AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಸ್ ಗೇಲ್ ಭರ್ಜರಿ ಹಿಟ್​ನೊಂದಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದ ಪೇಟ್ರಿಯಟ್ಸ್‌

ಫೈನಲ್ ಪಂದ್ಯದಲ್ಲಿ ಟ್ರಿನ್​ಬಾಗೊ ನೈಟ್​ ರೈಡರ್ಸ್​ ವಿರುದ್ದ ಗೆಲುವು ದಾಖಲಿಸುವ ಮೂಲಕ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಟ್ಸ್‌ ತಂಡವು ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕ್ರಿಸ್ ಗೇಲ್ ಭರ್ಜರಿ ಹಿಟ್​ನೊಂದಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದ ಪೇಟ್ರಿಯಟ್ಸ್‌
Trinbago vs Patriots
TV9 Web
| Edited By: |

Updated on:Aug 29, 2022 | 3:14 PM

Share

ವೆಸ್ಟ್ ಇಂಡೀಸ್​ನಲ್ಲಿ ನಡೆದ ಹೊಸ ಮಾದರಿಯ ಕ್ರಿಕೆಟ್​ ಟೂರ್ನಿ ದಿ ಸಿಕ್ಸ್ಟಿ ಲೀಗ್​ಗೆ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ಟ್ರಿನ್​ಬಾಗೊ ನೈಟ್​ ರೈಡರ್ಸ್​ ವಿರುದ್ದ ಗೆಲುವು ದಾಖಲಿಸುವ ಮೂಲಕ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಟ್ಸ್‌ ತಂಡವು ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪೇಟ್ರಿಯಟ್ಸ್‌ ತಂಡದ ನಾಯಕ ಎವಿನ್ ಲೂಯಿಸ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟ್ರಿನ್​ಬಾಗೊ ನೈಟ್ ರೈಡರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಸುನೀಲ್ ನರೈನ್ (0) ಮೊದಲ ಓವರ್​ನಲ್ಲೇ ಶೂನ್ಯಕ್ಕೆ ಔಟಾಗಿದ್ದರು. ಇನ್ನು ಮತ್ತೋರ್ವ ಆರಂಭಿಕ ವೆಬ್​ಸ್ಟರ್ ಕೇವಲ 5 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದ್ದರು. ಈ ವೇಳೆ ಕಣಕ್ಕಿಳಿದ ಸ್ಪೋಟಕ ಬ್ಯಾಟ್ಸ್​ಮನ್ ಆಂಡ್ರೆ ರಸೆಲ್ ಕೇವಲ 13 ಎಸೆತಗಳಲ್ಲಿ 3 ಸಿಕ್ಸರ್​ನೊಂದಿಗೆ 22 ರನ್ ಚಚ್ಚಿದರು. ಆದರೆ ಎವಿನ್ ಲೂಯಿಸ್ ಎಸೆದ ಅತ್ಯುತ್ತಮ ಥ್ರೋಗೆ ರನೌಟ್ ಆಗುವ ಮೂಲಕ ರಸೆಲ್ ಹೊರನಡೆದರು. ಇನ್ನು ಟಿಮ್ ಸೈಫರ್ಟ್​ 25 ಎಸೆತಗಳಲ್ಲಿ 37 ರನ್ ಬಾರಿಸುವ ಮೂಲಕ ನಿಗದಿತ 10 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 83 ಕ್ಕೆ ತಂದು ನಿಲ್ಲಿಸಿದರು.

84 ರನ್​ಗಳ ಸುಲಭ ಗುರಿ ಪಡೆದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಟ್ಸ್‌ ತಂಡಕ್ಕೆ ಆಂಡ್ರೆ ಫ್ಲೆಚರ್ ಹಾಗೂ ಎವಿನ್ ಲೂಯಿಸ್ ಬಿರುಸಿನ ಆರಂಭ ಒದಗಿಸಿದ್ದರು. 4.4 ಓವರ್​ಗಳಲ್ಲಿ 53 ರನ್​ ಕಲೆಹಾಕಿದ ಈ ಜೋಡಿ ತಂಡದ ಗೆಲುವನ್ನು ಖಚಿತಪಡಿಸಿದರು. ಈ ಹಂತದಲ್ಲಿ ಲೂಯಿಸ್ (32) ಔಟಾದರೆ, ಆ ಬಳಿಕ ಬಂದ ರುದರ್​ಫೋರ್ಡ್ (4) ಕೂಡ ಬೇಗನೆ ನಿರ್ಗಮಿಸಿದರು. ಇನ್ನು ಡೆವಾಲ್ಡ್ ಬ್ರೆವಿಸ್ ಎದುರಿಸಿದ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು.

ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಈ ವೇಳೆ ಫ್ಲೆಚರ್ (27) ಜೊತೆಗೂಡಿದ ಕ್ರಿಸ್ ಗೇಲ್ 15 ರನ್ ಬಾರಿಸುವ ಮೂಲಕ ಬೌಂಡರಿಯೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ 9.4 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಟ್ಸ್‌ ತಂಡ ರೋಚಕ ಜಯದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.

Published On - 3:05 pm, Mon, 29 August 22

Follow Us
TV9 Web
TV9 Web

TV9 Kannada

Read More
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಸಿನಿಮಾನಲ್ಲಿ ನಟಿಸಲ್ಲ ಎಂದಿದ್ದ ಸಿದ್ದರಾಮಯ್ಯ ಒಪ್ಪಿದ್ದು ಹೇಗೆ?
ಸಿನಿಮಾನಲ್ಲಿ ನಟಿಸಲ್ಲ ಎಂದಿದ್ದ ಸಿದ್ದರಾಮಯ್ಯ ಒಪ್ಪಿದ್ದು ಹೇಗೆ?
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್
ನ್ಯಾಯ ಕೇಳಲು ಬಂದ ಜನರಿಗೆ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಆವಾಜ್