವನ್ನು ನಿರೀಕ್ಷಿಸಲಾಗಿದೆ. ರಾತ್ರಿ ವೇಳೆಗೆ 25ºC ನ ಕಡಿಮೆ ತಾಪಮಾನದೊಂದಿಗೆ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಆದಾಗ್ಯೂ, ಸಂಜೆ ಸಮಯದಲ್ಲಿ 24 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದರೂ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯೂ ಹೆಚ್ಚಿದೆ ಎಂದು ವರದಿಯಾಗಿದೆ.

ಏಕದಿನ ಸರಣಿಗೆ ಉಭಯ ತಂಡಗಳು

ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್, ಜಯದೇವ್ ಉನದ್ಕಟ್, ಮುಖೇಶ್ ಕುಮಾರ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್

ವೆಸ್ಟ್ ಇಂಡೀಸ್: ಶಾಯ್ ಹೋಪ್ (ನಾಯಕ), ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಶಿಮ್ರಾನ್ ಹೆಟ್ಮೆಯರ್, ಅಲಿಕ್ ಅಥಾನಾಜೆ, ರೋವ್‌ಮನ್ ಪೊವೆಲ್, ಕೀಸಿ ಕಾರ್ಟಿ, ರೊಮಾರಿಯೊ ಶೆಫರ್ಡ್, ಗುಡಕೇಶ್ ಮೋಥಿ, ಅಲ್ಜಾರಿ ಜೋಸೆಫ್, ಒಶಾನೆ ಥಾಮಸ್, ಜೇಡನ್ ಸೀಲ್ಸ್, ಕೆವಿನ್ ಸಿಂಕ್ಲೇರ್, ಡೊಮಿನಿಕ್ ಡ್ರೇಕ್ಸ್, ಯಾನಿಕ್ ಕ್ಯಾರಿಯಾ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:24 pm, Mon, 31 July 23

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ