Cricketers: ಮದುವೆಗೂ ಮುನ್ನವೇ ತಂದೆಯಾದ ಖ್ಯಾತ ಕ್ರಿಕೆಟಿಗರಿವರು! ಪಟ್ಟಿಯಲ್ಲಿ ಒಬ್ಬ ಭಾರತೀಯ

Cricketers: ಮದುವೆಗೂ ಮುನ್ನವೇ ಪ್ರೀತಿಯಲ್ಲಿ ಬಿದ್ದು ತಂದೆಯಾಗುವ ಕ್ರಿಕೆಟಿಗರು ಅನೇಕರಿದ್ದಾರೆ. ಇದರಲ್ಲಿ ಭಾರತೀಯ ಕ್ರಿಕೆಟಿಗರೂ ಸೇರಿದ್ದಾರೆ. ಅವರಲ್ಲಿ ಒಂದು ಹೆಸರು ಹಾರ್ದಿಕ್ ಪಾಂಡ್ಯ.

Cricketers: ಮದುವೆಗೂ ಮುನ್ನವೇ ತಂದೆಯಾದ ಖ್ಯಾತ ಕ್ರಿಕೆಟಿಗರಿವರು! ಪಟ್ಟಿಯಲ್ಲಿ ಒಬ್ಬ ಭಾರತೀಯ
ಹಾರ್ದಿಕ್ ಪಾಂಡ್ಯ
Follow us
TV9 Web
| Updated By: ಪೃಥ್ವಿಶಂಕರ

Updated on: Mar 10, 2022 | 4:10 PM

ಮದುವೆಗೂ ಮುನ್ನವೇ ಪ್ರೀತಿಯಲ್ಲಿ ಬಿದ್ದು ತಂದೆಯಾಗುವ ಕ್ರಿಕೆಟಿಗರು ಅನೇಕರಿದ್ದಾರೆ. ಇದರಲ್ಲಿ ಭಾರತೀಯ ಕ್ರಿಕೆಟಿಗರೂ ಸೇರಿದ್ದಾರೆ. ಅವರಲ್ಲಿ ಒಂದು ಹೆಸರು ಹಾರ್ದಿಕ್ ಪಾಂಡ್ಯ (Hardik Pandya). ಈ ಭಾರತೀಯ ಕ್ರಿಕೆಟಿಗ ಮದುವೆಗೂ ಮುನ್ನವೇ ತಂದೆಯಾದರು. ಪಾಂಡ್ಯ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ಜನವರಿ 1, 2020 ರಂದು ದುಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಜುಲೈ 30, 2020 ರಂದು, ಹಾರ್ದಿಕ್ ಪಾಂಡ್ಯ ತನ್ನ ಗೆಳತಿ ಗರ್ಭಿಣಿಯಾಗಿದ್ದಾಳೆ ಮತ್ತು ತಾನು ತಂದೆಯಾಗಲಿದ್ದೇನೆ ಎಂಬುದನ್ನು ಬಹಿರಂಗಪಡಿಸಿದರು. ಹಾರ್ದಿಕ್ ಪಾಂಡ್ಯ ತಮ್ಮ ಮಗುವಿಗೆ ‘ಅಗಸ್ತ್ಯ’ ಎಂದು ಹೆಸರಿಟ್ಟಿದ್ದಾರೆ. ಈ ಪಟ್ಟಿಗೆ ಇಂಗ್ಲೆಂಡ್ ನಾಯಕ ಜೋ ರೂಟ್ ಕೂಡ ಸೇರ್ಪಡೆಯಾಗಿದ್ದಾರೆ. ರೂಟ್ ಕೂಡ ಮದುವೆಯಾಗದೆ ತಂದೆಯಾದವರು. ಅವರು 2014 ರಿಂದ ತನ್ನ ಗೆಳತಿ ಕ್ಯಾರಿ ಕಾರ್ಟೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಮಾರ್ಚ್ 2016 ರಲ್ಲಿ ದಂಪತಿಗಳು ನಿಶ್ಚಿತಾರ್ಥ ಮಾಡಿಕೊಂಡರು. T20 ವಿಶ್ವಕಪ್ ಮೊದಲು ಜೋ ರೂಟ್ ಮದುವೆಯಾಗದೆ ತಂದೆಯಾದರು. ಜೋ ರೂಟ್ ಅವರ ಮಗ ಆಲ್ಫ್ರೆಡ್ ಜನವರಿ 7, 2017 ರಂದು ಜನಿಸಿದರು. ಇದರ ನಂತರ, ದಂಪತಿಗಳು ವಿವಾಹವಾದರು.

ಆಸ್ಟ್ರೇಲಿಯಾದ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಕೂಡ ಮದುವೆಯಾಗದೆ ತಂದೆಯಾದರು. 2014 ರಲ್ಲಿ, ಡೇವಿಡ್ ವಾರ್ನರ್ ಗೆಳತಿ ಕ್ಯಾಂಡಿಸ್ ತನ್ನ ಮೊದಲ ಮಗಳಿಗೆ ಜನ್ಮ ನೀಡಿದರು. 2015 ರಲ್ಲಿ ಡೇವಿಡ್ ವಾರ್ನರ್ ಕ್ಯಾಂಡಿಸ್ ಅವರನ್ನು ವಿವಾಹವಾದರು. ವಾರ್ನರ್‌ಗೆ ಐವಿ, ಇಂಡಿ ಮತ್ತು ಇಸ್ಲಾ ಎಂಬ ಮೂವರು ಪುತ್ರಿಯರಿದ್ದಾರೆ. ಸದ್ಯ ಪಾಕಿಸ್ತಾನದ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಕೂಡ ಅವಿವಾಹಿತ ತಂದೆಯಾಗಿದ್ದಾರೆ. ಇಮ್ರಾನ್ ಸೀತಾ ವೈಟ್ ಅವರ ಸಂಬಂಧಿ. 1987-88ರಲ್ಲಿ ಆರಂಭವಾದ ಸೀತಾ ಮತ್ತು ಇಮ್ರಾನ್ ಸಂಬಂಧ 1991ರಲ್ಲಿ ಹತ್ತಿರವಾಯಿತು. 1992ರಲ್ಲಿ ಅವರಿಗೆ ಮಗುವಾಯಿತು. ಆದರೆ ಇಮ್ರಾನ್ ಇದು ನನ್ನ ಮಗುವಲ್ಲ ಎಂದು ಆರೋಪಿಸಿದ್ದರು. ಆದರೆ ನಂತರ ಡಿಎನ್ಎ ಪರೀಕ್ಷೆಯಲ್ಲಿ ಇದು ಇಮ್ರಾನ್ ಮಗುವೇ ಎಂಬುದು ಸಾಭೀತಾಗಿತ್ತು.

1980 ರಲ್ಲಿ ಭಾರತಕ್ಕೆ ಬಂದಿದ್ದ ರಿಚರ್ಡ್ಸ್ ಜನಪ್ರಿಯ ನಟಿ ನೀನಾ ಗುಪ್ತಾ ಅವರನ್ನು ಭೇಟಿಯಾದರು. ಇಬ್ಬರ ನಡುವಿನ ಸಂಬಂಧ ಬಹಳ ಕಾಲ ನಡೆಯಿತು. 1989 ರಲ್ಲಿ, ನೀನಾ ಮಗಳಿಗೆ ಜನ್ಮ ನೀಡಿದರು. ಜೊತೆಗೆ ಈ ಮಗುವಿಗೆ ಮಸಾಬಾ ಎಂಬ ಹೆಸರನ್ನು ಇಡಲಾಯಿತು. ಆದರೆ ಈ ಇಬ್ಬರ ಸಂಬಂಧ ಬೇಗನೇ ಮುರಿದು ಬಿತ್ತು. ನಂತರ ವಿವಿಯನ್ ರಿಚರ್ಡ್ಸ್ ಮೇರಿಯನ್ನು ವಿವಾಹವಾದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳೂ ಸಹ ಇದ್ದಾರೆ. ಡೇಂಜರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೂಡ ಅವಿವಾಹಿತ ತಂದೆಯ ಪಟ್ಟಿಯಲ್ಲಿದ್ದಾರೆ. 2017 ರ ಐಪಿಎಲ್ ಸಮಯದಲ್ಲಿ ಅವರ ಗೆಳತಿ ನತಾಶಾ ಬ್ಯಾರಿಡ್ಜ್ ಮಗಳಿಗೆ ಜನ್ಮ ನೀಡಿದ್ದರು.

ಇದನ್ನೂ ಓದಿ: Womens World Cup 2022, Points Table: ಕಿವೀಸ್ ವಿರುದ್ಧ ಸೋತು ಪಾಯಿಂಟ್ ಪಟ್ಟಿಯಲ್ಲಿ ಭಾರಿ ಕುಸಿತ ಕಂಡ ಭಾರತ!