Virat Kohli Big Bash: ಬಿಗ್ ಬ್ಯಾಷ್ನಲ್ಲಿ ಆಡಲಿದ್ದಾರೆ ವಿರಾಟ್ ಕೊಹ್ಲಿ: ಸಿಡ್ನಿ ಸಿಕ್ಸರ್ಸ್ನಿಂದ ಅಧಿಕೃತ ಘೋಷಣೆ
Virat Kohli sydney Sixers: ಸಿಡ್ನಿ ಸಿಕ್ಸರ್ಸ್ ಏಪ್ರಿಲ್ 1 ರಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಂದಿನ ಎರಡು ಬಿಗ್ ಬ್ಯಾಷ್ ಲೀಗ್ ಸೀಸನ್‌ಗಳಿಗೆ ಸ್ಟಾರ್ ಬ್ಯಾಟರ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದೆ. ಮುಂದಿನ ಎರಡು ಸೀಸನ್ನಲ್ಲಿ ಇವರು ಸಿಡ್ಮಿ ಸಿಕ್ಸರ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರಂತೆ. ಹೀಗಾಗಿ ವಿದೇಶಿ ಲೀಗ್‌ನಲ್ಲಿ ಆಡಲಿರುವ ಮೊದಲ ಸಕ್ರಿಯ ಭಾರತೀಯ ಆಟಗಾರ ವಿರಾಟ್ ಕೊಹ್ಲಿ ಆಗಲಿದ್ದಾರೆಯೇ?.

(ಬೆಂಗಳೂರು, ಏ 01): ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಕೊಹ್ಲಿ ಉತ್ತಮ ಲಯದಲ್ಲಿದ್ದಾರೆ. ಇದರ ನಡುವೆ ಕಿಂಗ್ ಕೊಹ್ಲಿ ಆಸ್ಟ್ರೇಲಿಯಾದ ಪ್ರಸಿದ್ಧ ಬಿಗ್ ಬ್ಯಾಷ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ಎರಡು ಸೀಸನ್ನಲ್ಲಿ ಇವರು ಸಿಡ್ಮಿ ಸಿಕ್ಸರ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರಂತೆ. ಹೀಗಾಗಿ ವಿದೇಶಿ ಲೀಗ್‌ನಲ್ಲಿ ಆಡಲಿರುವ ಮೊದಲ ಸಕ್ರಿಯ ಭಾರತೀಯ ಆಟಗಾರ ವಿರಾಟ್ ಕೊಹ್ಲಿ ಆಗಲಿದ್ದಾರೆಯೇ?. ಆದರೆ, ಇದರಲ್ಲೊಂದು ಟ್ವಿಸ್ಟ್ ಇದೆ.
ಸಿಡ್ನಿ ಸಿಕ್ಸರ್ಸ್ ಏಪ್ರಿಲ್ 1 ರಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಂದಿನ ಎರಡು ಬಿಗ್ ಬ್ಯಾಷ್ ಲೀಗ್ ಸೀಸನ್‌ಗಳಿಗೆ ಸ್ಟಾರ್ ಬ್ಯಾಟರ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದೆ.
King Kohli 🤩
Virat Kohli is officially a Sixer for the next TWO seasons! ✍️ #LIKEASIXER pic.twitter.com/TE89D4Ar6l
— Sydney Sixers (@SixersBBL) March 31, 2025
ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪ್ರಮುಖ ಆಟಗಾರರಾಗಿದ್ದು, ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗೆ 8094 ರನ್ ಗಳಿಸಿ 8 ಶತಕಗಳು ಮತ್ತು 56 ಅರ್ಧಶತಕಗಳನ್ನು ಗಳಿಸಿದ್ದಾರೆ. ಬಿಸಿಸಿಐ ನಿಯಮದ ಪ್ರಕಾರ, ಭಾರತೀಯ ಆಟಗಾರರು ನಿವೃತ್ತರಾಗುವವರೆಗೆ ಬಿಬಿಎಲ್‌ನಂತಹ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶವಿಲ್ಲ. ಭಾರತೀಯ ಆಟಗಾರ ಅಂತರರಾಷ್ಟ್ರೀಯ ಕ್ರಿಕೆಟ್ ಜೊತೆಗೆ ದೇಶೀಯ ಕ್ರಿಕೆಟ್‌ನಿಂದಲೂ ನಿವೃತ್ತರಾದರೆ ಮಾತ್ರ ಹೊರಗೆ ಹೋಗಿ ವಿದೇಶಿ ಲೀಗ್‌ಗಳಲ್ಲಿ ಆಡಲು ಸಾಧ್ಯ. ಆದರೆ ಸಿಡ್ನಿ ಸಿಕ್ಸರ್ಸ್‌ನ ಟ್ವೀಟ್ ಮಂಗಳವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ.
RCB vs GT, IPL 2025: ಸತತ ಎರಡು ಪಂದ್ಯ ಗೆದ್ದ ಆರ್ಸಿಬಿಯ ಮುಂದಿನ ಟಾರ್ಗೆಟ್ ಯಾರು?, ಮ್ಯಾಚ್ ಯಾವಾಗ?
“ಕಿಂಗ್ ಕೊಹ್ಲಿ! ವಿರಾಟ್ ಕೊಹ್ಲಿ ಮುಂದಿನ ಎರಡು ಸೀಸನ್‌ಗಳಿಗೆ ಅಧಿಕೃತವಾಗಿ ಸಿಕ್ಸರ್ ಪರ ಆಡಲಿದ್ದಾರೆ!” ಎಂದು ಸಿಕ್ಸರ್ಸ್‌ನ ಟ್ವೀಟ್‌ನಲ್ಲಿ ಹೇಳಲಾಗಿದೆ.
ಆದರೆ, ಈ ಟ್ವೀಟ್ ಜೊತೆಗೆ ಏಪ್ರಿಲ್ ಮೂರ್ಖರ ದಿನವನ್ನು ಆಚರಿಸಲು ಇದು ತಾವು ಮಾಡಿದ ತಮಾಷೆ ಎಂದು ಸಿಕ್ಸರ್ಸ್ ಸ್ವತಃ ಬಹಿರಂಗಪಡಿಸಿದೆ.
April Fools
— Sydney Sixers (@SixersBBL) April 1, 2025
ಐಪಿಎಲ್ 2025 ರಲ್ಲಿ ಆರ್‌ಸಿಬಿ ಪರ ಕೊಹ್ಲಿ ಉತ್ತಮ ಆರಂಭ:
ಆರ್‌ಸಿಬಿ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ಕೊಹ್ಲಿ ಐಪಿಎಲ್ 2025 ರಲ್ಲಿ ಭರ್ಜರಿ ಆರಂಭವನ್ನು ಪಡೆದುಕೊಂಡಿದ್ದಾರೆ. ಆರ್‌ಸಿಬಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಅಮೋಘ ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸಿತು, ಇದರಲ್ಲಿ ಕೊಹ್ಲಿ ಅಜೇಯ 59 ರನ್ ಗಳಿಸಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು. ಬಳಿಕ ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಕೊಹ್ಲಿ 30 ಎಸೆತಗಳಲ್ಲಿ 31 ರನ್ ಗಳಿಸಿದರು. ಇದರಲ್ಲಿ ಬೆಂಗಳೂರು ತಂಡವು ಚೆನ್ನೈ ತಂಡವನ್ನು 50 ರನ್‌ಗಳಿಂದ ಸೋಲಿಸಿ ಚೆಪಾಕ್‌ನಲ್ಲಿ ಅಪರೂಪದ ಗೆಲುವು ಸಾಧಿಸಿತು.
ಸದ್ಯ ಆರ್‌ಸಿಬಿ ತಂಡವು 2025 ರ ಐಪಿಎಲ್‌ನಲ್ಲಿ ತಮ್ಮ ಮುಂದಿನ ಪಂದ್ಯವನ್ನೂ ಗೆದ್ದು ಹ್ಯಾಟ್ರಿಕ್ ಜಯದ ಸಾಧನೆ ಮಾಡುವ ಗುರಿಯನ್ನು ಹೊಂದಿದೆ. ಆರ್‌ಸಿಬಿ ತನ್ನ ಮುಂದಿನ ಪಂದ್ಯಕ್ಕಾಗಿ ತವರು ಬೆಂಗಳೂರಿಗೆ ಬಂದಿದೆ. ಮೂರನೇ ಪಂದ್ಯ ಬುಧವಾರ (ಏಪ್ರಿಲ್ 2) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Tue, 1 April 25