Virat Kohli: ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಬಾಂಗ್ಲಾ ಆಟಗಾರನಿ​ಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ

T20 World Cup 2022: ನಾವು ಡೈನಿಂಗ್ ಹಾಲ್‌ನಲ್ಲಿರುವಾಗ ವಿರಾಟ್ ಕೊಹ್ಲಿ ಬಂದು ಲಿಟನ್‌ಗೆ ತಮ್ಮ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು. ಇದು ನಿಜವಾಗಿಯೂ ಲಿಟನ್‌ಗೆ ಸಿಹಿ ಕ್ಷಣವಾಗಿದೆ ಎಂದು ಜಲಾಲ್ ಯೂನಸ್ ಹೇಳಿಕೊಂಡಿದ್ದಾರೆ.

Virat Kohli: ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಬಾಂಗ್ಲಾ ಆಟಗಾರನಿ​ಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ
Virat Kohli, Litton Das
Follow us
| Updated By: ಪೃಥ್ವಿಶಂಕರ

Updated on:Nov 04, 2022 | 4:51 PM

ಟಿ20 ವಿಶ್ವಕಪ್​ನಲ್ಲಿ (T20 World Cup 2022) ಗೆಲುವಿನ ಸರಣಿ ಮುಂದುವರೆಸಿರುವ ಟೀಂ ಇಂಡಿಯಾ (Team India) ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆದ್ದ ರೋಹಿತ್ ಪಡೆಗೆ ಈಗ ಸೇಮಿಸ್ ಹಾದಿ ಸನಿಹವಾಗಿದೆ. ಭಾನುವಾರ ತನ್ನ ಕೊನೆಯ ಪಂದ್ಯವನ್ನು ಆಡಲಿರುವ ಟೀಂ ಇಂಡಿಯಾ ಜಿಂಬಾಬ್ವೆಯನ್ನು ಎದುರಿಸಲಿದ್ದು, ಈ ಪಂದ್ಯವನ್ನು ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವುದರೊಂದಿಗೆ ಸೇಮಿಸ್​ಗೆ ಎಂಟ್ರಿಕೊಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಬಾಂಗ್ಲಾ ಆಟಗಾರ ಲಿಟನ್ ದಾಸ್ ಆಟಕ್ಕೆ ಮನಸೋತಿರುವ ಕಿಂಗ್ ಕೊಹ್ಲಿ (Virat Kohli), ಲಿಟನ್​ಗೆ ತನ್ನ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ.

ಲಿಟನ್ ಸಿಡಿಲಬ್ಬರದ ಅರ್ಧಶತಕ

ವಾಸ್ತವವಾಗಿ ಮಳೆ ಪೀಡಿತ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರಾಹುಲ್ ಹಾಗೂ ಕೊಹ್ಲಿಯ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. 185 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡವು ಉತ್ತಮ ಆರಂಭವನ್ನು ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಲಿಟನ್ ದಾಸ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 27 ಎಸೆತಗಳನ್ನು ಎದುರಿಸಿದ ದಾಸ್, 7 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 60 ರನ್ ಬಾರಿಸಿದರು. ಅಲ್ಲದೆ ಕೇವಲ 21 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟೊದರು. ಈ ನಡುವೆ ಬಾಂಗ್ಲಾ ಇನ್ನಿಂಗ್ಸ್​ನ ಏಳು ಓವರ್‌ಗಳ ಆಟ ಮುಗಿದಾಗ ಮಳೆ ಬಂದಿದ್ದರಿಂದ ಪಂದ್ಯವನ್ನು ನಿಲ್ಲಿಸಲಾಯಿತು. ಈ ವೇಳೆ ದಾಸ್ 59 ರನ್ ಹಾಗೂ ಮತ್ತೊಬ್ಬ ಆರಂಭಿಕ ಶಾಂಟೊ ಕೇವಲ ಏಳು ರನ್ ಗಳಿಸಿದ್ದರು.

ಇದನ್ನೂ ಓದಿ: T20 World Cup 2022: ‘ಕೊಹ್ಲಿ ಮಾಡಿದ್ದು ನೂರಕ್ಕೆ ನೂರರಷ್ಟು ಫೇಕ್ ಫೀಲ್ಡಿಂಗ್’; ಮಾಜಿ ಟೀಂ ಇಂಡಿಯಾ ಆಟಗಾರ

ಮತ್ತೆ ಪಂದ್ಯ ಆರಂಭವಾದಾಗ ಬಾಂಗ್ಲಾದೇಶಕ್ಕೆ 54 ಎಸೆತಗಳಲ್ಲಿ 85 ರನ್‌ಗಳ ಟಾರ್ಗೆಟ್ ನೀಡಲಾಯಿತು. ಬಂದ ಕೂಡಲೇ ರಾಹುಲ್ ಬಾಂಗ್ಲಾದೇಶಕ್ಕೆ ಹೊಡೆತ ನೀಡಿದರು. ತನ್ನ ಅದ್ಭುತ ಎಸೆತದ ಮೂಲಕ ದಾಸ್ ಅವರನ್ನು ರಾಹುಲ್ ರನ್ ಔಟ್ ಮಾಡಿದರು. ದಾಸ್ 27 ಎಸೆತಗಳಲ್ಲಿ 60 ರನ್ ಗಳಿಸಿ ರನೌಟ್​ಗೆ ಬಲಿಯಾದರು. ಅವರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ ಸಹ ಸೇರಿದ್ದವು.

ಈ ಪಂದ್ಯದಲ್ಲಿ ಬಾಂಗ್ಲಾ ಸೋತರೂ ಲಿಟನ್ ಅವರ ಇನ್ನಿಂಗ್ಸ್ ಸಖತ್ ಹೈಲೈಟ್ ಆಯಿತು. ಅನೇಕ ಕ್ರಿಕೆಟ್ ಪಂಡಿತರು ದಾಸ್ ಆಟವನ್ನು ಹೊಗಳಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ರನ್ ಮಷಿನ್ ವಿರಾಟ್ ಕೊಹ್ಲಿ ಕೂಡ ದಾಸ್ ಇನ್ನಿಂಗ್ಸ್ ಗೆ ಮನಸೋತಿದ್ದು ಅವರು ತಮ್ಮ ಬ್ಯಾಟ್ ಅನ್ನು ಬಾಂಗ್ಲಾದೇಶದ ಕ್ರಿಕೆಟಿಗನಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಬ್ಯಾಟ್ ಉಡುಗೊರೆಯಾಗಿ ನೀಡಿದ ಕೊಹ್ಲಿ

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ಕಾರ್ಯಾಚರಣೆಗಳ ಅಧ್ಯಕ್ಷ ಜಲಾಲ್ ಯೂನಸ್ ಈ ವಿಷಯವನ್ನು ಬಹಿರಂಗಪಡಿಸಿದ್ದು,’ನಾವು ಡೈನಿಂಗ್ ಹಾಲ್‌ನಲ್ಲಿರುವಾಗ ವಿರಾಟ್ ಕೊಹ್ಲಿ ಬಂದು ಲಿಟನ್‌ಗೆ ತಮ್ಮ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು. ಇದು ನಿಜವಾಗಿಯೂ ಲಿಟನ್‌ಗೆ ಸಿಹಿ ಕ್ಷಣವಾಗಿದೆ ಎಂದು ಜಲಾಲ್ ಯೂನಸ್ ಹೇಳಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Fri, 4 November 22

ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಮಿತಿ ಮೀರಿದ ದರ್ಶನ್ ಬೆನ್ನು ನೋವು; ಬಳ್ಳಾರಿ ಜೈಲಿಗೆ ಬಂತು ಮೆಡಿಕಲ್ ಬೆಡ್
ಮಿತಿ ಮೀರಿದ ದರ್ಶನ್ ಬೆನ್ನು ನೋವು; ಬಳ್ಳಾರಿ ಜೈಲಿಗೆ ಬಂತು ಮೆಡಿಕಲ್ ಬೆಡ್
ಬಿಜೆಪಿ, ಜೆಡಿಎಸ್ ಸಂಸದರು ಕೇಂದ್ರದ ಮುಂದೆ ತುಟಿಬಿಚ್ಚಲ್ಲ: ಸಿದ್ದರಾಮಯ್ಯ
ಬಿಜೆಪಿ, ಜೆಡಿಎಸ್ ಸಂಸದರು ಕೇಂದ್ರದ ಮುಂದೆ ತುಟಿಬಿಚ್ಚಲ್ಲ: ಸಿದ್ದರಾಮಯ್ಯ
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ