ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಬಳಿಕ ಇದೀಗ ಟಿ20 ಸರಣಿಯಲ್ಲೂ ವಿರಾಟ್ ಕೊಹ್ಲಿ (Viart Kohli) ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗದೆ ಕಳಪೆ ಫಾರ್ಮ್ ಮುಂದುವರೆಸಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಚೇಸಿಂಗ್ನಲ್ಲಿ ಕಿಂಗ್ ಎನಿಸಿಕೊಂಡಿರುವ ವಿರಾಟ್ ಭಾನುವಾರ ನಡೆದ ತೃತೀಯ ಟಿ20 ಪಂದ್ಯದಲ್ಲೂ ಸಿಕ್ಕ ಅವಕಾಶವನ್ನು ಕೈಚೆಲ್ಲಿಕೊಂಡರು. 216 ರನ್ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ಟೀಮ್ ಇಂಡಿಯಾ (Team India) ಎರಡನೇ ಓವರ್ನ ಮೊದಲ ಎಸೆತದಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಕೊಹ್ಲಿ ಇನ್ನಿಂಗ್ಸ್ ಕಟ್ಟುವುದು ಮಹತ್ವದ್ದಾಗಿತ್ತು. ಆದರೆ, 6 ಎಸೆತಗಳಲ್ಲಿ 1 ಫೋರ್, 1 ಸಿಕ್ಸರ್ ಸಿಡಿಸಿ 11 ರನ್ಗೆ ಕೊಹ್ಲಿ ಬ್ಯಾಟ್ ಕೆಳಗಿಟ್ಟರು. ಇಲ್ಲಿಂದ ಕೊಹ್ಲಿಯನ್ನು ಭಾರತ ತಂಡದಿಂದ ಮುಖ್ಯವಾಗಿ ಟಿ20 ತಂಡದಿಂದ ಕೈಬಿಡುವಂತೆ ಅನೇಕರು ಟ್ವೀಟ್ ಮಾಡುತ್ತಿದ್ದಾರೆ. ಈ ಸಾಲಿಗೆ ಮಾಜಿ ಆಟಗಾರ, ಕರ್ನಾಟಕದ ವೆಂಕಟೇಶ್ ಪ್ರಸಾದ್ (Venkatesh Prasad) ಕೂಡ ಸೇರಿದ್ದಾರೆ.
ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಟ್ವೀಟ್ ಮಾಡಿರುವ ವೆಂಕಟೇಶ್ ಪ್ರಸಾದ್, “ಅದೊಂದು ಸಮಯ ಬರುತ್ತದೆ, ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಆಟಗಾರನನ್ನು ತಂಡದಿಂದ ಬಿಡಬೇಕು. ಅದು ಆತ ಎಷ್ಟೇ ಖ್ಯಾತಿಯನ್ನು ಪಡೆದುಕೊಂಡಿರಲಿ. ಸೌರವ್ ಗಂಗೂಲಿ, ವಿರೇಂದ್ರ ಸೆಹ್ವಾಗ್, ಯುವರಾಜ್ ಸಂಗ್, ಜಹಿರ್ ಖಾನ್, ಲಕ್ಷ್ಮೀಪತಿ ಬಾಲಾಜಿ ಹೀಗೆ ಅನೇಕರು ಫಾರ್ಮ್ನಲ್ಲಿ ಇಲ್ಲದಾಗ ಅವರನ್ನ ತಂಡದಿಂದ ಕೈಬಿಡಲಾಗಿತ್ತು. ಅವರು ದೇಶೀಯ ಕ್ರಿಕೆಟ್ನಲ್ಲಿ ಆಡಿ ರನ್ ಗಳಿಸಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.”
Hardik Pandya: ಮೈದಾನದಲ್ಲೇ ನಾಯಕ ರೋಹಿತ್ ಶರ್ಮಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಾರ್ದಿಕ್ ಪಾಂಡ್ಯ?
“ಫಾರ್ಮ್ ಕಳೆದುಕೊಂಡಾಗ ವಿಶ್ರಾಂತಿ ಪಡೆದುಕೊಳ್ಳುವುದು ಪ್ರಗತಿಗೆ ಮಾರ್ಗವಲ್ಲ. ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಖ್ಯಾತಿಯ ಮೇಲೆ ಆಟವಾಡಲು ಸಾಧ್ಯವಿಲ್ಲ. ಭಾರತದ ಶ್ರೇಷ್ಠ ಮ್ಯಾಚ್ ವಿನ್ನರ್‌ಗಳಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ ಕೂಡ ಅನೇಕ ಸಂದರ್ಭಗಳಲ್ಲಿ ತಂಡದಿಂದ ಹೊರಗುಳಿದಿದ್ದರು,” ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
Changed drastically now, where there is rest for being out of form. This is no way for progress. There is so much talent in the country and cannot play on reputation. One of India’s greatest match-winner, Anil Kumble sat out on so many ocassions, need action’s for the larger good
— Venkatesh Prasad (@venkateshprasad) July 10, 2022
ಕಪಿಲ್ ದೇವ್ ಏನಂದ್ರು?:
ಇತ್ತೀಚೆಗಷ್ಟೆ ಕಪಿಲ್ ದೇವ್ ಕೂಡ ಬಿಸಿಸಿಐಗೆ ಕೊಹ್ಲಿಯನ್ನು ತಂಡದಿಂದ ಕೈಬಿಡುವಂತೆ ಸೂಚಿಸಿದ್ದರು. “ವಿರಾಟ್ ಕೊಹ್ಲಿ ಸುಮಾರು 3 ವರ್ಷಗಳಿಂದ ದೊಡ್ಡ ಇನ್ನಿಂಗ್ಸ್ ಆಡಲು ಹೋರಾಡುತ್ತಿದ್ದಾರೆ. ಭಾರತೀಯ ತಂಡದ ಆಡಳಿತವು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ಲಯದಲ್ಲಿರುವ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡದಿದ್ದರೆ, ಅದು ಅವರಿಗೆ ಮಾಡುವ ಅನ್ಯಾಯವಾಗುತ್ತದೆ. ಹೀಗಾಗಿ ಫಾರ್ಮ್ನಲ್ಲಿ ಇಲ್ಲದವರನ್ನು ಕೈ ಬಿಟ್ಟು ಫಾರ್ಮ್ನಲ್ಲಿ ಇರುವವರಿಗೆ ಅವಕಾಶ ನೀಡಿ. ದೀರ್ಘಕಾಲದಿಂದ ಲಯಕ್ಕೆ ಮರಳಲು ಹೋರಾಡುತ್ತಿರುವ ವಿರಾಟ್ ಕೊಹ್ಲಿ ಟಿ20 ತಂಡದಿಂದ ಹೊರಗುಳಿಯಬೇಕು,” ಎಂದು ಹೇಳಿದ್ದರು.
ಕೊಹ್ಲಿ ಬೆನ್ನಿಗೆ ನಿಂತ ರೋಹಿತ್:
ಇವೆಲ್ಲದರ ನಡುವೆ ನಾಯಕ ರೋಹಿತ್ ಶರ್ಮಾ ಅವರು ಕೊಹ್ಲಿ ಪರವಾಗಿ ಮಾತನಾಡಿದ್ದಾರೆ. “ಕೆಲವರು ಕೊಹ್ಲಿಯ ಆಟವನ್ನು ಹೊರಗಡೆಯಿಂದ ನೋಡುತ್ತಿದ್ದಾರೆ. ಆದರೆ, ಇಲ್ಲಿ ಒಳಗಡೆ ಏನಾಗುತ್ತಿದೆ ಎಂದು ಅವರಿಗೆ ತಿಳಿದಿಲ್ಲ. ನಮಗೆ ನಮ್ಮದೆ ಆದ ಕೆಲ ಆಲೋಚನೆಗಳಿವೆ. ನಾವು ತಂಡ ಕಟ್ಟುತ್ತಿದ್ದೇವೆ. ಇದರ ಹಿಂದೆ ಯೋಜನೆಗಳಿವೆ. ಈ ವಿಚಾರವೆಲ್ಲ ಹೊರಗಡೆ ತಿಳಿಯುವುದಿಲ್ಲ. ನೀವು ಫಾರ್ಮ್ ವಿಚಾರವಾಗಿ ಮಾತನಾಡುತ್ತಿದ್ದರೆ ಏಳು-ಬೀಳು ಪ್ರತಿಯೊಬ್ಬ ಆಟಗಾರನಲ್ಲೂ ಇರುತ್ತದೆ. ಅದು ಆಟಗಾರನ ಗುಣಮಟ್ಟದ ಮೇಲೆ ಯಾವುದೇ ಪರಿಣಾಮ ಬೀಳುವುದಿಲ್ಲ. ಒಬ್ಬ ಆಟಗಾರನು ಇಷ್ಟು ವರ್ಷಗಳ ಕಾಲ ಉತ್ತಮವಾಗಿ ಆಡುತ್ತಿದ್ದಾಗ ಕೆಲ ಕೆಟ್ಟ ಸರಣಿಗಳು ಅವರನ್ನು ಕಳಪೆ ಆಟಗಾರನನ್ನಾಗಿ ಮಾಡುವುದಿಲ್ಲ. ಅವರ ಹಿಂದಿನ ಪ್ರದರ್ಶನಗಳನ್ನು ನಾವು ಕಡೆಗಣಿಸಬಾರದು ಎಂದು ಖಡಕ್ ಆಗಿ ಹೇಳಿದ್ದಾರೆ.
Published On - 12:36 pm, Mon, 11 July 22