AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

U19 Asia Cup 2025: ಮೊದಲ ಪಂದ್ಯದಲ್ಲಿ 234 ರನ್​ಗಳಿಂದ ಗೆದ್ದ ಯುವ ಭಾರತ

Under-19 Asia Cup: 2025ರ ಅಂಡರ್-19 ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಭಾರತ ಯುಎಇ ತಂಡವನ್ನು 234 ರನ್‌ಗಳಿಂದ ಭಾರಿ ಅಂತರದಿಂದ ಸೋಲಿಸಿದೆ. ವೈಭವ್ ಸೂರ್ಯವಂಶಿ 171 ರನ್ ಗಳಿಸಿ ಶತಕ ಸಿಡಿಸಿ ಮಿಂಚಿದರು. ಭಾರತ 433 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಯುಎಇ ತಂಡ 199 ರನ್‌ಗಳಿಗೆ ಮಾತ್ರ ತಲುಪಲು ಸಾಧ್ಯವಾಯಿತು, ಇದು ಭಾರತ ಯುವ ಪಡೆಗೆ ಅದ್ಧೂರಿ ಗೆಲುವು ತಂದುಕೊಟ್ಟಿತು.

U19 Asia Cup 2025: ಮೊದಲ ಪಂದ್ಯದಲ್ಲಿ 234 ರನ್​ಗಳಿಂದ ಗೆದ್ದ ಯುವ ಭಾರತ
Team India U19
ಪೃಥ್ವಿಶಂಕರ
|

Updated on:Dec 12, 2025 | 6:38 PM

Share

2025 ರ ಅಂಡರ್-19 ಏಷ್ಯಾಕಪ್​ಗೆ (Under-19 Asia Cup) ಇಂದಿನಿಂದ ಅದ್ಧೂರಿ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಭಾರತ ಹಾಗೂ ಯುಎಇ (India vs UAE) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಭಾರತ ಯುವ ಪಡೆ ಬರೋಬ್ಬರಿ 234 ರನ್​ಗಳ ಭಾರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 6 ವಿಕೆಟ್‌ಗಳಿಗೆ 433 ರನ್ ಗಳಿಸಿತು. ತಂಡದ ಪರ ವೈಭವ್ ಸೂರ್ಯವಂಶಿ (Vaibhav Suryavanshi) ಅದ್ಭುತ ಶತಕ ಬಾರಿಸಿದರು. ಇದಕ್ಕೆ ಪ್ರತಿಯಾಗಿ ಗುರಿ ಬೆನ್ನಟ್ಟಿದ ಯುಎಇ ತಂಡ 7 ವಿಕೆಟ್‌ಗಳ ನಷ್ಟಕ್ಕೆ 199 ರನ್‌ಗಳಿಸಲಷ್ಟೇ ಶಕ್ತವಾಗಿ ಪಂದ್ಯವನ್ನು 234 ರನ್‌ಗಳಿಂದ ಸೋತಿತು.

ಭಾರತಕ್ಕೆ ಆರಂಭಿಕ ಆಘಾತ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾ ಪರ ನಾಯಕ ಆಯುಷ್ ಮ್ಹಾತ್ರೆ ಹಾಗೂ ವೈಭವ್ ಸೂರ್ಯವಂಶಿ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ನಾಯಕ ಆಯುಷ್ ಕೇವಲ 4 ರನ್ ಬಾರಿಸಿ ಔಟಾದರು. ಆ ಬಳಿಕ ಜೊತೆಯಾದ ವೈಭವ್ ಹಾಗೂ ಆರನ್ ವರ್ಗೀಸ್ ದಾಖಲೆಯ ದ್ವಿಶತಕದ ಜೊತೆಯಾಟ ಕಟ್ಟಿದರು. ಇದೇ ವೇಳೆ ವೈಭವ್ ಸೂರ್ಯವಂಶಿ ತಮ್ಮ ಶತಕವನ್ನು ಪೂರೈಸಿದರು. ಇತ್ತ ಆರನ್ ವರ್ಗೀಸ್ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆರನ್ ವರ್ಗೀಸ್ 73 ಎಸೆತಗಳಲ್ಲಿ 69 ರನ್​ಗಳ ಇನ್ನಿಂಗ್ಸ್ ಆಡಿ ಪೆವಿಲಿಯನ್ ಸೇರಿಕೊಂಡರು. ಮತ್ತೊಂದೆಡೆ ಶತಕ ಬಾರಿಸಿದ ಬಳಿಕವೂ ತಮ್ಮ ಹೊಡಿಬಡಿ ಆಟವನ್ನು ಮುಂದುವರೆಸಿದ ವೈಭವ್​ಗೆ ವಿಹಾನ್ ಮಲ್ಹೋತ್ರಾ ಅವರಿಂದ ಉತ್ತಮ ಸಾಥ್ ಸಿಕ್ಕಿತು.

ವೈಭವ್ ಸೂರ್ಯವಂಶಿ ಶತಕ

ಇವರಿಬ್ಬರ ನಡುವೆ ಮೂರನೇ ವಿಕೆಟ್​ ಅರ್ಧಶತಕದ ಜೊತೆಯಾಟ ನಡೆಯಿತು. 150 ರನ್​ಗಳ ಗಡಿ ದಾಟಿ, ದ್ವಿಶತಕದತ್ತ ಹೆಜ್ಜೆ ಹಾಕುತ್ತಿದ್ದ ವೈಭವ್ 171 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 95 ಎಸೆತಗಳನ್ನು ಎದುರಿಸಿದ ವೈಭವ್ 14 ಭರ್ಜರಿ ಸಿಕ್ಸರ್​ಗಳು ಹಾಗೂ 9 ಬೌಂಡರಿಗಳನ್ನು ಬಾರಿಸಿದರು. ಇತ್ತ ವಿಹಾನ್ ಮಲ್ಹೋತ್ರಾ ಕೂಡ 55 ಎಸೆತಗಳಲ್ಲಿ 69 ರನ್ ಬಾರಿಸಿ ಔಟಾದರೆ, ವೇದಾಂತ್ ತ್ರಿವೇದಿ 38 ರನ್, ಅಭಿಗ್ಯಾನ್ ಅಭಿಷೇಕ್ ಕುಂಡು 32 ರನ್ ಹಾಗೂ ಕೊನೆಯಲ್ಲಿ ಕನಿಷ್ಕ್ ಚೌಹಾಣ್ 12 ಎಸೆತಗಳಲ್ಲಿ 28 ರನ್ ಬಾರಿಸಿ ತಂಡವನ್ನು 433 ರನ್​ಗಳಿಗೆ ಕೊಂಡೊಯ್ದರು. ಇತ್ತ ಯುಎಇ ಪರ ಯುಗ್ ಶರ್ಮಾ ಹಾಗೂ ಉದ್ದೀಶ್ ಸೂರಿ ತಲಾ 2 ವಿಕೆಟ್ ಪಡೆದರು.

14 ಸಿಕ್ಸ್, 171 ರನ್..! ವಿಶ್ವ ದಾಖಲೆಯ ಇನ್ನಿಂಗ್ಸ್ ಆಡಿದ ವೈಭವ್ ಸೂರ್ಯವಂಶಿ

199 ರನ್ ಕಲೆಹಾಕಿದ ಯುಎಇ

ಈ ಬೃಹತ್ ಗುರಿ ಬೆನ್ನಟ್ಟಿದ ಯುಎಇ ತಂಡ ಆರಂಭದಿಂದಲೇ ವಿಕೆಟ್‌ಗಳನ್ನು ಕಳೆದುಕೊಳ್ಳುತ ಸಾಗಿತು. ಇದರ ಪರಿಣಾಮವಾಗಿ ತಂಡಕ್ಕೆ ಈ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. 50 ರನ್ ಕಲೆಹಾಕುವುದರೊಳಗೆ ತಂಡದ ಪ್ರಮುಖ 5 ವಿಕೆಟ್​ಗಳು ಪತನವಾದವು. ಆದಾಗ್ಯೂ ಪೃಥ್ವಿ ಮಧು 50 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 100 ರನ್​ಗಳ ಗಡಿ ದಾಟಿಸಿದರು. ಇವರ ಜೊತೆಗೆ 8 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಉದ್ದೀಶ್ ಸೂರಿ ಅಜೇಯ 78 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Fri, 12 December 25

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?