
IPL 2025: ಟಿ20 ಕ್ರಿಕೆಟ್ನಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಕೇವಲ 35 ಎಸೆತಗಳಲ್ಲಿ 11 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಶತಕ ಸಿಡಿಸುವ ಮೂಲಕ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಿಯಾನ್ ಪರಾಗ್ ಗುಜರಾತ್ ಟೈಟಾನ್ಸ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 209 ರನ್ ಕಲೆಹಾಕಿತು.
210 ರನ್ಗಳ ಕಠಿಣ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯುವ ಎಡಗೈ ದಾಂಡಿಗರಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಸ್ಪೋಟಕ ಆರಂಭ ಒದಗಿಸಿದರು. ಇಬ್ಬರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಪವರ್ಪ್ಲೇನಲ್ಲಿ 87 ರನ್‌ಗಳು ಮೂಡಿಬಂತು. ಅಲ್ಲದೆ ಮೊದಲ ವಿಕೆಟ್ಗೆ 166 ರನ್ಗಳ ಜೊತೆಯಾಟವಾಡಿದ ಬಳಿಕ ವೈಭವ್ ಸೂರ್ಯವಂಶಿ (101) ಔಟಾದರು.
ಮತ್ತೊಂದೆಡೆ ರ್ರೀಸ್ ಕಚ್ಚಿ ಆಡಿದ ಯಶಸ್ವಿ ಜೈಸ್ವಾಲ್ ಅಜೇಯ 70 ರನ್ ಬಾರಿಸುವ ಮೂಲಕ 15.5 ಓವರ್ಗಳಲ್ಲಿ ತಂಡವನ್ನು ಗೆಲುವಿ ದಡ ಸೇರಿಸಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ವೈಭವ್ ಸೂರ್ಯವಂಶಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದೀಗ ವೈಭವ್ ಸೂರ್ಯವಂಶಿ ಅವರ ವೈಭವಯುತ ಬ್ಯಾಟಿಂಗ್ ಬಗ್ಗೆ ಮಾಜಿ ಹಾಗೂ ಹಾಲಿ ಆಟಗಾರರು ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಅದರಂತೆ ಯುವ ದಾಂಡಿಗನ ಭರ್ಜರಿ ಪ್ರದರ್ಶನಕ್ಕೆ ಯಾರು ಏನು ಹೇಳಿದ್ದಾರೆ ಎಂದು ನೋಡುವುದಾದರೆ….
ವೈಭವ್ ಅವರ ನಿರ್ಭೀತ ಬ್ಯಾಟಿಂಗ್, ವೇಗ, ಆರಂಭಿಕ ಲೆಂತ್ ಆಯ್ಕೆ ಮತ್ತು ಚೆಂಡಿನ ವಿರುದ್ಧ ತೋರಿದ ಶಕ್ತಿ, ಎಲ್ಲವೂ ಅದ್ಭುತ ಇನ್ನಿಂಗ್ಸ್‌ನ ಹಿಂದಿನ ಪಾಕವಿಧಾನವಾಗಿತ್ತು. ಅಂತಿಮ ಫಲಿತಾಂಶ: 38 ಎಸೆತಗಳಲ್ಲಿ 101 ರನ್‌ಗಳು. ಚೆನ್ನಾಗಿ ಆಡಿದರು ಎಂದು ಸಚಿನ್ ತೆಂಡೂಲ್ಕರ್ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
Vaibhav’s fearless approach, bat speed, picking the length early, and transferring the energy behind the ball was the recipe behind a fabulous innings.
End result: 101 runs off 38 balls.
Well played!!pic.twitter.com/MvJLUfpHmn
— Sachin Tendulkar (@sachin_rt) April 28, 2025
ಯುವ ದಾಂಡಿಗನಿಂದ ನಡೆದ ಕಗ್ಗೊಲೆಯ ಇನ್ನಿಂಗ್ಸ್ ಅನ್ನು ಕಣ್ಣಾರೆ ಕಂಡೆ. ನಂಬಲಾಸಾಧ್ಯ ಆಟ ಎಂದು ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Witnessed this carnage of an innings by this youngster. Absolutely insane! 🧿🧿🧿 pic.twitter.com/b0xJb9jMER
— Surya Kumar Yadav (@surya_14kumar) April 28, 2025
ವೈಭವ್ ಸೂರ್ಯವಂಶಿ, ಎಂತಹ ಅದ್ಭುತ ಪ್ರತಿಭೆ.. ಕೇವಲ 14 ವರ್ಷ ವಯಸ್ಸಿನಲ್ಲಿ ಶತಕ ಗಳಿಸುವುದು ನಂಬಲಸಾಧ್ಯ. ಮಿಂಚುತ್ತಲೇ ಇರು ಸಹೋದರ ಎಂದು ಮೊಹಮ್ಮದ್ ಶಮಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
Vaibhav Suryavanshi, what an incredible talent..Scoring a century at just 14 is unreal. Keep shining brother …. #IPLCentury #vaibhavsuryavanshi pic.twitter.com/BsahBrZDj0
— 𝕸𝖔𝖍𝖆𝖒𝖒𝖆𝖉 𝖘𝖍𝖆𝖒𝖎 (@MdShami11) April 28, 2025
14 ವರ್ಷದ ವೈಭವ್ ಸೂರ್ಯವಂಶಿ 35 ಎಸೆತಗಳಲ್ಲಿ ಐಪಿಎಲ್ ಶತಕ ಬಾರಿಸಿದ್ದಾರೆ. ಇದು ಗಮನಾರ್ಹ ಸಾಧನೆ ಎಂದು ವೆಸ್ಟ್ ಇಂಡೀಸ್ನ ದಿಗ್ಗಜ ಇಯಾನ್ ಬಿಷಪ್ ಯುವ ದಾಂಡಿಗನನ್ನು ಕೊಂಡಾಡಿದ್ದಾರೆ.
14 yr old Vaibhav Suryavanshi has bludgeoned an IPL century in 2025 off 35 deliveries. Remarkable👏🏽👏🏽👏🏽👏🏽.
— Ian Raphael Bishop (@irbishi) April 28, 2025
ಈ ಹುಡುಗ ಐಪಿಎಲ್ ಅನ್ನು ಮಕ್ಕಳಾಟ ಮಾಡಿಬಿಟ್ಟ. ಹದಿಹರೆಯದ ವೈಭವ್ ಸೂರ್ಯವಂಶಿ ಅವರಿಂದ ನಂಬಲಾಗದ ಸ್ಟ್ರೋಕ್ ಆಟ ಎಂದು ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
Is Bacche ne IPL ko bachho Ka khela bana Diya hai. Unbelievable stroke play from Teenager Vaibhav Suryavanshi.
— Irfan Pathan (@IrfanPathan) April 28, 2025
ನನ್ನ ಅತಿ ವೇಗದ ದಾಖಲೆಯನ್ನು ಮುರಿದ ಯುವ ವೈಭವ್ ಸೂರ್ಯವಂಶಿಗೆ ಅಭಿನಂದನೆಗಳು. ಐಪಿಎಲ್ನಲ್ಲಿ ಭಾರತೀಯರಿಂದ ಶತಕ ನೋಡುವುದು ವಿಶೇಷ ಅನುಭವ. ರಾಜಸ್ಥಾನ್ ರಾಯಲ್ಸ್ನಲ್ಲಿರುವಾಗ ನಾನು ಮಾಡಿದಂತೆಯೇ, ಇದೀಗ ವೈಭವ್ ಶತಕ ಸಿಡಿಸಿದ್ದಾನೆ. ಈ ಫ್ರಾಂಚೈಸಿಯಲ್ಲಿ ನಿಜವಾಗಿಯೂ ಏನೋ ಮಾಂತ್ರಿಕತೆಯಿದೆ. ಚಾಂಪಿಯನ್, ಬಹಳ ದೂರ ಸಾಗಬೇಕಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಯೂಸುಫ್ ಪಠಾಣ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Many congratulations to young #VaibhavSuryavanshi for breaking my record of the fastest @IPL hundred by an Indian! Even more special to see it happen while playing for @rajasthanroyals , just like I did. There’s truly something magical about this franchise for youngsters. Long… pic.twitter.com/kVa2Owo2cc
— Yusuf Pathan (@iamyusufpathan) April 28, 2025
ಇನ್ನು ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ವೀಕ್ಷಿಸಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕ್ಲಾಸ್ ಇನಿಂಗ್ಸ್ ಎಂದು ಇನ್ಸ್ಟಾಗ್ರಾಮ್ನಲ್ಲಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: IPL 2025: ಎಡಗೈ ದಾಂಡಿಗರ ಸಿಡಿಲಬ್ಬರಕ್ಕೆ RCB ದಾಖಲೆ ಧೂಳೀಪಟ
ಒಟ್ಟಿನಲ್ಲಿ ಚೊಚ್ಚಲ ಐಪಿಎಲ್ನಲ್ಲಿ ಸ್ಪೋಟಕ ಸೆಂಚುರಿ ಸಿಡಿಸುವ ಮೂಲಕ ವೈಭವ್ ಸೂರ್ಯವಂಶಿ ಹೊಸ ಸಂಚಲನ ಸೃಷ್ಟಿಸಿದ್ದು. ಈ ಸಂಚಲನದೊಂದಿಗೆ ಅವರು ಐಪಿಎಲ್ನಲ್ಲಿ ಮುಗಿಲೆತ್ತರಕ್ಕೇರುವ ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ.