AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಗ್ ಶಾಕ್ ನೀಡಲು ಬಿಸಿಸಿಐ ಸಿದ್ಧತೆ

BCCI Central Contract 2026: ಪ್ರತಿ ವರ್ಷ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಒಪ್ಪಂದದ ಅನುಸಾರ ಆಟಗಾರರಿಗೆ ವಾರ್ಷಿಕ ಮೊತ್ತವನ್ನು ಪಾವತಿಸಲಾಗುತ್ತದೆ. ಇಲ್ಲಿ ಆಟಗಾರರನ್ನು ಎ+, ಎ, ಬಿ, ಸಿ ಮತ್ತು ಡಿ ಗ್ರೇಡ್ ಎಂದು ವಿಂಗಡಿಸಲಾಗುತ್ತಿದ್ದು, ಈ ಮೂಲಕ ಕೋಟಿ ರೂ. ಮೊತ್ತದ ವೇತನವನ್ನು ಪಾವತಿಸಲಾಗುತ್ತದೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಗ್ ಶಾಕ್ ನೀಡಲು ಬಿಸಿಸಿಐ ಸಿದ್ಧತೆ
Virat Kohli -Rohit Sharma
ಝಾಹಿರ್ ಯೂಸುಫ್
|

Updated on: Jan 21, 2026 | 8:55 AM

Share

ಟೀಮ್ ಇಂಡಿಯಾ ಆಟಗಾರರ ಜೊತೆಗಿನ 2026ರ ಕೇಂದ್ರ ಒಪ್ಪಂದಕ್ಕೆ ಬಿಸಿಸಿಐ ಸಿದ್ಧತೆಗಳನ್ನು ಶುರು ಮಾಡಿದೆ. ಈ ಬಾರಿಯ ಒಪ್ಪಂದದಲ್ಲಿ ಕೆಲ ಮಹತ್ವದ ಬದಲಾವಣೆ ಕಂಡು ಬರಲಿದೆ. ಈ ಬದಲಾವಣೆಯೊಂದಿಗೆ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಹಿಂಬಡ್ತಿ ನೀಡುವ ಸಾಧ್ಯತೆಯಿದೆ.

ಪ್ರಸ್ತುತ ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ A+ ಗ್ರೇಡ್​ನಲ್ಲಿದ್ದಾರೆ. ಅದರಂತೆ ಈ ನಾಲ್ವರು ಆಟಗಾರರು ವಾರ್ಷಿಕವಾಗಿ ತಲಾ 7 ಕೋಟಿ ರೂ. ಪಡೆಯುತ್ತಿದ್ದಾರೆ.

ಆದರೆ ಇದೀಗ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ಹೀಗಾಗಿ ಈ ಮೂವರನ್ನು ಎ ಪ್ಲಸ್ ಶ್ರೇಣಿಯಿಂದ ಕೈ ಬಿಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.

ಅಲ್ಲದೆ ಹೊಸ ಒಪ್ಪಂದದಲ್ಲಿ ಈ ಮೂವರನ್ನು ಎ ಗ್ರೇಡ್‌ಗೆ ಸೇರಿಸುತ್ತಾರೋ ಅಥವಾ ಬಿ ಗ್ರೇಡ್‌ಗೆ ಪರಿಗಣಿಸುತ್ತಾರೋ ಎಂಬುದೇ ಈಗ ಕುತೂಹಲ. ಏಕೆಂದರೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಮುಂದುವರೆಯುತ್ತಿದ್ದು, ಹೀಗಾಗಿ ಇಬ್ಬರಿಗೂ ಹಿಂಬಡ್ತಿ ನೀಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ.

A ಗ್ರೇಡ್​ನಲ್ಲಿ ಯಾರಿದ್ದಾರೆ?

ಬಿಸಿಸಿಐನ ಪ್ರಸ್ತುತ ಕೇಂದ್ರ ಒಪ್ಪಂದದಲ್ಲಿ ಒಟ್ಟು 6 ಆಟಗಾರರು ಎ ಗ್ರೇಡ್​ನಲ್ಲಿದ್ದಾರೆ. ಅವರೆಂದರೆ ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಕೆಎಲ್ ರಾಹುಲ್, ಶುಭ್​ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ. ಈ ದರ್ಜೆಯ ಆಟಗಾರರು ಬಿಸಿಸಿಐನಿಂದ ವಾರ್ಷಿಕವಾಗಿ 5 ಕೋಟಿ ರೂ. ಪಡೆಯುತ್ತಿದ್ದಾರೆ. ಆದರೆ ಈ ಬಾರಿ ಗ್ರೇಡ್-ಎ ಯಿಂದ ಮೊಹಮ್ಮದ್ ಶಮಿ ಅವರನ್ನು ಸಹ ಕೈ ಬಿಡುವ ಸಾಧ್ಯತೆಯಿದೆ.

ಅದೇ ರೀತಿ, ಬಿಸಿಸಿಐನ ಪ್ರಸ್ತುತ ಕೇಂದ್ರ ಒಪ್ಪಂದದಲ್ಲಿ, ಗ್ರೇಡ್ ಬಿ ನಲ್ಲಿ 5 ಆಟಗಾರರು ಮತ್ತು ಗ್ರೇಡ್ ಸಿ ನಲ್ಲಿ ಒಟ್ಟು 19 ಆಟಗಾರರಿದ್ದಾರೆ. ಈ ಎರಡೂ ದರ್ಜೆಗಳಲ್ಲಿರುವ ಆಟಗಾರರ ಒಪ್ಪಂದಗಳಲ್ಲೂ ಮಹತ್ವದ ಬದಲಾವಣೆಯಾಗುವ ನಿರೀಕ್ಷೆಯಿದೆ.

ಅಂದರೆ ಇಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರನ್ನು A+  ಗ್ರೇಡ್​ ಒಪ್ಪಂದದಿಂದ ಹೊರಗಿಟ್ಟರೆ, ಉಳಿಯುವುದು ಜಸ್​ಪ್ರೀತ್ ಬುಮ್ರಾ. ಈ ಪಟ್ಟಿಗೆ ಮೂರು ಸ್ವರೂಪಗಳಲ್ಲೂ ಕಣಕ್ಕಿಳಿಯುತ್ತಿರುವ ಆಟಗಾರರನ್ನು ಸೇರ್ಪಡೆಗೊಳಿಸಲಿದ್ದಾರಾ ಅಥವಾ ಗ್ರೇಡ್​ನಲ್ಲಿ ಬದಲಾವಣೆ ಮಾಡಲಿದ್ದಾರಾ ಕಾದು ನೋಡಬೇಕಿದೆ.

2025ರ ಬಿಸಿಸಿಐ ವಾರ್ಷಿಕ ಒಪ್ಪಂದ ಪಟ್ಟಿ:

  • ಎ+ ಗ್ರೇಡ್ (7 ಕೋಟಿ ರೂ.)
  • ವಿರಾಟ್ ಕೊಹ್ಲಿ
  • ರೋಹಿತ್ ಶರ್ಮಾ
  • ಜಸ್​ಪ್ರೀತ್ ಬುಮ್ರಾ
  • ರವೀಂದ್ರ ಜಡೇಜಾ
  • ಎ ಗ್ರೇಡ್ (5 ಕೋಟಿ ರೂ.)
  • ಮೊಹಮ್ಮದ್ ಸಿರಾಜ್
  • ಕೆಎಲ್ ರಾಹುಲ್
  • ಶುಭ್​ಮನ್ ಗಿಲ್
  • ‘ಹಾರ್ದಿಕ್ ಪಾಂಡ್ಯ
  • ಮೊಹಮ್ಮದ್ ಶಮಿ
  • ರಿಷಭ್ ಪಂತ್
  • ಬಿ ಗ್ರೇಡ್ (3 ಕೋಟಿ ರೂ.)
  • ಸೂರ್ಯಕುಮಾರ್ ಯಾದವ್
  • ಕುಲ್ದೀಪ್ ಯಾದವ್
  • ಅಕ್ಷರ್ ಪಟೇಲ್
  • ಯಶಸ್ವಿ ಜೈಸ್ವಾಲ್
  • ಶ್ರೇಯಸ್ ಅಯ್ಯರ್

ಇದನ್ನೂ ಓದಿ: ಬರೋಬ್ಬರಿ ೩೭ ಸಿಕ್ಸ್… ಫಿನ್ ಅಲೆನ್ ಆರ್ಭಟ

  • ಸಿ ಗ್ರೇಡ್ (1 ಕೋಟಿ ರೂ.)
  • ರಿಂಕು ಸಿಂಗ್
  • ತಿಲಕ್ ವರ್ಮಾ
  • ರುತುರಾಜ್ ಗಾಯಕ್ವಾಡ್
  • ಶಿವಂ ದುಬೆ
  • ರವಿ ಬಿಷ್ಣೋಯ್
  • ವಾಷಿಂಗ್ಟನ್ ಸುಂದರ್
  • ಮುಖೇಶ್ ಕುಮಾರ್
  • ಸಂಜು ಸ್ಯಾಮ್ಸನ್
  • ಅರ್ಷದೀಪ್ ಸಿಂಗ್
  • ಪ್ರಸಿದ್ಧ್ ಕೃಷ್ಣ
  • ರಜತ್ ಪಾಟಿದಾರ್
  • ಧ್ರುವ್ ಜುರೆಲ್
  • ಸರ್ಫರಾಝ್ ಖಾನ್
  • ನಿತೀಶ್ ಕುಮಾರ್ ರೆಡ್ಡಿ
  • ಇಶಾನ್ ಕಿಶನ್
  • ಅಭಿಷೇಕ್ ಶರ್ಮಾ
  • ಆಕಾಶ್ ದೀಪ್
  • ವರುಣ್ ಚಕ್ರವರ್ತಿ
  • ಹರ್ಷಿತ್ ರಾಣಾ