AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: 7 ಕ್ಕೆ ಏಳರಲ್ಲೂ ಸೋಲು; ಗುರಿ ದೊಡ್ಡದಿದ್ದರೆ ಟೀಂ ಇಂಡಿಯಾಗೆ ನಡುಕ

India vs South Africa T20: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ T20ಯಲ್ಲಿ ಟೀಂ ಇಂಡಿಯಾ 51 ರನ್‌ಗಳ ಭಾರಿ ಸೋಲು ಕಂಡಿದೆ. 213 ರನ್‌ಗಳ ದೊಡ್ಡ ಗುರಿ ಬೆನ್ನಟ್ಟುವಲ್ಲಿ ಭಾರತ ವಿಫಲವಾಯಿತು. 200+ ಗುರಿಗಳ ಮುಂದೆ ತಂಡ ನಡುಗುತ್ತದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಬುಮ್ರಾ ಮತ್ತು ಅರ್ಷದೀಪ್ ದುಬಾರಿಯಾಗಿದ್ದು ಸೋಲಿಗೆ ಕಾರಣವಾಯಿತು. ಈ ಗೆಲುವಿನೊಂದಿಗೆ ಆಫ್ರಿಕಾ ಭಾರತದ ವಿರುದ್ಧ ಅತಿ ಹೆಚ್ಚು T20 ಗೆದ್ದ ದಾಖಲೆ ನಿರ್ಮಿಸಿದೆ.

IND vs SA: 7 ಕ್ಕೆ ಏಳರಲ್ಲೂ ಸೋಲು; ಗುರಿ ದೊಡ್ಡದಿದ್ದರೆ ಟೀಂ ಇಂಡಿಯಾಗೆ ನಡುಕ
Team India
ಪೃಥ್ವಿಶಂಕರ
|

Updated on:Dec 12, 2025 | 5:12 PM

Share

ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ (India vs South Africa) 51 ರನ್‌ಗಳ ಸೋಲು ಕಂಡಿದೆ. ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ತಂಡ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ಗಳನ್ನು ಕಳೆದುಕೊಂಡು 213 ರನ್‌ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಭಾರತ ತಂಡವು ಕೇವಲ 162 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳಾಗಲಿ ಅಥವಾ ಬ್ಯಾಟ್ಸ್‌ಮನ್‌ಗಳಾಗಲಿ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡಕ್ಕೆ ಸೋಲಿನ ಆಘಾತ ಎದುರಾಯಿತು.

ಗುರಿ ದೊಡ್ಡದಿದ್ದರೆ ಟೀಂ ಇಂಡಿಯಾಗೆ ನಡುಕ

ಟಿ20 ಕ್ರಿಕೆಟ್‌ನಲ್ಲಿ 200 ಕ್ಕೂ ಅಧಿಕ ರನ್​ಗಳನ್ನು ಬೆನ್ನಟ್ಟುವುದು ಸುಲಭದ ಕೆಲಸವಲ್ಲ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ 200 ರನ್​ಗಳ ಗುರಿ ಕೂಡ ಚಿಕ್ಕದೆಂದು ಕಾಣುತ್ತದೆ. ಅದರಲ್ಲೂ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ತಂಡಕ್ಕೆ ಈ ಗುರಿ ಬೆನ್ನಟ್ಟುವುದು ದೊಡ್ಡ ವಿಷಯವಲ್ಲ. ಆದರೆ 8ನೇ ಕ್ರಮಾಂಕದವರೆಗೂ ಹೊಡಿಬಡಿ ಆಟಗಾರರನ್ನೇ ಹೊಂದಿರುವ ಟೀಂ ಇಂಡಿಯಾಕ್ಕೆ 200 ರನ್​ಗಳ ಗುರಿ ಎಂದರೆ ನಡುಕ ಶುರುವಾಗುತ್ತದೆ. ಇದು ನಾವು ಹೇಳುತ್ತಿರುವುದಲ್ಲ. ಬದಲಿಗೆ ಅಂಕಿ ಅಂಶಗಳೇ ಟೀಂ ಇಂಡಿಯಾದ ಬಂಡವಾಳವನ್ನು ಬಯಲು ಮಾಡಿವೆ.

ವಾಸ್ತವವಾಗಿ, ಭಾರತ ತಂಡವು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 210+ ರನ್‌ಗಳ ಗುರಿಯನ್ನು ಎಂದಿಗೂ ಯಶಸ್ವಿಯಾಗಿ ಬೆನ್ನಟ್ಟಿಲ್ಲ. ಟೀಂ ಇಂಡಿಯಾ ಇಲ್ಲಿಯವರೆಗೆ ಏಳು ಬಾರಿ 210+ ರನ್‌ಗಳ ಗುರಿಯನ್ನು ಬೆನ್ನಟ್ಟಿದೆ, ಆದರೆ ಈ ಎಲ್ಲಾ ಸಂದರ್ಭಗಳಲ್ಲಿ ಸೋಲನ್ನು ಎದುರಿಸಿದೆ. ಈ ಅಂಕಿಅಂಶವು ಭಾರತೀಯ ಬ್ಯಾಟಿಂಗ್‌ನ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ.

ಬುಮ್ರಾ, ಅರ್ಷದೀಪ್ ಗೆಲುವಿನ ಓಟಕ್ಕೆ ಬ್ರೇಕ್

ಈ ಪಂದ್ಯದ ಮತ್ತೊಂದು ಗಮನಾರ್ಹ ವೈಶಿಷ್ಟ್ಯವೆಂದರೆ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್​ರಂತಹ ಟಿ20 ಸ್ಪೆಷಲಿಸ್ಟ್​ಗಳು ತಂಡದಲಿದ್ದರೂ ಟೀಂ ಇಂಡಿಯಾ ಸೋತಿತು. ವಾಸ್ತವವಾಗಿ, ಈ ಇಬ್ಬರು ಆಟಗಾರರು ಟಿ20 ಕ್ರಿಕೆಟ್‌ನಲ್ಲಿ ಒಟ್ಟಿಗೆ ಆಡಿದಾಗಲೆಲ್ಲಾ, ಟೀಂ ಇಂಡಿಯಾ ಪ್ರತಿ ಬಾರಿಯೂ ಗೆದ್ದಿದೆ. ಆದಾಗ್ಯೂ, 14 ಪಂದ್ಯಗಳ ನಂತರ, ಈ ಸರಣಿಗೆ ಬ್ರೇಕ್ ಬಿದ್ದಿದೆ. ಈ ಜೋಡಿ ಬಹಳ ಹಿಂದಿನಿಂದಲೂ ಭಾರತೀಯ ಬೌಲಿಂಗ್‌ನ ಬೆನ್ನೆಲುಬಾಗಿದೆ, ಆದರೆ ದಕ್ಷಿಣ ಆಫ್ರಿಕಾ ವಿರುದ್ಧ, ಇಬ್ಬರೂ ಸ್ಟಾರ್ ಬೌಲರ್‌ಗಳು ರನ್​ಗೆ ಕಡಿವಾಣ ಹಾಕುವಲ್ಲಿ ಎಡವಿದರು, ಇದು ಅಪರೂಪದ ಸಂಗತಿಯಾಗಿದೆ.

IND vs SA: ಮೊದಲ ಟಿ20ಯಲ್ಲಿ ಟೆಸ್ಟ್ ಆಡಿಯೂ ವಿಶಿಷ್ಟ ಮೈಲಿಗಲ್ಲು ದಾಟಿದ ತಿಲಕ್ ವರ್ಮಾ

ದಾಖಲೆ ಬರೆದ ದಕ್ಷಿಣ ಆಫ್ರಿಕಾ

ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಮತ್ತೊಂದು ದಾಖಲೆ ನಿರ್ಮಿಸಿದೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಅತಿ ಹೆಚ್ಚು ಬಾರಿ ಸೋಲಿಸಿದ ತಂಡ ಎಂಬ ಹೆಗ್ಗಳಿಕೆಗೆ ಆಫ್ರಿಕಾ ತಂಡ ಪಾತ್ರವಾಗಿದೆ. ದಕ್ಷಿಣ ಆಫ್ರಿಕಾ ಇದುವರೆಗೆ 13 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಲಾ 12 ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿವೆ. ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ಕೂಡ ತಲಾ 10 ಪಂದ್ಯಗಳನ್ನು ಗೆದ್ದಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Fri, 12 December 25

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ