AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಮೊದಲ ಟಿ20ಯಲ್ಲಿ ಟೆಸ್ಟ್ ಆಡಿಯೂ ವಿಶಿಷ್ಟ ಮೈಲಿಗಲ್ಲು ದಾಟಿದ ತಿಲಕ್ ವರ್ಮಾ

Tilak Varma T20I record: ಟಿ20 ಕ್ರಿಕೆಟ್‌ನಲ್ಲಿ ತಿಲಕ್ ವರ್ಮಾ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. 25 ವರ್ಷ ತುಂಬುವ ಮುನ್ನವೇ 1,000 ಅಂತರರಾಷ್ಟ್ರೀಯ T20 ರನ್‌ಗಳನ್ನು ಪೂರೈಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ 34 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದು ಅವರ ಪ್ರತಿಭೆ ಮತ್ತು ಸ್ಥಿರತೆಗೆ ಸಾಕ್ಷಿಯಾಗಿದೆ.

ಪೃಥ್ವಿಶಂಕರ
|

Updated on: Dec 09, 2025 | 9:31 PM

Share
ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಟಿ20 ಮಾದರಿಯಲ್ಲಿ ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಈ ಮಾದರಿಯಲ್ಲಿ ಅತ್ಯದ್ಭುತ ಫಾರ್ಮ್​ನಲ್ಲಿರುವ ತಿಲಕ್ ರನ್​ಗಳ ಮಳೆಯನ್ನೇ ಹರಿಸಿದ್ದಾರೆ. ಈ ಮೂಲಕ ಅವರು ಈ ಚುಟುಕು ಮಾದರಿಯಲ್ಲಿ ಪ್ರಮುಖ ಮೈಲಿಗಲ್ಲನ್ನು ದಾಟಿದ್ದು, ಈ ಹಿಂದೆ ಯಾವುದೇ ಭಾರತೀಯ ಆಟಗಾರ ಸಾಧಿಸದ ಸಾಧನೆಯನ್ನು ಅವರು ಮಾಡಿದ್ದಾರೆ.

1 / 5
ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಲ್ಕು ರನ್ ಗಳಿಸುವ ಮೂಲಕ ತಿಲಕ್ ವರ್ಮಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1,000 ರನ್​ಗಳನ್ನು ಪೂರೈಸಿದರು. ಇದರೊಂದಿಗೆ, 25 ವರ್ಷ ದಾಟುವ ಮೊದಲು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1,000 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2 / 5
ತಿಲಕ್ ವರ್ಮಾ 23 ವರ್ಷ ಮತ್ತು 31 ದಿನಗಳಲ್ಲಿ ಕೇವಲ 34 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ತಿಲಕ್‌ಗಿಂತ ಮೊದಲು, 25 ವರ್ಷ ಮತ್ತು 65 ದಿನಗಳಲ್ಲಿ 1,000 ಟಿ20 ರನ್ ಪೂರೈಸಿದ್ದ ಅಭಿಷೇಕ್ ಶರ್ಮಾ ಹೆಸರಲ್ಲಿ ಈ ದಾಖಲೆ ಇತ್ತು. ಇದು ಮಾತ್ರವಲ್ಲದೆ ತಿಲಕ್ ವರ್ಮಾ ಟಿ20ಗಳಲ್ಲಿ 1,000 ರನ್ ಗಳಿಸಿದ 13 ನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

3 / 5
ಹಾಗೆಯೇ ತಿಲಕ್ ವರ್ಮಾ 1,000 ರನ್‌ಗಳನ್ನು ವೇಗವಾಗಿ ತಲುಪಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ 27 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾ 28 ಇನ್ನಿಂಗ್ಸ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

4 / 5
ಟಿ20 ಕ್ರಿಕೆಟ್​ನಲ್ಲಿ ತಿಲಕ್ ವಿಶೇಷ ಮೈಲಿಗಲ್ಲು ದಾಟಿದರು ಈ ಪಂದ್ಯದಲ್ಲಿ ಅವರ ಬ್ಯಾಟಿಂಗ್ ತೀರ ನಿಧಾನಗತಿಯಲ್ಲಿತ್ತು. ತಮ್ಮ ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 32 ಎಸೆತಗಳನ್ನು ಎದುರಿಸಿದ ತಿಲಕ್ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಕೇವಲ 26 ರನ್ ಗಳಿಸಿ ಔಟಾದರು. ಆದಾಗ್ಯೂ ಈ ಪಂದ್ಯದಲ್ಲಿ ಅವರು ಬಾರಿಸಿದ ಸಿಕ್ಸರ್ ನೇರವಾಗಿ ಮೈದಾನದಿಂದ ಹೊರಗೆ ಹೋಗಿ ಬಿದ್ದಿದ್ದು, ಅಭಿಮಾನಿಗಳಿಗೆ ಬರಪೂರ ಮನರಂಜನೆ ನೀಡಿತು.

5 / 5