ಮತ್ತೊಂದು ಶತಕ ಸಿಡಿಸಿದ ದೇವದತ್ ಪಡಿಕ್ಕಲ್! ಸತತ ಐದನೇ ಗೆಲುವು ದಾಖಲಿಸಿದ ಕರ್ನಾಟಕ
Vijay Hazare Trophy 2023: ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿರುವ ಮಯಾಂಕ್ ಅಗರ್ವಾಲ್ ಪಡೆ ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿದೆ.
ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy 2023) ಕರ್ನಾಟಕ ತಂಡ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿರುವ ಮಯಾಂಕ್ ಅಗರ್ವಾಲ್ ಪಡೆ ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿದೆ. ಚಂಢೀಗಡ ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ (Karnataka vs Chandigarh) ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 299 ರನ್ ಕಲೆಹಾಕಿತು. ತಂಡದ ಪರ ದೇವದತ್ ಪಡಿಕ್ಕಲ್ (Devdutt Padikkal) 114 ರನ್‌ಗಳ ಶತಕದ ಇನ್ನಿಂಗ್ಸ್ ಆಡಿದರೆ, ನಿಖಿನ್ ಜೋಶ್ ಕೂಡ 96 ರನ್ ಸಿಡಿಇಸ4 ರನ್ಗಳಿಂದ ಶತಕ ವಂಚಿತರಾದರು. ಈ ಗುರಿ ಬೆನ್ನಟ್ಟಿದ ಚಂಢೀಗಡ ತಂಡ 7 ವಿಕೆಟ್ ಕಳೆದುಕೊಂಡು 277 ರನ್ಗಳಿಸಲಷ್ಟೇ ಶಕ್ತವಾಗಿ 22 ರನ್ಗಳಿಂದ ಸೋಲೊಪ್ಪಿಕೊಂಡಿತು.
ಉತ್ತಮ ಆರಂಭ ಸಿಗಲಿಲ್ಲ
ಮೇಲೆ ಹೇಳಿದಂತೆ ಕರ್ನಾಟಕ ತಂಡದ ನಾಯಕ ಮಯಾಂಕ್ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ನಾಯಕನ ಈ ತೀರ್ಮಾನ ತಪ್ಪು ಎಂಬುದು ತಂಡದ ಬ್ಯಾಟಿಂಗ್ ಆರಂಭವಾದ 4ನೇ ಓವರ್ಗೆ ತಿಳಿಯಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಸಮರ್ಥ್ ಅವರ ಜೊತೆಯಾಟ 20 ರನ್ಗಳಿಗೆ ಕೊನೆಗೊಂಡಿತು. ಸಮರ್ಥ ಕೇವಲ 5 ರನ್ ಗಳಿಸಿ ಔಟಾದರು. ಇದರ ನಂತರ ನಾಯಕ ಮಯಾಂಕ್ ಅಗರ್ವಾಲ್ ಕೂಡ ಯಾವುದೇ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿದೆ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಸಮಯದಲ್ಲಿ ತಂಡದ ಸ್ಕೋರ್ 39 ರನ್ ಆಗಿತ್ತು.
Happy Birthday Devdutt Padikkal: ಕನ್ನಡಿಗ ದೇವದತ್ ಪಡಿಕ್ಕಲ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ
ಅದ್ಭುತ ಫಾರ್ಮ್ನಲ್ಲಿರುವ ಪಡಿಕ್ಕಲ್
ಆರಂಭದಲ್ಲಿ ಎರಡು ವಿಕೆಟ್‌ಗಳು ಬಿದ್ದ ನಂತರ, ದೇವದತ್ ಪಡಿಕ್ಕಲ್ ಮತ್ತು ನಿಕಿನ್ ಜೋಸ್ ತಂಡದ ಇನ್ನಿಂಗ್ಸ್ ನಿಭಾಯಿಸಿ ಇಬ್ಬರೂ ಮೂರನೇ ವಿಕೆಟ್‌ಗೆ 171 ರನ್‌ಗಳ ಅದ್ಭುತ ಶತಕದ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ 103 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 9 ಬೌಂಡರಿಗಳ ಸಹಾಯದಿಂದ 114 ರನ್ ಬಾರಿಸಿದ್ದ ಪಡಿಕ್ಕಲ್ ತಮ್ಮ ವಿಕೆಟ್ ಒಪ್ಪಿಸಿದರು. ಈ ಸೀಸನ್ನಲ್ಲಿ ಇದು ಅವರ ಎರಡನೇ ಶತಕವಾಗಿದ್ದು, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರ 8 ನೇ ಶತಕವಾಗಿದೆ. ದೇವದತ್ ಪಡಿಕ್ಕಲ್ ಈ ಸೀಸನ್ನಲ್ಲಿ ಇದುವರೆಗೆ ಕಳೆದ ಐದು ಪಂದ್ಯಗಳಲ್ಲಿ 71 , 117, 70, 93 , 114 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
Devdutt Padikkal's scintillating form in #VijayHazareTrophy continues!
71* against J & K117* against Uttarakhand70 against Delhi 93* against Bihar100* against Chandigarh today
Follow live updates👉https://t.co/2mLFjnzPNu#UTCAvKAR pic.twitter.com/3ecJHjUuMZ
— Sportstar (@sportstarweb) December 1, 2023
ಪಡಿಕ್ಕಲ್ ಜೊತೆ ಶತಕದ ಜೊತೆಯಾಟವನ್ನಾಡಿದ್ದ ನಿಕಿನ್ ಕೂಡ 96 ರನ್‌ಗಳ ಅದ್ಭುತ ಕೊಡುಗೆ ನೀಡಿದರು. ನಿಕಿನ್ ಔಟಾದ ನಂತರ ಬಂದ ಮನೀಶ್ ಪಾಂಡೆ ಕೂಡ ಅದ್ಭುತವಾಗಿ ಬ್ಯಾಟಿಂಗ್ ಮಾಡಿ 48 ಎಸೆತಗಳಲ್ಲಿ 3 ಸಿಕ್ಸರ್‌ಗಳ ಸಹಾಯದಿಂದ 53 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.
ಅರ್ಸ್ಲಾನ್ ಖಾನ್ ಶತಕ
ಕರ್ನಾಟಕ ನೀಡಿದ 299 ರನ್‌ಗಳ ಗುರಿ ಬೆನ್ನಟ್ಟಿದ ಚಂಢೀಗಡ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ಅರ್ಸ್ಲಾನ್ ಖಾನ್ ಹಾಗೂ ಮನನ್ ವೋಹ್ರ ತಂಡಕ್ಕೆ 108 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ 34 ರನ್ ಬಾರಿಸಿದ್ದ ಮನನ್ ವಿಕೆಟ್ ಪತನವಾಯಿತು. ಮನನ್ ಬಳಿಕ ಬಂದ ಅಂಕಿತ್ ಕೌಶಿಕ್ ಕೂಡ ಅರ್ಸ್ಲಾನ್ ಅವರೊಂದಿಗೆ ಉತ್ತಮ ಜೊತೆಯಾಟ ನಡೆಸಿ 51 ರನ್‌ಗಳ ಇನ್ನಿಂಗ್ಸ್ ಆಡಿದರು. ಇದೇ ವೇಳೆ ಅರ್ಸ್ಲಾನ್ ಖಾನ್ ಕೂಡ 102 ರನ್‌ಗಳ ಶತಕದ ಇನ್ನಿಂಗ್ಸ್ ಆಡಿದ್ದರು.
22 ರನ್‌ಗಳ ಸೋಲು
ಈ ನಾಲ್ವರ ಜೊತೆಗೆ 4 ಕ್ರಮಾಂಕದಲ್ಲಿ ಬಂದ ಭಾಗಮೇಂದ್ರ ಲಾಥರ್ ಕೂಡ 32 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಆದರೆ ಈ ನಾಲ್ವರನ್ನು ಹೊರತುಪಡಿಸಿ ತಂಡದ ಉಳಿದವರಿಂದ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಬರಲಿಲ್ಲ. ಹೀಗಾಗಿ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 277 ರನ್ಗಳಿಸಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Fri, 1 December 23