
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ (India vs New Zealand) ರೋಚಕ ಜಯ ಕಂಡಿತು. ದೊಡ್ಡ ಮೊತ್ತ ಕಲೆಹಾಕಿದ್ದರೂ ಈ ಸವಾಲನ್ನು ಎದುರಿಸಿದ ನ್ಯೂಜಿಲೆಂಡ್ ಗೆಲುವಿನ ಅಂಚಿಗೆ ಬಂದು ಸೋತಿತು. ಕಿವೀಸ್ ಗೆಲುವಿಗೆ ಮಿಚೆಲ್ ಬ್ರೆಸ್ವೆಲ್ (Michael Bracewell) ಕಠಿಣ ಹೋರಾಟ ನಡೆಸಿದರೆ ಭಾರತ ಬೆಟ್ಟದಂತಹ ಮೊತ್ತ ಗಳಿಸಲು ನೆರವಾಗಿದ್ದು ಶುಭ್ಮನ್ ಗಿಲ್ (Shubman Gill). ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ಅಮೋಘ ದ್ವಿಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ನೂತನ ದಾಖಲೆ ಬರೆದರು. ದಿಗ್ಗಜ ಕ್ರಿಕೆಟಿಗರ ಸಾಧನೆಯನ್ನು ಧೂಳಿಪಟ ಮಾಡಿದರು. ಗಿಲ್ ಚೊಚ್ಚಲ ದ್ವಿಶತಕ ಸಿಡಿಸಿದಾಗ ಸಂಭ್ರಮಿಸಿದ ಟೀಮ್ ಇಂಡಿಯಾ ಆಟಗಾರರು ಅವರು ಔಟಾದಾಗ ಕೂಡ ಅದೇ ಗೌರವ ನೀಡಿ ಬರ ಮಾಡಿಕೊಂಡರು.
ಕೊನೆಯ 50ನೇ ಓವರ್ ವರೆಗೂ ಬ್ಯಾಟಿಂಗ್ ಮಾಡಿದ ಗಿಲ್ ಕೇವಲ 145 ಎಸೆತಗಳಲ್ಲಿ 200 ರನ್ ಕಲೆಹಾಕಿದರು. ಒಟ್ಟಾರೆಯಾಗಿ 149 ಎಸೆತಗಳಲ್ಲಿ 19 ಫೋರ್, 9 ಸಿಕ್ಸರ್ನೊಂದಿಗೆ 208 ರನ್ ಚಚ್ಚಿದರು. ಕೊನೆಯ 50ನೇ ಓವರ್ನ ಶಿಪ್ಲೇ ಅವರ 2ನೇ ಎಸೆತದಲ್ಲಿ ಗಿಲ್ ಅವರು ಗ್ಲೆನ್ ಪಿಲಿಪ್ಸ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಗಿಲ್ ಔಟಾದ ಸಂದರ್ಭ ಪೆವಿಲಿಯನ್ನಲ್ಲಿದ್ದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಎದ್ದು ನಿಂತು ಗೌರವ ಸೂಚಿಸಿದರು. ಜೊತೆಗೆ ಅವರು ಪೆವಿಲಿಯನ್ನತ್ತ ಸಾಗಿ ಬರುತ್ತಿದ್ದಂತೆ ಬೆನ್ನು ತಟ್ಟಿ ಆಟದ ವೈಭವಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಲೈಂಗಿಕ ಕಿರುಕುಳ ಆರೋಪ; ದೆಹಲಿಯ ಜಂತರ್‌ಮಂತರ್‌ನಲ್ಲಿ ಖ್ಯಾತ ಕುಸ್ತಿಪಟುಗಳಿಂದ ಪ್ರತಿಭಟನೆ
— Anna 24GhanteChaukanna (@Anna24GhanteCh2) January 18, 2023
ಅಬ್ಬರದ ದ್ವಿಶತಕದೊಂದಿಗೆ ಗಿಲ್ ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ. ಮುಖ್ಯವಾಗಿ ಕ್ರಿಕೆಟ ದೇವರು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆ ಗಿಲ್ ಹೆಸರಿಗೆ ವರ್ಗಾವಣೆಯಾಗಿದೆ. ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಸಚಿನ್ ಹೊಂದಿದ್ದರು. 2009ರಲ್ಲಿ ಸಚಿನ್ 175 ರನ್‌ಗಳನ್ನು ಗಳಸಿದ್ದರು. ಇದೀಗ ಗಿಲ್ ಈ ಕ್ರೀಡಾಂಗಣದಲ್ಲಿ 209ರನ್ ಬಾರಿಸಿ ಈ ದಾಖಲೆ ಮುರಿದಿದ್ದಾರೆ. ಇದರ ಜೊತೆಗೆ ನ್ಯೂಜಿಲೆಂಡ್ ವಿರುದ್ಧ ಏಕದಿನ ಮಾದರಿಯಲ್ಲಿ ಅತೀ ಹೆಚ್ಚು ರನ್‌ಗಳಿಸಿದ ದಾಖಲೆ ಕೂಡ ಈವರೆಗೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. 2003ರಲ್ಲಿ ಸಚಿನ್ 186 ರನ್‌ಗಳಿಸಿ ಈ ದಾಖಲೆ ಹೊಂದಿದ್ದರು. ಗಿಲ್ 208 ರನ್‌ಗಳನ್ನು ಗಳಿಸಿ ಈ ದಾಖಲೆ ಕೂಡ ಮುರಿದಿದ್ದಾರೆ.
ಇನ್ನು ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆ ಇಶಾನ್ ಕಿಶನ್ ಹೆಸರಿನಲ್ಲಿತ್ತು. ಇವರು ಬಾಂಗ್ಲಾದೇಶ ವಿರುದ್ಧ ಸಿಡಿಲಬ್ಬರದ ಡಬಲ್ ಸೆಂಚುರಿ ಸಿಡಿಸಿದಾಗ ಅವರ ವಯಸ್ಸು 24 ವರ್ಷ 145 ದಿನಗಳು. ಇದೀಗ ಈ ದಾಖಲೆಯನ್ನು ಗಿಲ್ ಮುರಿದಿದ್ದಾರೆ. ಅಂತೆಯೆ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ ಸಾವಿರ ರನ್ ಪೂರೈಸಿದ ದಾಖಲೆ ಇದೀಗ ಶುಭ್ಮನ್ ಗಿಲ್ ಪಾಲಾಗಿದೆ. ಈ ಹಿಂದೆ ಈ ರೆಕಾರ್ಡ್ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಹೆಸರಿನಲ್ಲಿತ್ತು. ಕೊಹ್ಲಿ ಹಾಗೂ ಧವನ್ 24 ಇನಿಂಗ್ಸ್ ಮೂಲಕ ಏಕದಿನ ಕ್ರಿಕೆಟ್ನಲ್ಲಿ 1000 ರನ್ ಪೂರೈಸಿ ದಾಖಲೆ ಬರೆದಿದ್ದರು. ಆದರೆ ಇದೀಗ ಈ ದಾಖಲೆಯನ್ನು ಶುಭ್ಮನ್ 19 ಏಕದಿನ ಇನಿಂಗ್ಸ್ ಮಾಡಿ ಮುಗಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ