AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಜ್ಞಾನಿ, ಮೂರ್ಖ, ಹೇಡಿ’; ಸಲ್ಮಾನ್, ಬಾಬರ್​ಗೆ ಛೀಮಾರಿ ಹಾಕಿದ ಪಾಕ್ ಮಾಜಿ ಕ್ರಿಕೆಟಿಗ

Basit Ali's Scathing Attack: ಭಾರತ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ತಂಡವನ್ನು ಮಾಜಿ ಕ್ರಿಕೆಟಿಗ ಬಸಿತ್ ಅಲಿ ತೀವ್ರವಾಗಿ ಟೀಕಿಸಿದ್ದಾರೆ. ಸಲ್ಮಾನ್ ಆಘಾರನ್ನು 'ಮೂರ್ಖ' ಮತ್ತು 'ಹೇಡಿ' ಎಂದು ಕರೆದ ಅಲಿ, ಅವರ ತಂತ್ರಗಾರಿಕೆಯ ಲೋಪದಿಂದಲೇ ತಂಡ ಸೋತಿತು ಎಂದಿದ್ದಾರೆ. ಮುಖ್ಯ ಕೋಚ್ ಮೈಕ್ ಹೆಸ್ಸನ್ 'ಅಜ್ಞಾನಿ' ಎಂದು ಜರಿದ ಅವರು, ಬಾಬರ್ ಅಜಮ್‌ಗೆ ಬ್ಯಾಟಿಂಗ್ ಶಿಷ್ಟಾಚಾರ ಇಲ್ಲ ಎಂದು ಟೀಕಿಸಿದ್ದಾರೆ. ತಂಡದ ಪ್ರದರ್ಶನದಿಂದ ಅಭಿಮಾನಿಗಳು, ಮಾಜಿ ಆಟಗಾರರು ಅಸಮಾಧಾನಗೊಂಡಿದ್ದಾರೆ.

‘ಅಜ್ಞಾನಿ, ಮೂರ್ಖ, ಹೇಡಿ’; ಸಲ್ಮಾನ್, ಬಾಬರ್​ಗೆ ಛೀಮಾರಿ ಹಾಕಿದ ಪಾಕ್ ಮಾಜಿ ಕ್ರಿಕೆಟಿಗ
Pakistan Team
ಪೃಥ್ವಿಶಂಕರ
|

Updated on:Feb 16, 2026 | 9:05 PM

Share

2026 ರ ಟಿ20 ವಿಶ್ವಕಪ್​ನಲ್ಲಿ (T20 World Cup 2026)  ಭಾರತದ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ತಂಡ ಹಾಗೂ ನಾಯಕ ಸಲ್ಮಾನ್ ಆಘಾ (Salman Agha) ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಭಿಮಾನಿಗಳಿಂದ ಹಿಡಿದು ಮಾಜಿ ಆಟಗಾರರು ಇಡೀ ತಂಡದ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದಾರೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ, ಸಲ್ಮಾನ್ ಆಘಾ ಅವರನ್ನು ಅಜ್ಞಾನಿ, ಮೂರ್ಖ ಮತ್ತು ಹೇಡಿ ಎಂದು ಜರಿದಿದ್ದಾರೆ. ಸಲ್ಮಾನ್ ಆಘಾ ಅವರ ತಂತ್ರಗಾರಿಕೆಯ ಲೋಪದಿಂದ ಪಾಕಿಸ್ತಾನ ತಂಡ ಭಾರತ ವಿರುದ್ಧ ಸೋತಿತು ಎಂದಿರುವ ಅಲಿ, ಮುಖ್ಯ ಕೋಚ್ ಮೈಕ್ ಹೆಸ್ಸನ್ ಅವರನ್ನು ಅಜ್ಞಾನಿ ಎಂದೂ, ಬಾಬರ್ ಆಝಂ ಬ್ಯಾಟಿಂಗ್ ಶಿಷ್ಟಾಚಾರ ಹೊಂದಿಲ್ಲ ಎಂದು ಟೀಕಿಸಿದ್ದಾರೆ.

ತಾಳ್ಮೆ ಕಳೆದುಕೊಂಡ ಬಸಿತ್ ಅಲಿ

ವೃತ್ತಿಪರ ಕ್ರಿಕೆಟ್‌ನಲ್ಲಿ 27 ಶತಕಗಳನ್ನು ಬಾರಿಸಿರುವ ಬಸಿತ್ ಅಲಿ, ಪಾಕಿಸ್ತಾನಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನ ತಂಡವನ್ನು ತೀವ್ರವಾಗಿ ಟೀಕಿಸಿದರು. ‘ನಾನು ಅಳತೆ ಮೀರಿ ಮಾತನಾಡುತ್ತಿದ್ದೇನೆ ನನ್ನನನು ಕ್ಷಮಿಸಿ. ಕೊಲಂಬೊದಲ್ಲಿ ಇದುವರೆಗೆ ಮೂರು ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಮೂರನ್ನೂ ಗೆದ್ದಿದೆ ಎಂದು ಆ ಅಜ್ಞಾನಿ ಜನರಿಗೆ ತಿಳಿದಿಲ್ಲ. ನಾವು ಜಿಂಬಾಬ್ವೆ ವಿರುದ್ಧ ಪಂದ್ಯವನ್ನಾಡಿ, ಆಗ ಟಾಸ್ ಗೆದ್ದು ಬೌಲಿಂಗ್ ಮಾಡಿದ್ದರೆ ಓಕೆ, ಏಕೆಂದರೆ ನಮ್ಮ ಸ್ಪಿನ್ ವಿಭಾಗ ಬಲಿಷ್ಠವಾಗಿದೆ. ಹೀಗಾಗಿ ಜಿಂಬಾಬ್ವೆ ತಂಡವನ್ನು ಅಲ್ಪ ರನ್​ಗಳಿಗೆ ಕಟ್ಟಿಹಾಕಬಹುದಿತ್ತು. ಆದರೆ ಭಾರತದಂತಹ ತಂಡದ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಳ್ಳಲು ಇವರಿಗೆ ಹೇಳಿದ್ಯಾರು?

ಸೋಲುತ್ತಾರೆಂದು ಈಗಾಗಲೇ ತಿಳಿದಿತ್ತು

ಅಭಿಷೇಕ್ ಶರ್ಮಾ ಅವರಂತಹ ಆಟಗಾರ ಮೊದಲ ಓವರ್‌ನಲ್ಲೇ ಔಟ್ ಆಗುತ್ತಾರೆ, ಅದು ಕೂಡ ಸಲ್ಮಾನ್ ಆಘಾ ಅವರ ಬೌಲಿಂಗ್‌ನಲ್ಲಿ. ಮೊದಲ ಎರಡು ಓವರ್‌ಗಳಲ್ಲಿ 10 ರನ್‌ಗಳನ್ನು ಬಿಟ್ಟುಕೊಟ್ಟ ಅಘಾ, ಆ ಬಳಿಕ ಬೌಲಿಂಗ್ ಮಾಡಲಿಲ್ಲ. ಅವರು ಮಕ್ಕಳಂತೆ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಸೋಲುತ್ತಾರೆಂದು ನಮಗೆ ಈಗಾಗಲೇ ತಿಳಿದಿತ್ತು. ಹೀಗಾಗಿ ಮಳೆ ಬಂದು ಅಂಕಗಳು ವಿಭಜನೆಯಾಗುತ್ತವೆ ಎಂದು ನಾವು ಆಶಿಸಿದ್ದೆವು. ಮೊದಲು ಬೌಲ್ ಮಾಡಬೇಕೆ ಅಥವಾ ಮೊದಲು ಬ್ಯಾಟ್ ಮಾಡಬೇಕೆ ಎಂದು ತಿಳಿಯದ ಈ ಅಜ್ಞಾನಿಗಳು ಈಗ ಪಾಕಿಸ್ತಾನದ ಮುಖ್ಯ ತರಬೇತುದಾರರಾಗಿದ್ದಾರೆ’.

ENG vs ITA: ಇಟಲಿ ವಿರುದ್ಧ ಇಂಗ್ಲೆಂಡ್​ಗೆ ಪ್ರಯಾಸದ ಗೆಲುವು; ಸೂಪರ್​ 8 ಸುತ್ತಿಗೆ ಎಂಟ್ರಿ

ಬಾಬರ್ ವಿರುದ್ಧ ಕೆರಳಿದ ಅಲಿ

ಇನ್ನು ಬಾಬರ್ ಅವರ ಕಳಪೆ ಆಟದ ಬಗ್ಗೆ ಬಸಿತ್ ಅಲಿ ಪ್ರತಿಕ್ರಿಯಿಸಿ, ‘ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬಾಬರ್ ಅಜಮ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅಕ್ಷರ್ ಪಟೇಲ್ ವಿರುದ್ಧ ಕ್ರಾಸ್ ಶಾಟ್ ಬಾರಿಸುತ್ತಾರೆ. ಯಾರಾದರೂ ಅವರಿಗೆ ಬ್ಯಾಟಿಂಗ್ ಶಿಷ್ಟಾಚಾರವನ್ನು ಕಲಿಸಬೇಕು. ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್, ಅವರು ಹೊಡೆದ ಸಿಕ್ಸರ್‌ಗಳನ್ನು ನೋಡಿ. ಇಶಾನ್ ಔಟಾದ ಬಳಿಕ ಅವರು ಪಾಲುದಾರಿಕೆಯನ್ನು ನಿರ್ಮಿಸಿದರು. ಆದರೆ ಬಾಬರ್ ಜೊತೆಯಾಟ ಕಟ್ಟುವ ಕೆಲಸ ಮಾಡದೆ ಬಿಗ್ ಶಾಟ್ ಆಡಲು ಯತ್ನಿಸಿ ವಿಕೆಟ್ ಕಳೆದುಕೊಂಡರು’ ಎಂದು ಬಸಿತ್ ಅಲಿ ಆಕ್ರೋಶ ಹೊರಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 pm, Mon, 16 February 26

ಸಚಿವ ಸ್ಥಾನಕ್ಕೆ ರಾಜೀನಾಮೆ: ಸ್ಪಷ್ಟನೆ ಕೊಟ್ಟ SS ಮಲ್ಲಿಕಾರ್ಜುನ್
ಸಚಿವ ಸ್ಥಾನಕ್ಕೆ ರಾಜೀನಾಮೆ: ಸ್ಪಷ್ಟನೆ ಕೊಟ್ಟ SS ಮಲ್ಲಿಕಾರ್ಜುನ್
ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ
ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ
ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್
ಜೈಲಿನಲ್ಲೇ ದರ್ಶನ್ ಹುಟ್ಟುಹಬ್ಬ: ವಿಶ್ ಮಾಡಲು ಬಂದ ವಿಜಯಲಕ್ಷ್ಮಿ, ಧನ್ವೀರ್
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಪ್ರತಿಭಟನೆ
ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಪ್ರತಿಭಟನೆ
ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಮಣಿಶಂಕರ್ ಅಯ್ಯರ್
ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಮಣಿಶಂಕರ್ ಅಯ್ಯರ್
ನಾಪತ್ತೆಯಾದ ಮಹಿಳೆ ಪರಪುರುಷನ ಮನೆಯಲ್ಲಿ ಪತ್ತೆ: ಇಲ್ಲಿದೆ Exclusive ದೃಶ್ಯ
ನಾಪತ್ತೆಯಾದ ಮಹಿಳೆ ಪರಪುರುಷನ ಮನೆಯಲ್ಲಿ ಪತ್ತೆ: ಇಲ್ಲಿದೆ Exclusive ದೃಶ್ಯ
ಮಿತಿಮೀರಿ ನಡೆದುಕೊಂಡ ದರ್ಶನ್ ಅಭಿಮಾನಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ
ಮಿತಿಮೀರಿ ನಡೆದುಕೊಂಡ ದರ್ಶನ್ ಅಭಿಮಾನಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ
ರಿಂಕು ಸಿಂಗ್ ಕೈಯಲ್ಲಿ ಬೌಲಿಂಗ್ ಮಾಡಿಸಿ ನಮ್ಮ ಮರ್ಯಾದೆಯನ್ನೇ ತೆಗೆದುಬಿಟ್ರು
ರಿಂಕು ಸಿಂಗ್ ಕೈಯಲ್ಲಿ ಬೌಲಿಂಗ್ ಮಾಡಿಸಿ ನಮ್ಮ ಮರ್ಯಾದೆಯನ್ನೇ ತೆಗೆದುಬಿಟ್ರು