IPL 2025: ಬುಮ್ರಾರನ್ನು ಸಿಕ್ಸರ್ ಮೂಲಕ ಸ್ವಾಗತಿಸಿದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ

|

Updated on: Apr 07, 2025 | 9:04 PM

Virat Kohli 13000 T20 runs: ಜಸ್ಪ್ರೀತ್ ಬುಮ್ರಾ ಕೊನೆಗೂ ಐಪಿಎಲ್ ಗೆ ಮರಳಿದ್ದಾರೆ. ವಿರಾಟ್ ಕೊಹ್ಲಿ ಬುಮ್ರಾ ಎಸೆದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಅವರನ್ನು ಸ್ವಾಗತಿಸಿದರು. ಇದಲ್ಲದೆ ಈ ಪಂದ್ಯದಲ್ಲಿ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 13,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ . ಐಪಿಎಲ್‌ನಲ್ಲಿ 50+ ಸ್ಕೋರ್‌ಗಳ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

IPL 2025: ಬುಮ್ರಾರನ್ನು ಸಿಕ್ಸರ್ ಮೂಲಕ ಸ್ವಾಗತಿಸಿದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ
Virat Kohli
Follow us on

ಕೊನೆಗೂ ಕೋಟ್ಯಾಂತರ ಅಭಿಮಾನಿಗಳ ಆಸೆ ಈಡೇರಿದೆ. ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಇಂಜುರಿಯಿಂದ ಚೇತರಿಸಿಕೊಂಡು ಐಪಿಎಲ್ (IPL 2025) ಅಖಾಡಕ್ಕಿಳಿದಿದ್ದಾರೆ. ಈ ಆವೃತ್ತಿಯ ಮೊದಲ ಪಂದ್ಯವನ್ನು ಆಡುತ್ತಿರುವ ಬುಮ್ರಾಗೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಬೆನ್ನು ನೋವಿನಿಂದ ಚೇತರಿಸಿಕೊಂಡು 92 ದಿನಗಳ ನಂತರ ಮೈದಾನಕ್ಕೆ ಮರಳಿದ ಬುಮ್ರಾಗೆ, ವಿರಾಟ್ ಕೊಹ್ಲಿ (Virat Kohli) ಅನಿರೀಕ್ಷಿತ ಸ್ವಾಗತ ನೀಡಿದ್ದಾರೆ. ಜಸ್ಪ್ರೀತ್ ಬುಮ್ರಾ ಎಸೆದ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸುವ ಮೂಲಕ ಸ್ವಾಗತ ಕೋರಿದರು. ಬುಮ್ರಾ ಎಸೆತವನ್ನು ವಿರಾಟ್ ಕೊಹ್ಲಿ ಮಿಡ್‌ವಿಕೆಟ್ ಮೇಲೆ ಸಿಕ್ಸರ್‌ಗಟ್ಟುವ ಮೂಲಕ ವಿಶ್ವದರ್ಜೆಯ ಬೌಲರ್​ಗೆ ಶಾಕ್ ನೀಡಿದರು.

13 ಸಾವಿರ ರನ್ ಪೂರೈಸಿದ ವಿರಾಟ್

ಬುಮ್ರಾ ಎಸೆತದಲ್ಲಿ ಸಿಕ್ಸರ್ ಬಾರಿಸಿದ ವಿರಾಟ್ ಕೊಹ್ಲಿ ಈ 6 ರನ್​​ಗಳ ನೆರವಿನಿಂದ ಟಿ20 ಕ್ರಿಕೆಟ್‌ನಲ್ಲಿ 13,000 ರನ್‌ಗಳನ್ನು ಪೂರ್ಣಗೊಳಿಸಿದರು. ವಿರಾಟ್ ಕೊಹ್ಲಿ 386 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು, ಈ ಮೂಲಕ ಅತಿ ವೇಗವಾಗಿ 13 ಸಾವಿರ ಟಿ20 ರನ್ ಪೂರೈಸಿದ ಏಷ್ಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 381 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಕ್ರಿಸ್ ಗೇಲ್ ಹೆಸರಿನಲ್ಲಿ ಈ ವಿಶ್ವ ದಾಖಲೆ ಇದೆ. ಇದು ಮಾತ್ರವಲ್ಲದೆ ಟಿ20ಯಲ್ಲಿ 13 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಎಂಬ ದಾಖಲೆಯೂ ಕೊಹ್ಲಿ ಪಾಲಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ಕೇವಲ ಐದು ಬ್ಯಾಟ್ಸ್‌ಮನ್‌ಗಳು 13 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಕ್ರಿಸ್ ಗೇಲ್ 14562 ರನ್ ಕಲೆಹಾಕಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅಲೆಕ್ಸ್ ಹೇಲ್ಸ್ 13610 ರನ್, ಶೋಯೆಬ್ ಮಲಿಕ್ 13557 ರನ್ ಹಾಗೂ ಕೀರನ್ ಪೊಲಾರ್ಡ್ 13537 ರನ್ ಗಳಿಸಿದ್ದಾರೆ. ಈಗ ವಿರಾಟ್ ಕೊಹ್ಲಿ ಕೂಡ ಈ ಕ್ಲಬ್‌ಗೆ ಸೇರಿದ್ದಾರೆ.

29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕೊಹ್ಲಿ

ಮುಂಬೈ ವಿರುದ್ಧ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಮಾಡಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಅರ್ಧಶತಕದ ಮೂಲಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 99 ಅರ್ಧಶತಕಗಳನ್ನು ಸಿಡಿಸಿದಂತ್ತಾಗಿದೆ. ಅಲ್ಲದೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಇದೀಗ ಕೊಹ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿರುವ ಡೇವಿಡ್ ವಾರ್ನರ್‌ ಐಪಿಎಲ್‌ನಲ್ಲಿ 66 ಬಾರಿ 50 ಪ್ಲಸ್ ಸ್ಕೋರ್ ಕಲೆಹಾಕಿದರೆ, ವಿರಾಟ್ ಕೊಹ್ಲಿ 65 ಬಾರಿ 50+ ರನ್ ಕಲೆಹಾಕಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:58 pm, Mon, 7 April 25