ಅತ್ತ ಭಾರತ-ಬಾಂಗ್ಲಾ ಪಂದ್ಯ ನಡೆಯುತ್ತದ್ದರೆ ಇತ್ತ ಬ್ಯಾಟಿಂಗ್ ಪ್ರ್ಯಾಕ್ಟೀಸ್​ಗೆ ಬಂದ ವಿರಾಟ್ ಕೊಹ್ಲಿ

Virat Kohli's practice session, Asia Cup Final: ಏಷ್ಯಾಕಪ್ 2023ರ ಸೂಪರ್-4ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ಬೌಲಿಂಗ್ ಇನ್ನಿಂಗ್ಸ್ ಮುಗಿದ ನಂತರ, ವಿರಾಟ್ ಕೋಹಿ ಒಂದು ಸೆಕೆಂಡ್ ಅನ್ನು ವ್ಯರ್ಥ ಮಾಡಲಿಲ್ಲ. ಕೂಡಲೇ ನೆಟ್​ನಲ್ಲಿ ಅಭ್ಯಾಸಕ್ಕೆ ಮುಂದಾದರು. ಸತತವಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು.

ಅತ್ತ ಭಾರತ-ಬಾಂಗ್ಲಾ ಪಂದ್ಯ ನಡೆಯುತ್ತದ್ದರೆ ಇತ್ತ ಬ್ಯಾಟಿಂಗ್ ಪ್ರ್ಯಾಕ್ಟೀಸ್​ಗೆ ಬಂದ ವಿರಾಟ್ ಕೊಹ್ಲಿ
Virat Kohli Practice
Follow us
Vinay Bhat
|

Updated on: Sep 16, 2023 | 9:01 AM

ಏಷ್ಯಾಕಪ್ 2023ರ ಫೈನಲ್​ನಲ್ಲಿ ಭಾರತ ತಂಡ ಶ್ರೀಲಂಕಾವನ್ನು ಎದುರಿಸಲಿರುವ ಕಾರಣ ಶುಕ್ರವಾರ ನಡೆದ ಸೂಪರ್-4 ಹಂತದ ಕೊನೆಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಆಡಲಿಲ್ಲ. ಕೊಹ್ಲಿ ಜೊತೆಗೆ ಜಸ್​ಪ್ರಿತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಸೇರಿದಂತೆ ಕೆಲ ಆಟಗಾರರಿ ವಿಶ್ರಾಂತಿ ನೀಡಲಾಗಿತ್ತು. ಇವರೆಲ್ಲ ವಿಶ್ರಾಂತಿ ಮೊರೆ ಹೋದರೆ ವಿರಾಟ್ ಕೊಹ್ಲಿ ಮಾತ್ರ ಇದಕ್ಕೆ ವಿರುದ್ಧವಾಗಿದ್ದರು. ಸದಾ ಆ್ಯಕ್ಟಿವ್ ಇರುವ ಕಿಂಗ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಬೌಲಿಂಗ್‌ನಲ್ಲಿದ್ದಾಗ, 12 ನೇ ಆಟಗಾರರಾಗಿ ನೀರಿನ ಬಾಟಲಿಗಳನ್ನು ಮೈದಾನಕ್ಕೆ ಸಾಗಿಸಿದರು.

ಭಾರತದ ಬೌಲಿಂಗ್ ಇನ್ನಿಂಗ್ಸ್ ಮುಗಿದ ನಂತರ, ಕೋಹಿ ಒಂದು ಸೆಕೆಂಡ್ ಅನ್ನು ವ್ಯರ್ಥ ಮಾಡಲಿಲ್ಲ. ಕೂಡಲೇ ನೆಟ್​ನಲ್ಲಿ ಅಭ್ಯಾಸಕ್ಕೆ ಮುಂದಾದರು. ಸತತವಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಇದಕ್ಕೂ ಮುನ್ನ ಶ್ರೇಯಸ್ ಅಯ್ಯರ್ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಅಯ್ಯರ್ ತನ್ನ ಬೆನ್ನಿನ ಸೆಳೆತದ ಗಾಯದಿಂದ ಇನ್ನೂ ಸಂಪೂರ್ಣವಾಗಿ ಫಿಟ್ ಆಗದ ಕಾರಣ ಬಾಂಗ್ಲಾ ವಿರುದ್ಧ ಆಡಲಿಲ್ಲ.

ಇದನ್ನೂ ಓದಿ
Image
4 ಪಂದ್ಯಗಳಲ್ಲಿ 10 ಕ್ಯಾಚ್ ಕೈಚೆಲ್ಲಿದ ಟೀಂ ಇಂಡಿಯಾ!
Image
ಬಾಂಗ್ಲಾ ವಿರುದ್ಧದ ಸೋಲಿನ ಬಳಿಕ ರೋಹಿತ್ ಶರ್ಮಾ ಆಡಿದ ಮಾತುಗಳೇನು ನೋಡಿ
Image
ಕ್ಲಾಸೆನ್, ಮಿಲ್ಲರ್ ಸಿಡಿಲಬ್ಬರಕ್ಕೆ ದಂಗಾದ ಆಸ್ಟ್ರೇಲಿಯಾಕ್ಕ 164 ರನ್ ಸೋಲು
Image
ಏಕದಿನದಲ್ಲಿ 200 ವಿಕೆಟ್ ಪೂರೈಸಿದ ರವೀಂದ್ರ ಜಡೇಜಾ

ವಿರಾಟ್ ಕೊಹ್ಲಿ ಪ್ರ್ಯಾಕ್ಟೀಸ್ ನಡೆಸುತ್ತಿರುವ ವಿಡಿಯೋ:

ಮತ್ತೊಂದೆಡೆ, ಕೊಹ್ಲಿ ಬಾಂಗ್ಲಾ ವಿರುದ್ಧ ಆಡದಿರುವುದು ಇತರ ಕಾರಣಗಳಿಗಾಗಿ. ಏಷ್ಯಾಕಪ್‌ನ ಫೈನಲ್‌ನಲ್ಲಿ ಭಾರತವು ಶ್ರೀಲಂಕಾವನ್ನು ಎದುರಿಸಲಿದೆ. ಈ ಪಂದ್ಯಕ್ಕೆ 48 ಗಂಟೆಗಳಿರುವ ಕಾರಣ ಟೀಮ್ ಇಂಡಿಯಾ ತಮ್ಮ ಕೆಲವು ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿತು. ಇವರಲ್ಲಿ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್​ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಇದ್ದರು. ವಿರಾಟ್ ಕೊಹ್ಲಿ ವಿಶ್ವಕಪ್ ಜೊತೆಗೆ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಆದ್ದರಿಂದ, ಕೊಹ್ಲಿಯನ್ನು ತಾಜಾವಾಗಿರಿಸುವುದು ಮುಖ್ಯ ಎಂಬ ಕಾರಣಕ್ಕೆ ವಿಶ್ರಾಂತಿ ನೀಡಲಾಗಿತ್ತು.

IND vs BAN: 5ನೇ ಏಕದಿನ ಶತಕ ಸಿಡಿಸಿದ ಗಿಲ್; ಕಡಿಮೆ ಇನ್ನಿಂಗ್ಸ್​ಗಳಲ್ಲಿ 1 ಸಾವಿರ ರನ್ ಪೂರ್ಣ..!

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ನಾಯಕ ಶಕಿಬ್ ಅಲ್ ಹಸನ್ 85 ಎಸೆತಗಳಲ್ಲಿ 80 ರನ್ ಬಾರಿಸಿದರೆ, ತೌಹಿದ್ ಹ್ರಿದೈ 54 ಮತ್ತು ನಸುಮ್ ಅಹ್ಮದ್ 44 ರನ್ ಗಳಿಸಿದರು. ಭಾರತ ಪರ ಶಾರ್ದೂಲ್ ಥಾಕೂರ್ 3, ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಶುಭ್​ಮನ್ 43 ಓವರ್ ವರೆಗೆ ಆಡಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳೆಲ್ಲ ವೈಫಲ್ಯ ಅನುಭವಿಸಿದರು. ಗಿಲ್ 133 ಎಸೆತಗಳಲ್ಲಿ 121 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್ 42 ರನ್ ಬಾರಿಸಿದರೂ ಗೆಲುವು ಸಾಧ್ಯವಾಗಲಿಲ್ಲ. ಭಾರತ 49.5 ಓವರ್​ಗಳಲ್ಲಿ 259 ರನ್​ಗೆ ಆಲೌಟ್ ಆಯಿತು. ಬಾಂಗ್ಲಾ ಪರ ಮುಸ್ತಫಿಜುರ್ ರಹ್ಮಾನ್ 3 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ