AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಲೀಗ್​ನಲ್ಲಿ ಮತ್ತೆ ಬ್ಯಾಟ್ ಬೀಸಲಿದ್ದಾರೆ ಯುವಿ, ರೈನಾ

US Masters T10 League 2023: ಈ ಹಿಂದೆ ಭಾರತದ ಪರ ಮಿಂಚಿದ್ದ ಇರ್ಫಾನ್ ಪಠಾಣ್, ರಾಬಿನ್ ಉತ್ತಪ್ಪ, ಶ್ರೀಶಾಂತ್, ಗೌತಮ್ ಗಂಭೀರ್, ಸುರೇಶ್ ರೈನಾ , ಯೂಸುಫ್ ಪಠಾಣ್, ಯುವರಾಜ್ ಸಿಂಗ್ ಸೇರಿದಂತೆ ಹಲವು ಆಟಗಾರರು ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೊಸ ಲೀಗ್​ನಲ್ಲಿ ಮತ್ತೆ ಬ್ಯಾಟ್ ಬೀಸಲಿದ್ದಾರೆ ಯುವಿ, ರೈನಾ
Yuvraj Singh-Suresh Raina
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 17, 2023 | 5:17 PM

ಟಿ10 ಕ್ರಿಕೆಟ್​ನಲ್ಲಿ ಮತ್ತೊಂದು ಲೀಗ್ ಸೇರ್ಪಡೆಯಾಗಿದೆ. ಯುಎಇ ಟಿ10 ಲೀಗ್, ಝಿಮ್​-ಆಫ್ರೊ ಟಿ10 ಲೀಗ್​ಗಳ ಬಳಿಕ ಇದೀಗ ಹೊಸ ಟೂರ್ನಿ ಯುಎಸ್​ ಟಿ10 ಲೀಗ್​ ಆಗಸ್ಟ್ 18 ರಿಂದ ಶುರುವಾಗಿದೆ. ಯುಎಸ್​ಎನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರರು ಕೂಡ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಈ ಹಿಂದೆ ಭಾರತದ ಪರ ಮಿಂಚಿದ್ದ ಇರ್ಫಾನ್ ಪಠಾಣ್, ರಾಬಿನ್ ಉತ್ತಪ್ಪ, ಶ್ರೀಶಾಂತ್, ಗೌತಮ್ ಗಂಭೀರ್, ಸುರೇಶ್ ರೈನಾ , ಯೂಸುಫ್ ಪಠಾಣ್, ಯುವರಾಜ್ ಸಿಂಗ್ ಸೇರಿದಂತೆ ಹಲವು ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಹಾಗೆಯೇ ಕ್ರಿಸ್ ಗೇಲ್, ಶಾಹಿದ್ ಅಫ್ರಿದಿ, ಮೊಹಮ್ಮದ್ ಹಫೀಜ್ ಮತ್ತು ಕೋರಿ ಆಂಡರ್ಸನ್ ಅವರಂತಹ ಕೆಲವು ಪ್ರಮುಖ ಟಿ20 ಆಟಗಾರರು ಸಹ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಟೂರ್ನಿಗಾಗಿ ಆಯ್ಕೆ ಮಾಡಲಾಗಿರುವ 6 ತಂಡಗಳು ಈ ಕೆಳಗಿನಂತಿದೆ.

ಅಟ್ಲಾಂಟಾ ರೈಡರ್ಸ್: ಲೆಂಡ್ಲ್ ಸಿಮನ್ಸ್, ಗ್ರಾಂಟ್ ಎಲಿಯಟ್, ಹಮ್ಮದ್ ಅಜಮ್, ಜುನೈದ್ ಸಿದ್ದಿಕ್, ಡೇವಿಡ್ ಹಸ್ಸಿ, ಡ್ವೇನ್ ಸ್ಮಿತ್, ಚತುರಂಗ ಡಿ ಸಿಲ್ವಾ, ನಾಸಿರ್ ಹೊಸೈನ್, ಹ್ಯಾಮಿಲ್ಟನ್ ಮಸಕಡ್ಜಾ, ಫರ್ಹಾದ್ ರೆಜಾ, ರಾಬಿನ್ ಉತ್ತಪ್ಪ (ನಾಯಕ), ಎಸ್ ಶ್ರೀಶಾಂತ್, ಮೊಹಮ್ಮದ್ ಸುನ್ನಿ, ಮೊಹಮ್ಮದ್ ಇರ್ಫಾನ್, ಕಮ್ರುಲ್ ಇಸ್ಲಾಂ, ಅಮಿಲಾ ಅಪೊನ್ಸೊ

ಕ್ಯಾಲಿಫೋರ್ನಿಯಾ ನೈಟ್ಸ್: ಸುರೇಶ್ ರೈನಾ (ನಾಯಕ), ಮೊಹಮ್ಮದ್ ಕೈಫ್, ಆರೋನ್ ಫಿಂಚ್ , ರಿಕಾರ್ಡೊ ಪೊವೆಲ್, ಜೆಸಲ್ ಕರಿಯಾ, ಜಾಕ್ವೆಸ್ ಕಾಲಿಸ್, ಇರ್ಫಾನ್ ಪಠಾಣ್, ದಿನೇಶ್ ರಾಮ್ದಿನ್, ಅನುರೀತ್ ಸಿಂಗ್, ಪವನ್ ಸುಯಲ್, ಸುದೀಪ್ ತ್ಯಾಗಿ, ಬೆನ್ ಲಾಫ್ಲಿನ್, ಪೀಟರ್ ಸಿಡ್ಲ್, ಆಶ್ಲೇ ನರ್ಸ್, ದೇವೇಂದ್ರ ಬಿಶು, ರಸ್ಟಿ ಥರಾನ್.

ನ್ಯೂಯಾರ್ಕ್ ವಾರಿಯರ್ಸ್: ಮುರಳಿ ವಿಜಯ್ , ಮಿಸ್ಬಾ-ಉಲ್-ಹಕ್, ಕೋಡಿ ಚೆಟ್ಟಿ, ಚಾಮರ ಕಪುಗೆಡೆರಾ, ತಿಲಕರತ್ನೆ ದಿಲ್ಶನ್, ಜೊನಾಥನ್ ಕಾರ್ಟರ್, ಶಾಹಿದ್ ಅಫ್ರಿದಿ (ನಾಯಕ), ಜೋಹಾನ್ ಬೋಥಾ, ಉಮೈದ್ ಆಸಿಫ್, ಕಮ್ರಾನ್ ಅಕ್ಮಲ್, ವಿಲಿಯಂ ಪರ್ಕಿನ್ಸ್, ಮುನಾಫ್ ಪಟೇಲ್, ಸೊಹೈಲ್ ಖಾನ್, ಅಬ್ದುರ್ ರೆಹಮಾನ್, ಜೆರೋಮ್ ಟೇಲರ್, ಧಮ್ಮಿಕಾ ಪ್ರಸಾದ್.

ಟೆಕ್ಸಾಸ್ ಚಾರ್ಜರ್ಸ್: ರಾಸ್ ಟೇಲರ್ , ನೀಲ್ ಬ್ರೂಮ್, ಉಪುಲ್ ತರಂಗ , ನೂರ್ ಅಲಿ ಜದ್ರಾನ್, ಮೊಹಮ್ಮದ್ ಹಫೀಜ್ (ನಾಯಕ), ಇಸುರು ಉದಾನ, ತಿಸಾರಾ ಪೆರಿಯಾ, ಜೀವನ್ ಮೆಂಡಿಸ್, ಬೆನ್ ಡಂಕ್, ಫಿಲ್ ಮಸ್ಟರ್ಡ್, ಪ್ರವೀಣ್ ಕುಮಾರ್, ಪ್ರಗ್ಯಾನ್ ಓಜಾ, ಸಿದ್ಧಾರ್ಥ್ ತ್ರಿವೇದಿ, ಫಿಡೆಲ್ ಆಡಮ್ಸ್, ಎಡ್ವರ್ಡ್ಸ್, ಉಮರ್ ಗುಲ್.

ಇದನ್ನೂ ಓದಿ: ಜಸ್​ಪ್ರೀತ್ ಬುಮ್ರಾ ಟಿ20 ತಂಡದ 11ನೇ ನಾಯಕ: ಉಳಿದ 10 ಕ್ಯಾಪ್ಟನ್​ಗಳ ಪಟ್ಟಿ ಇಲ್ಲಿದೆ

ನ್ಯೂಜೆರ್ಸಿ ಲೆಜೆಂಡ್ಸ್: ಗೌತಮ್ ಗಂಭೀರ್ (ನಾಯಕ), ರಾಜೇಶ್ ಬಿಷ್ಣೋಯ್, ಕ್ರೇಗ್ ಮೆಕ್‌ಸಿಮಿಲನ್, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಅಲ್ಬಿ ಮೊರ್ಕೆಲ್, ಜೆಸ್ಸಿ ರೈಡರ್, ಕ್ರಿಸ್ಟೋಫರ್ ಬಾರ್ನ್‌ವೆಲ್, ನಮನ್ ಓಜಾ, ಟಿಮ್ ಆಂಬ್ರೋಸ್, ಆರ್‌ಪಿ ಸಿಂಗ್, ಅಭಿಮನ್ಯು ಶರ್ಮಾ, ಬಿಮ್ಯುಲ್ ಶರ್ಮಾ, ಬಿ. ಪ್ಲಂಕೆಟ್, ಮಾಂಟಿ ಪನೇಸರ್.