TNPL 2023: ರಣರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ರಾಯಲ್ ಕಿಂಗ್ಸ್

TNPL 2023: ಸೋಮವಾರ ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ದಿಂಡಿಗಲ್ ಡ್ರಾಗನ್ಸ್ ಹಾಗೂ ನೆಲ್ಲೈ ರಾಯಲ್ ಕಿಂಗ್ಸ್ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡವು ಜುಲೈ 12 ರಂದು ಲೈಕಾ ಕೋವೈ ಕಿಂಗ್ಸ್ ವಿರುದ್ಧ ಫೈನಲ್ ಆಡಲಿದೆ.

TNPL 2023: ರಣರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ರಾಯಲ್ ಕಿಂಗ್ಸ್
Nellai Royal Kings
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 09, 2023 | 4:20 PM

TNPL 2023: ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ (Nellai Royal Kings) ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೀಚೆಮ್ ಮಧುರೈ ಪ್ಯಾಂಥರ್ಸ್ ತಂಡವು ಮೊದಲು ಬೌಲಿಂಗ್ ಮಾಡಿತು. ಇತ್ತ ಇನಿಂಗ್ಸ್ ಆರಂಭಿಸಿದ ನೆಲ್ಲೈ ರಾಯಲ್ ಕಿಂಗ್ಸ್ ಪರ ಆರಂಭಿಕರಾದ ಅರುಣ್ ಕಾರ್ತಿಕ್ (18) ಹಾಗೂ ಸೂರ್ಯಪ್ರಕಾಶ್ (0) ಬೇಗನೆ ವಿಕೆಟ್ ಒಪ್ಪಿಸಿದ್ದರು.

ಆದರೆ ಮೂರನೇ ವಿಕೆಟ್​ಗೆ ಜೊತೆಯಾದ ಅಜಿತೇಶ್ ಹಾಗೂ ನಿಧೀಶ್ ಭರ್ಜರಿ ಬ್ಯಾಟಿಂಗ್ ಪ್ರರ್ಶಿಸಿದರು. 30 ಎಸೆತಗಳನ್ನು ಎದುರಿಸಿದ ಅಜಿತೇಶ್ 1 ಸಿಕ್ಸ್ ಹಾಗೂ 7 ಫೋರ್​ನೊಂದಿಗೆ 50 ರನ್​ ಬಾರಿಸಿದರೆ, ನಿಧೀಶ್ 6 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 50 ಎಸೆತಗಳಲ್ಲಿ 76 ರನ್ ಸಿಡಿಸಿದರು.

ಇನ್ನು ಅಂತಿಮ ಓವರ್​ಗಳಲ್ಲಿ ಬ್ಯಾಟ್ ಬೀಸಿದ ರಿತ್ವಿಕ್ 2 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 10 ಎಸೆತಗಳಲ್ಲಿ 29 ರನ್ ಚಚ್ಚಿದರು. ಇದರೊಂದಿಗೆ ನೆಲ್ಲೈ ರಾಯಲ್ ಕಿಂಗ್ಸ್ ತಂಡದ ಮೊತ್ತವು 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ಕ್ಕೆ ಬಂದು ನಿಂತಿತು.

212 ರನ್​ಗಳ ಸವಾಲಿನ ಗುರಿ ಪಡೆದ ಸೀಚೆಮ್ ಮಧುರೈ ಪ್ಯಾಂಥರ್ಸ್ ತಂಡಕ್ಕೆ ಸುರೇಶ್ ಲೋಕೇಶ್ವರ್ (40) ಬಿರುಸಿನ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆದಿತ್ಯ 50 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 73 ರನ್ ಬಾರಿಸಿದರು.

ಇನ್ನು ಕೆಳ ಕ್ರಮಾಂಕದಲ್ಲಿ ಅಬ್ಬರಿಸಿದ ಸ್ವಪ್ನಿಲ್ ಸಿಂಗ್ 30 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 48 ರನ್ ಬಾರಿಸಿದರು. ಪರಿಣಾಮ ಕೊನೆಯ ಓವರ್​ನಲ್ಲಿ ಸೀಚೆಮ್ ಮಧುರೈ ಪ್ಯಾಂಥರ್ಸ್ ತಂಡಕ್ಕೆ 19 ರನ್​ಗಳ ಅವಶ್ಯಕತೆಯಿತ್ತು. ಮೋಹನ್ ಪ್ರಸಾತ್ ಎಸೆದ ಕೊನೆಯ ಓವರ್​ನಲ್ಲಿ 2 ಸಿಕ್ಸ್​ನೊಂದಿಗೆ ಪ್ಯಾಂಥರ್ಸ್ ತಂಡವು 14 ರನ್​ಗಳಿಸಲಷ್ಟೇ ಶಕ್ತರಾದರು.

ಇದರೊಂದಿಗೆ ನೆಲ್ಲೈ ರಾಯಲ್ ಕಿಂಗ್ಸ್ ತಂಡವು 4 ರನ್​ಗಳ ರೋಚಕ ಜಯ ಸಾಧಿಸಿ ಕ್ವಾಲಿಫೈಯರ್-2 ಗೆ ಎಂಟ್ರಿ ಕೊಟ್ಟಿದೆ. ಸೋಮವಾರ ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ದಿಂಡಿಗಲ್ ಡ್ರಾಗನ್ಸ್ ಹಾಗೂ ನೆಲ್ಲೈ ರಾಯಲ್ ಕಿಂಗ್ಸ್ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡವು ಜುಲೈ 12 ರಂದು ಲೈಕಾ ಕೋವೈ ಕಿಂಗ್ಸ್ ವಿರುದ್ಧ ಫೈನಲ್ ಆಡಲಿದೆ.

ನೆಲ್ಲೈ ರಾಯಲ್ ಕಿಂಗ್ಸ್​ ಪ್ಲೇಯಿಂಗ್ 11: ಅರುಣ್ ಕಾರ್ತಿಕ್ (ನಾಯಕ) , ಲಕ್ಷ್ಮೇಶ ಸೂರ್ಯಪ್ರಕಾಶ್ , ಅಜಿತೇಶ್ ಗುರುಸ್ವಾಮಿ , ರಿತಿಕ್ ಈಶ್ವರನ್ (ವಿಕೆಟ್ ಕೀಪರ್) , ನಿಧಿಶ್ ರಾಜಗೋಪಾಲ್ , ಸೋನು ಯಾದವ್ , ಸುಗಂಧಿರನ್ , ಹರೀಶ್ , ಎಂ ಪೊಯಿಯಮುಝಿ, ಮೋಹನ್ ಪ್ರಸಾದ್ , ಸಂದೀಪ್ ವಾರಿಯರ್.

ಇದನ್ನೂ ಓದಿ: ಮೈದಾನದಲ್ಲಿ ಮೊಳಗಿದ DK..DK ಘೋಷಣೆ: ಕೈ ಮುಗಿದು ಬಿಟ್ಟು ಬಿಡ್ರಪ್ಪಾ ಎಂದ ಮುರಳಿ ವಿಜಯ್

ಸೀಚೆಮ್ ಮಧುರೈ ಪ್ಯಾಂಥರ್ಸ್ ಪ್ಲೇಯಿಂಗ್ 11: ಹರಿ ನಿಶಾಂತ್ (ನಾಯಕ) , ಸುರೇಶ್ ಲೋಕೇಶ್ವರ್ (ವಿಕೆಟ್ ಕೀಪರ್) , ಕ್ರಿಶ್ ಜೈನ್ , ವಿ ಆದಿತ್ಯ , ಜಗತೀಸನ್ ಕೌಸಿಕ್ , ಸ್ವಪ್ನಿಲ್ ಸಿಂಗ್ , ಎಸ್ ಶ್ರೀ ಅಬಿಸೆಕ್ , ಪಿ ಸರವಣನ್ , ಮುರುಗನ್ ಅಶ್ವಿನ್ , ಗುರ್ಜಪ್ನೀತ್ ಸಿಂಗ್ , ಅಜಯ್ ಕೃಷ್ಣ.

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?