AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hardik Pandya: ಮೈದಾನದಲ್ಲೇ ನಾಯಕ ರೋಹಿತ್​ ಶರ್ಮಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಾರ್ದಿಕ್ ಪಾಂಡ್ಯ?

Rohit Sharma, IND vs ENG: ಭಾರತ ಇಂಗ್ಲೆಂಡ್ ನಡುವಣ ದ್ವಿತೀಯ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ವೈರಲ್ ಆಗುತ್ತಿದೆ.

Hardik Pandya: ಮೈದಾನದಲ್ಲೇ ನಾಯಕ ರೋಹಿತ್​ ಶರ್ಮಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಾರ್ದಿಕ್ ಪಾಂಡ್ಯ?
Rohit Sharma and Hardik Pandya
TV9 Web
| Updated By: Vinay Bhat|

Updated on:Jul 11, 2022 | 12:13 PM

Share

ಭಾನುವಾರ ರಾತ್ರಿ ಟ್ರೆಂಟ್​​ಬ್ರಿಡ್ಜ್​ನ ನ್ಯಾಟಿಂಗ್​ಹ್ಯಾಮ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ತೃತೀಯ ಟಿ20 ಪಂದ್ಯದಲ್ಲಿ ಭಾರತ (England vs India) ಹೋರಾಡಿ ಸೋಲು ಕಂಡಿತು. ಕೆಲ ಬದಲಾವಣೆಗಳಿಂದ ಕೂಡಿದ್ದ ಟೀಮ್ ಇಂಡಿಯಾ ಬೌಲಿಂಗ್ ಪಡೆ ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ವಿಫಲವಾಯಿತು. ಇದರಿಂದಲೇ ಆಂಗ್ಲರ ಮೊತ್ತ 200ರ ಗಡಿ ದಾಟಿತು. ಭಾರತ ಅಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಸೂರ್ಯಕುಮಾರ್ ಯಾದವ್ (Suryakumar Yadav) ಆಕರ್ಷಕ ಶತಕ ಸಿಡಿಸಿ ತಂಡದ ಗೆಲುವಿಗೆ ಹೋರಾಟ ನಡೆಸಿದರೂ ಯಶಸ್ಸು ಸಿಗಲಿಲ್ಲ. ಆದರೂ ಸರಣಿಯನ್ನು 2-1 ಅಂತರದಿಂದ ಭಾರತ ವಶಪಡಿಸಿಕೊಂಡಿತು ಎಂಬುದು ಸಮಾಧಾನ. ಹೀಗಿರುವಾಗ ಭಾರತ- ಇಂಗ್ಲೆಂಡ್ ಎರಡನೇ ಟಿ20 ಪಂದ್ಯದ ನಡುವಣ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ಅಚ್ಚರಿ ಎಂಬಂತೆ ಇದರಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರ ಧ್ವನಿ ಇದೆ.

ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ನೀಡಿದ್ದ 171 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಲು ಬಂದ ಇಂಗ್ಲೆಂಡ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಹಾರ್ದಿಕ್ ಪಾಂಡ್ಯ ಕೂಡ ಬೌಲಿಂಗ್ ಮಾಡಿದ್ದರು. ಆದರೆ, ದುಬಾರಿ ಎನಿಸಿಕೊಂಡರು. ಇದರ ನಡುವೆ ಇಂಗ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್​ನ 4ನೇ ಓವರ್ ಆಗುವಾಗ ಹಾರ್ದಿಕ್ ಆಡಿರುವ ಕೆಲ ಮಾತುಗಳು ಲೈವ್​ನಲ್ಲಿ ರೆಕಾರ್ಡ್ ಆಗಿವೆ. ಆದರೆ, ಆಡಿಯೋ ತೀರಾ ಕಳಪೆಯಾಗಿದ್ದು, ಇದರಲ್ಲಿ ಹಾರ್ದಿಕ್ ಅವರು ರೋಹಿತ್ ಬಗ್ಗೆ ಫೀಲ್ಡರ್​ ಜೊತೆ ಮಾತನಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ
Image
IND vs ENG: ಭಾರತ-ಇಂಗ್ಲೆಂಡ್ 3ನೇ ಟಿ20 ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿದೆ ನೋಡಿ
Image
Rohit Sharma: ಪಂದ್ಯ ಮುಗಿದ ಬಳಿಕ ಕೊಹ್ಲಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ರೋಹಿತ್ ಶರ್ಮಾ: ಏನಂದ್ರು ಗೊತ್ತೇ?
Image
Virat Kohli: 4,6 ಮತ್ತು ಔಟ್: ಮೈ ಜುಮ್ ಎನಿಸುವ ಕೊಹ್ಲಿಯ ಎರಡು ಅದ್ಭುತ ಶಾಟ್​ಗೆ ಫ್ಯಾನ್ಸ್ ಫಿದಾ
Image
Wimbledon 2022: ಸತತ ನಾಲ್ಕನೇ ಬಾರಿಗೆ ಚಾಂಪಿಯನ್; 21 ನೇ ಗ್ರ್ಯಾಂಡ್ ಸ್ಲಾಮ್ ಗೆದ್ದ ನೊವಾಕ್ ಜೊಕೊವಿಕ್..!

Suryakumar Yadav: ಶಾಕಿಂಗ್: ಸೂರ್ಯಕುಮಾರ್ ಬಗ್ಗೆ 10 ವರ್ಷದ ಹಿಂದೆ ರೋಹಿತ್ ಮಾಡಿದ್ದ ಟ್ವೀಟ್ ವೈರಲ್

“ನಾನು ಬೌಲಿಂಗ್ ಮಾಡಬೇಕಾದರೆ ನಾನು ಹೇಳಿದ್ದನ್ನ ಕೇಳು, ನಾನು ಹೇಳಿದಲ್ಲಿ ನಿಲ್ಲು, ಅವನು ಹೇಳಿದ ಕಡೆ ಅಲ್ಲ,” ಎಂಬ ರೀತಿ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಆಡಿಯೋ ಸ್ಪಷ್ಟವಾಗಿ ಕೇಳುತ್ತಿಲ್ಲ. ಆದರೂ ಅನೇಕರು ಇದೇರೀತಿ ಹಾರ್ದಿಕ್ ಹೇಳಿದ್ದಾರೆ ಎಂದು ಟ್ವೀಟ್ ಮಾಡುತ್ತಿದ್ದಾರೆ. ಆದರೆ, ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಇನ್ನೂ ತಿಳಿದಿಲ್ಲ.

ಭಾನುವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ 216 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಭಾರತ ಬೇಗನೆ ರಿಷಭ್ ಪಂತ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಸೂರ್ಯಕುಮಾರ್ ಯಾದವ್  ಎಚ್ಚರಿಕೆಯಿಂದ ಸ್ಫೋಟಕ ಆಟವಾಡಿದರೆ ಶ್ರೇಯಸ್ ಅಯ್ಯರ್ ಅತ್ಯುತ್ತಮ ಸಾಥ್ ನೀಡಿದರು. ಇವರಿಬ್ಬರು 4ನೇ ವಿಕೆಟ್​​ಗೆ ಬರೋಬ್ಬರಿ 119 ರನ್​ಗಳ ಜೊತೆಯಾಟ ಆಡಿದರು. ಅಯ್ಯರ್ ನಿರ್ಗಮನದ ಬಳಿಕ ಭಾರತ ದಿಢೀರ್ ಕುಸಿತ ಕಂಡಿತು. ಆದರೂ ಸೂರ್ಯಕುಮಾರ್ ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸುತ್ತಲೇ ಇದ್ದರು. ಆದರೆ, ಇದು ಫಲ ಸಿಗಲಿಲ್ಲ. 55 ಎಸೆತಗಳಲ್ಲಿ 14 ಫೋರ್, 6 ಸಿಕ್ಸರ್ ಸಿಡಿಸಿ 117 ರನ್​ಗೆ ಔಟಾಗುವ ಮೂಲಕ ಭಾರತ ಸೋಲುಂಡಿತು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಂಡಿಲ್ಲ, ಆದರೂ ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಡೇವಿಡ್ ಮಲನ್ ಹಾಗೂ ಲಿಯಾಮ್ ಲಿವಿಂಗ್​ಸ್ಟೋನ್ ಭಾರತೀಯ ಬೌಲರ್​ಗಳನ್ನು ಕಾಡಿದರು. ಮಲನ್ ಕೇವಲ 39 ಎಸೆತಗಳಲ್ಲಿ 6 ಫೋರ್, 5 ಸಿಕ್ಸರ್ ಸಿಡಿಸಿ 77 ರನ್ ಚಚ್ಚಿದರೆ, ಲಿಯಾಮ್ ಅಜೇಯ 42 ರನ್ ಕಲೆಹಾಕಿ ತಂಡದ ಮೊತ್ತವನ್ನು 20 ಓವರ್​ನಲ್ಲಿ 215 ರನ್​ಗೆ ತಂದಿಟ್ಟು ಜಯದಲ್ಲಿ ಮುಖ್ಯ ಪಾತ್ರವಹಿಸಿದರು.

Published On - 11:36 am, Mon, 11 July 22