T20 World Cup 2022: ಟೀಮ್ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿಗೆ (Virat Kohli) ವಿಶ್ವದಾದ್ಯಂತ ಅಭಿಮಾನಿಗಳು ಇರುವುದು ಗೊತ್ತೇ ಇದೆ. ಅದರಲ್ಲೂ ಟೀಮ್ ಇಂಡಿಯಾದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಲ್ಲೂ ಕಿಂಗ್ ಕೊಹ್ಲಿಯನ್ನು ಪ್ರೀತಿಸುವವರು ಇದ್ದಾರೆ. ಇದಕ್ಕೆ ಸಾಕ್ಷಿಯಾಗಿ ಹಲವು ಬಾರಿ ವಿರಾಟ್ ಕೊಹ್ಲಿಯ ಫೋಟೋಗಳು ಪಾಕಿಸ್ತಾನದ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾರಾಜಿಸಿದೆ. ಇದೀಗ ಮತ್ತೊಮ್ಮೆ ಕಿಂಗ್ ಕೊಹ್ಲಿ ಚಿತ್ರವೊಂದು ಮೂಡಿಬಂದಿದೆ. ಆದರೆ ಈ ಬಾರಿ ಮರಳಿನ ಮೇಲೆ ಎಂಬುದು ವಿಶೇಷ.
ಪಾಕಿಸ್ತಾನ್ ಪ್ರಾಂತ್ಯದ ವಿರಾಟ್ ಕೊಹ್ಲಿಯ ಅಭಿಮಾನಿಯೊಬ್ಬರು ಸುಂದರ ಚಿತ್ರವೊಂದನ್ನು ಮರಳಿನಲ್ಲಿ ಚಿತ್ರಿಸಿದ್ದಾರೆ. ಕಡಲ ಕಿನಾರೆಯಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಚಿತ್ರಿಸಿರುವುದು ಬಲೂಚಿಸ್ತಾನದ ರೇಖಾಚಿತ್ರಕಾರ ಸಮೀರ್ ಶೌಕತ್ ಮತ್ತು ಗೆಳೆಯರು.
ವಿರಾಟ್ ಕೊಹ್ಲಿಯ ಬೃಹತ್ ರೇಖಾಚಿತ್ರವನ್ನು ಚಿತ್ರಿಸಿರುವ ಗದ್ದಾನಿಯ ಅಭಿಮಾನಿಗಳು, “ಲವ್ ಫ್ರಮ್ ಆರ್ ಎ ಗದ್ದಾನಿ” ಎಂಬ ಸಂದೇಶದೊಂದಿಗೆ ವಿಡಿಯೋ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಿಂಗ್ ಕೊಹ್ಲಿ ಅಭಿಮಾನಿಗಳಿಂದ ಬಲುಚಿಸ್ತಾನದ ಫ್ಯಾನ್ಸ್ಗಳ ಅಭಿಮಾನಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಟೀಮ್ ಇಂಡಿಯಾ ಭಾನುವಾರ ಸೌತ್ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಪರ್ತ್ನಲ್ಲಿ ನಡೆಯಲಿರುವ ಈ ಪಂದ್ಯವು ಸಂಜೆ 4.30 ರಿಂದ ಶುರುವಾಗಲಿದೆ.