Virat Kohli: ಬಿಡ್ಡನ ಅಡ್ಡಾದಲ್ಲಿ ವಾರ್ನರ್: ಏನೂ ಆಗಿಲ್ಲ ತಾನೆ…ಎಂದು ಕಾಲೆಳೆದ ಕೊಹ್ಲಿ

David Warner - Virat Kohli: ಡೇವಿಡ್ ವಾರ್ನರ್ ಇಂಗ್ಲೆಂಡ್ ವಿರುದ್ದ ಆ್ಯಶಸ್ ಸರಣಿ ಆಡುತ್ತಿದ್ದು, ಇದರ ನಡುವೆ ವಿಡಿಯೋ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವುದು ವಿಶೇಷ. ಆ್ಯಶಸ್ ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ವಾರ್ನರ್ 94 ರನ್ ಗಳಿಸಿದ್ದರು.

Virat Kohli: ಬಿಡ್ಡನ ಅಡ್ಡಾದಲ್ಲಿ ವಾರ್ನರ್: ಏನೂ ಆಗಿಲ್ಲ ತಾನೆ...ಎಂದು ಕಾಲೆಳೆದ ಕೊಹ್ಲಿ
Virat Kohli
Edited By:

Updated on: Dec 11, 2021 | 10:27 PM

ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಸೋಷಿಯಲ್ ಮೀಡಿಯಾದಲ್ಲಿ ನಾನಾ ಅವತಾರದಲ್ಲಿ ಕಾಣಿಸಿಕೊಳ್ಳುವುದು ಗೊತ್ತೇ ಇದೆ. ಇದೀಗ ವಾರ್ನರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಅವತಾರ ತಾಳಿದ್ದಾರೆ. ಚಿತ್ರದ ಬಿಡ್ಡ ಹಾದಿನಲ್ಲಿ ಅಲ್ಲು ಅರ್ಜುನ್ ಮುಖ ಸ್ವಾಪ್ ಮಾಡಿ ವಾರ್ನರ್ ಕಾಣಿಸಿಕೊಂಡಿದ್ದು, ಬಿಡ್ಡನ ಅಡ್ಡಾದಲ್ಲಿ ಅಬ್ಬರಿಸುವ ಲುಕ್​ನಲ್ಲಿ ಮಿಂಚುತ್ತಿದ್ದಾರೆ. ಇತ್ತ ಈ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ವೈರಲ್ ಆಗುತ್ತಿದ್ದಂತೆ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಮೆಂಟ್ ಮಾಡಿರುವುದು ವಿಶೇಷ.

ವಾರ್ನರ್ ಅವರ ಹೊಸ ಅವತಾರವನ್ನು ಕಾಲೆಳೆದಿರುವ ವಿರಾಟ್ ಕೊಹ್ಲಿ, “ಸಂಗಾತಿ ನೀನು ಚೆನ್ನಾಗಿದ್ದೀಯಾ ತಾನೆ?” ಎಂದು ಕಿಚಾಯಿಸಿದ್ದಾರೆ. ಈ ಮೂಲಕ ಏನೂ ಪ್ರಾಬ್ಲಂ ಇಲ್ಲ ತಾನೆ, ಮತ್ತೇಗೆ ಇಂತಹ ಅವತಾರ ಎಂದು ಕೊಹ್ಲಿ ವಾರ್ನರ್ ಅವರ ಕಾಲೆಳೆದಿದ್ದಾರೆ. ಇನ್ನು ಇದೇ ವಿಡಿಯೋಗೆ ಆಸ್ಟ್ರೇಲಿಯಾ ಮಾಜಿ ವೇಗಿ ಮಿಚೆಲ್ ಜಾನ್ಸನ್ ಕೂಡ ಪ್ರತಿಕ್ರಿಯಿಸಿದ್ದು, ಒಂದ್ಸಲ ನಿಲ್ಲಿಸಪ್ಪಾ ಎಂಬಾರ್ಥದಲ್ಲಿ ಕಮೆಂಟ್ ಮಾಡಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಕೂಡ ನಗುವಿನೊಂದಿಗೆ ವಾರ್ನರ್ ಹೊಸ ಅವತಾರಕ್ಕೆ ಪ್ರತಿಕ್ರಿಯಿಸಿದ್ದಾರೆ.

ಸದ್ಯ ಡೇವಿಡ್ ವಾರ್ನರ್ ಇಂಗ್ಲೆಂಡ್ ವಿರುದ್ದ ಆ್ಯಶಸ್ ಸರಣಿ ಆಡುತ್ತಿದ್ದು, ಇದರ ನಡುವೆ ವಿಡಿಯೋ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವುದು ವಿಶೇಷ. ಆ್ಯಶಸ್ ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ವಾರ್ನರ್ 94 ರನ್ ಗಳಿಸಿದ್ದರು. ಈ ಪಂದ್ಯವನ್ನು ಆಸ್ಟ್ರೇಲಿಯಾ ಒಂಬತ್ತು ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದ್ದು, ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಇದಾಗ್ಯೂ ಎರಡನೇ ಪಂದ್ಯಕ್ಕೆ ವಾರ್ನರ್ ಅಲಭ್ಯರಾಗುವ ಸಾಧ್ಯತೆಯಿದೆ. ಏಕೆಂದರೆ ಈ ಪಂದ್ಯದಲ್ಲಿ ವಾರ್ನರ್ ಗಾಯಗೊಂಡಿದ್ದು, 3ನೇ ದಿನದಂದು ಮೈದಾನಕ್ಕೆ ಇಳಿಯಲಿಲ್ಲ. ಹೀಗಾಗಿ ವೈದ್ಯರ ರಿಪೋರ್ಟ್ ಬಂದ ಬಳಿಕ ಡೇವಿಡ್ ವಾರ್ನರ್ 2ನೇ ಪಂದ್ಯವನ್ನಾಡಲಿದ್ದಾರಾ ಎಂಬುದು ನಿರ್ಧಾರವಾಗಲಿದೆ.

ಇದನ್ನೂ ಓದಿ: World Record: ಬರೋಬ್ಬರಿ 15 ಸಿಕ್ಸ್​: ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ

ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

ಇದನ್ನೂ ಓದಿ: Virat Kohli: ಭಾರತ ತಂಡ ಕಂಡ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ…ಆದರೂ

(Virat Kohli reacts to David Warner’s latest Insta avatar)

Published On - 7:34 pm, Sat, 11 December 21