Video: ಕೊಹ್ಲಿ-ದ್ರಾವಿಡ್ ತಂಡಗಳ ನಡುವೆ ಫುಟ್‌ವಾಲಿ ಫೈಟ್: ಪಂದ್ಯದ ಝಲಕ್ ಇಲ್ಲಿದೆ
Team India: ಭಾರತದ ಟೆಸ್ಟ್ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್.ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ.
ದಕ್ಷಿಣ ಆಫ್ರಿಕಾ ಸರಣಿಗಾಗಿ (India vs South Africa) ಟೀಮ್ ಇಂಡಿಯಾ (Team India) ಆಟಗಾರರು ಗುರುವಾರ ಜೋಹಾನ್ಸ್‌ಬರ್ಗ್‌ಗೆ ಬಂದಿಳಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್ ಸರಣಿಗೂ ಮುನ್ನ ಅಭ್ಯಾಸಗಳನ್ನು ಆರಂಭಿಸಿದ್ದಾರೆ. ಆದರೆ 10 ಗಂಟೆಗಳ ದೀರ್ಘ ಪ್ರಯಾಣದ ಬಳಿಕ ಟೀಮ್ ಇಂಡಿಯಾ ಆಟಗಾರರು ಫುಟ್‌ವಾಲಿ ಪಂದ್ಯದೊಂದಿಗೆ ಅಭ್ಯಾಸವನ್ನು ಶುರು ಮಾಡಿದ್ದು ವಿಶೇಷ. ರಾಹುಲ್ ದ್ರಾವಿಡ್ (Rahul Dravid) ಹಾಗೂ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಎರಡು ತಂಡಗಳು ಪರಸ್ಪರ ಫುಟ್‌ವಾಲಿ ಪಂದ್ಯವನ್ನಾಡಿದ್ದು, ಈ ವೇಳೆಯ ಅಮೂಲ್ಯ ಕ್ಷಣಗಳ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಇನ್ನು ಆಟಗಾರರ ದಕ್ಷಿಣ ಆಫ್ರಿಕಾ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು 2-3 ದಿನಗಳನ್ನು ತೆಗೆದುಕೊಳ್ಳಲಿದ್ದು, ಹೀಗಾಗಿ ಆರಂಭದಲ್ಲಿ ರಿಲ್ಯಾಕ್ಸ್ ಮೂಡ್ ಅಭ್ಯಾಸಗಳತ್ತ ಗಮನ ಹರಿಸಿರುವುದಾಗಿ ಟೀಮ್ ಇಂಡಿಯಾದ ಸ್ಟ್ರೆಂಗ್ತ್ & ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿ ತಿಳಿಸಿದ್ದಾರೆ.
ಇನ್ನೊಂದೆಡೆ ಕೆಲ ದಿನಗಳ ಹಿಂದೆ ನಾಯಕತ್ವ ವಿವಾದದಿಂದ ಸುದ್ದಿಯಲ್ಲಿದ್ದ ಟೀಮ್ ಇಂಡಿಯಾ ಟೆಸ್ಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಫುಲ್ ರಿಲಾಕ್ಸ್ ಮೂಡ್ನಲ್ಲಿದ್ದು, ಸಹ ಆಟಗಾರರು ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ತಮಾಷೆಯಲ್ಲಿ ತೊಡಗಿಸಿಕೊಂಡಿರುವುದು ವಿಡಿಯೋದಲ್ಲಿ ಕಾಣಬಹುದು.
ಭಾರತ-ದಕ್ಷಿಣ ಆಫ್ರಿಕಾ ನಡುವೆ ಡಿಸೆಂಬರ್ 16 ರಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಜನವರಿ 19 ರಿಂದ ಏಕದಿನ ಸರಣಿ ಶುರುವಾಗಲಿದೆ. ಟೆಸ್ಟ್ ಸರಣಿಯಿಂದ ಗಾಯದ ಕಾರಣ ಉಪನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಉಪನಾಯಕನಾಗಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಲಾಗಿದೆ.
How did #TeamIndia recharge their batteries ahead of their first training session in Jo’Burg? ?
On your marks, get set & Footvolley! ☺️???#SAvIND pic.twitter.com/dIyn8y1wtz
— BCCI (@BCCI) December 18, 2021
ದಕ್ಷಿಣ ಆಫ್ರಿಕಾ ಮತ್ತು ಭಾರತ ಕ್ರಿಕೆಟ್ ಸರಣಿ ವೇಳಾಪಟ್ಟಿ ಹೀಗಿದೆ:
ಟೆಸ್ಟ್ ಸರಣಿ: ಮೊದಲ ಟೆಸ್ಟ್ ಪಂದ್ಯ- ಡಿಸೆಂಬರ್. 26-30: ಸೂಪರ್ ಸ್ಪೋರ್ಟ್ ಪಾರ್ಕ್, ಸೆಂಚೂರಿಯನ್ 2ನೇ ಟೆಸ್ಟ್ ಪಂದ್ಯ- ಜನವರಿ 3-7: ವಾಂಡರರ್ಸ್, ಜೋಹಾನ್ಸ್ಬರ್ಗ್ 3ನೇ ಟೆಸ್ಟ್ ಪಂದ್ಯ- ಜನವರಿ 11-15: ನ್ಯೂಲ್ಯಾಂಡ್ಸ್, ಕೇಪ್ ಟೌನ್
ಏಕದಿನ ಸರಣಿ: ಮೊದಲ ಪಂದ್ಯ- ಜನವರಿ 19: ಬೋಲ್ಯಾಂಡ್ ಪಾರ್ಕ್, ಪಾರ್ಲ್ 2ನೇ ಪಂದ್ಯ ಜನವರಿ 21: ಬೋಲ್ಯಾಂಡ್ ಪಾರ್ಕ್, ಪಾರ್ಲ್ 3ನೇ ಪಂದ್ಯ ಜನವರಿ 23: ನ್ಯೂಲೆಂಡ್ಸ್, ಕೇಪ್ ಟೌನ್
ಭಾರತದ ಟೆಸ್ಟ್ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್.ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಿಯಾಂಕ್ ಪಾಂಚಾಲ್
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಇಲ್ಲದಿದ್ದಾಗಲೂ ಟೀಮ್ ಇಂಡಿಯಾ ಕಪ್ ಗೆದ್ದಿದೆ!
ಇದನ್ನೂ ಓದಿ: IPL 2022: ಪಂಜಾಬ್ ಕಿಂಗ್ಸ್ಗೆ ಕನ್ನಡಿಗನೇ ಕಿಂಗ್ ಆಗುವ ಸಾಧ್ಯತೆ..!
(Virat Kohli, Rahul Dravid play ‘Footvolley’ as Team India takes part in first training session ahead of SA Tests)
Published On - 3:35 pm, Sat, 18 December 21