The Hundred: 14 ಎಸೆತಗಳಲ್ಲಿ 44 ರನ್: ಜಾನಿ ಬೈರ್​ಸ್ಟೋವ್ ಅಬ್ಬರಕ್ಕೆ ನಲುಗಿದ ಎದುರಾಳಿ ತಂಡ

| Updated By: ಝಾಹಿರ್ ಯೂಸುಫ್

Updated on: Jul 28, 2021 | 3:49 PM

Jonny Bairstow: ಸದ್ಯ ಉತ್ತಮ ಫಾರ್ಮ್​ನಲ್ಲಿರುವ ಜಾನಿ ಬೈರ್​ಸ್ಟೋವ್ ಭಾರತದ ವಿರುದ್ದದ ಟೆಸ್ಟ್ ಸರಣಿಯಲ್ಲೂ ಸ್ಥಾನ ಪಡೆದಿದ್ದಾರೆ. ಆಗಸ್ಟ್ 4 ರಿಂದ ಶುರುವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಬೈರ್​ಸ್ಟೋವ್ ಶೀಘ್ರದಲ್ಲೇ ಇಂಗ್ಲೆಂಡ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.

The Hundred: 14 ಎಸೆತಗಳಲ್ಲಿ 44 ರನ್: ಜಾನಿ ಬೈರ್​ಸ್ಟೋವ್ ಅಬ್ಬರಕ್ಕೆ ನಲುಗಿದ ಎದುರಾಳಿ ತಂಡ
Jonny Bairstow
Follow us on

ದಿ ಹಂಡ್ರೆಡ್ ಲೀಗ್ (The Hundred) ​ನಲ್ಲಿ ಬ್ಯಾಟರ್​ಗಳ ಅಬ್ಬರ ಮುಂದುವರೆದಿದೆ. ಮಂಗಳವಾರ ನಡೆದ ವೆಲ್ಷ್ ಫೈರ್ (Welsh Fire) ಹಾಗೂ ಸರ್ದನ್ ಬ್ರೇವ್ ನಡುವಣ ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. 100 ಎಸೆತಗಳ ಈ ಪಂದ್ಯದಲ್ಲಿ ಟಾಸ್ ಗೆದ್ದ ಬ್ರೇವ್ ತಂಡದ ನಾಯಕ ಜೇಮ್ಸ್​ ವಿನ್ಸ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ವೆಲ್ಫ್ ಫೈರ್ ತಂಡದ ನಾಯಕ ಜಾನಿ ಬೈರ್​ಸ್ಟೋವ್ (Jonny Bairstow) ಹಾಗೂ ಟಾಮ್ ಬಾಂಟನ್ ಸ್ಪೋಟಕ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 43 ರನ್​ಗಳ ಜೊತೆಯಾಟವಾಡಿದ ಈ ಜೋಡಿ ಉತ್ತಮ ಮೊತ್ತಕ್ಕಾಗಿ ಭದ್ರ ಬುನಾದಿ ಹಾಕಿಕೊಟ್ಟರು. ಇದೇ ವೇಳೆ ಬಾಂಟನ್ (31) ಜಾಕ್ ಎನ್ಟೊಟ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.

ಈ ವೇಳೆ ಕ್ರೀಸ್​ಗೆ ಆಗಮಿಸಿದ ಡಕ್ಕೆಟ್, ಜಾನಿ ಬೈರ್​ಸ್ಟೋವ್​ಗೆ ಉತ್ತಮ ಸಾಥ್ ನೀಡಿದರು. ಪರಿಣಾಮ ಒಂದೆಡೆ ಬೈರ್​ ಸ್ಟೋವ್ ಅಬ್ಬರಿಸಲಾರಂಭಿಸಿದರು. ಮೊದಲ 25 ಎಸೆತಗಳಲ್ಲಿ 26 ರನ್​ ಮಾತ್ರಗಳಿಸಿದ್ದ ಬೈರ್​ಸ್ಟೋವ್ ಉಳಿದ 14 ಎಸೆತಗಳಲ್ಲಿ 44 ರನ್ ಸಿಡಿಸಿದರು. ಅದರಂತೆ 39 ಎಸೆತಗಳಲ್ಲಿ 72 ರನ್​ ಬಾರಿಸಿದರು. ಈ ಸ್ಪೋಟಕ ಇನಿಂಗ್ಸ್​ನಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ ಐದು ಬೌಂಡರಿಗಳು ಮೂಡಿಬಂದಿತ್ತು. ಇನ್ನೊಂದೆಡೆ ಡಕ್ಕೆಟ್ (53) ಕೂಡ ಅರ್ಧಶತಕ ಬಾರಿಸುವುದರೊಂದಿಗೆ ವೆಲ್ಷ್​ ಫೈರ್ ತಂಡದ ಮೊತ್ತವು 100 ಎಸೆತಗಳಿಗೆ 4 ವಿಕೆಟ್​ ನಷ್ಟದೊಂದಿಗೆ 164 ಕ್ಕೆ ಬಂದು ನಿಂತಿತು.

ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಸದರ್ನ್ ಬ್ರೇವ್ ತಂಡಕ್ಕೆ ಕ್ವಿಂಟನ್ ಡಿಕಾಕ್ ಹಾಗೂ ಜೇಮ್ಸ್ ವಿನ್ಸ್ ಬಿರುಸಿನ ಆರಂಭ ಒದಗಿಸಿದರು. ಡಿ ಕಾಕ್ 7 ಎಸೆತಗಳಲ್ಲಿ 21 ರನ್ ಬಾರಿಸಿದರೆ ಮತ್ತು ವಿನ್ಸ್ 27 ಎಸೆತಗಳಲ್ಲಿ 40 ರನ್ ಚಚ್ಚಿದರು. ಇದೇ ವೇಳೆ ದಾಳಿಗಿಳಿದ ಜಿಮ್ಮಿ ನೀಶಮ್ (Jimmy Neesham) ಸರ್ದನ್ ಅಬ್ಬರಕ್ಕೆ ಬ್ರೇಕ್ ಹಾಕಿದರು. 20 ಎಸೆತಗಳಲ್ಲಿ ಕೇವಲ 5 ರನ್​​ ನೀಡಿ ಪ್ರಮುಖ 3 ವಿಕೆಟ್ ಉರುಳಿಸಿದ ನೀಶಮ್ ಸರ್ದನ್​ ತಂಡಕ್ಕೆ ಆಘಾತ ನೀಡಿದರು. ಪರಿಣಾಮ ನಿಗದಿತ 100 ಎಸೆತಗಳಲ್ಲಿ ಸರ್ದನ್ ಬ್ರೇವ್ ತಂಡ 147 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ವೆಲ್ಷ್ ಫೈರ್ ತಂಡವು 18 ರನ್​ಗಳ ಭರ್ಜರಿ ಜಯ ಸಾಧಿಸಿತು.

ಸದ್ಯ ಉತ್ತಮ ಫಾರ್ಮ್​ನಲ್ಲಿರುವ ಜಾನಿ ಬೈರ್​ಸ್ಟೋವ್ ಭಾರತದ ವಿರುದ್ದದ ಟೆಸ್ಟ್ ಸರಣಿಯಲ್ಲೂ ಸ್ಥಾನ ಪಡೆದಿದ್ದಾರೆ. ಆಗಸ್ಟ್ 4 ರಿಂದ ಶುರುವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಬೈರ್​ಸ್ಟೋವ್ ಶೀಘ್ರದಲ್ಲೇ ಇಂಗ್ಲೆಂಡ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಭಾರತ ವಿರುದ್ಧದ ಮೊದಲ ಎರಡು ಟೆಸ್ಟ್​ ಪಂದ್ಯಗಳಿಗೆ ಇಂಗ್ಲೆಂಡ್‌ ತಂಡ ಹೀಗಿದೆ:ಜೋ ರೂಟ್, ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೋವ್, ಡಾಮ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್ , ಜೋಸ್ ಬಟ್ಲರ್, ಝ್ಯಾಕ್‌ ಕ್ರಾವ್ಲೀ , ಸ್ಯಾಮ್ ಕರ್ರನ್, ಹಸೀಬ್ ಹಮೀದ್, ಡ್ಯಾನ್ ಲಾರೆನ್ಸ್ , ಜಾಕ್ ಲೀಚ್ , ಓಲ್ಲೀ ಪೋಪ್ , ಓಲ್ಲೀ ರಾಬಿನ್ಸನ್, ಡಾಮ್ ಸಿಬ್ಲಿ , ಬೆನ್ ಸ್ಟೋಕ್ಸ್ , ಮಾರ್ಕ್‌ ವುಡ್‌.

 

ಇದನ್ನೂ ಓದಿ: Dhananjay: ಡೇಂಜರಸ್ ಡಾಲಿ ಇಸ್ ಬ್ಯಾಕ್: ಹೊಸ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ಇದನ್ನೂ ಓದಿ: Rahul Dravid: ಶ್ರೀಲಂಕಾ ನಾಯಕನ ಜೊತೆ ರಾಹುಲ್ ದ್ರಾವಿಡ್ ಮಾತನಾಡಿದ್ದೇನು? ಇಲ್ಲಿದೆ ಉತ್ತರ

 

(The Hundred: Jonny Bairstow heroics power Welsh Fire to victory)

 

Published On - 3:47 pm, Wed, 28 July 21