AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs South Africa: ಭಾರತ- ಆಫ್ರಿಕಾ ಟೆಸ್ಟ್ ಆರಂಭಕ್ಕೆ ಒಂದೇ ದಿನ ಬಾಕಿ: ಕೋಚ್ ದ್ರಾವಿಡ್​ರಿಂದ ಆಟಗಾರರಿಗೆ ಸ್ಪೆಷಲ್ ಕ್ಲಾಸ್

IND vs SA 1st Test: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ಸೂಪರ್‌ಸ್ಪೋರ್ಟ್ ಪಾಕ್ ಮೈದಾನದಲ್ಲಿ ಕಳೆದ ಒಂದು ವಾರದಿಂದ ಭಾರತೀಯ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಎಲ್ಲ ಆಟಗಾರರನ್ನು ಒಟ್ಟುಗೂಡಿಸಿ ರಾಹುಲ್ ದ್ರಾವಿಡ್ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

India vs South Africa: ಭಾರತ- ಆಫ್ರಿಕಾ ಟೆಸ್ಟ್ ಆರಂಭಕ್ಕೆ ಒಂದೇ ದಿನ ಬಾಕಿ: ಕೋಚ್ ದ್ರಾವಿಡ್​ರಿಂದ ಆಟಗಾರರಿಗೆ ಸ್ಪೆಷಲ್ ಕ್ಲಾಸ್
India vs South Africa 1st Test
TV9 Web
| Updated By: Vinay Bhat|

Updated on: Dec 25, 2021 | 12:51 PM

Share

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯಕ್ಕೆ ಭಾರತ (India vs South Africa) ತಂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಆಫ್ರಿಕಾ ಪಿಚ್​ನ ಮರ್ಮವನ್ನು ತಿಳಿಯಲು ವಿರಾಟ್ ಕೊಹ್ಲಿ (Virat Kohli) ಪಡೆ ನೆಟ್​ನಲ್ಲಿ ಬೆವರು ಹರಿಸುತ್ತಿದೆ. ಡಿಸೆಂಬರ್ 26 ರಂದು ಶುರುವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಮೂಲಕ ಸರಣಿಗೆ ಚಾಲನೆ ಸಿಗಲಿದೆ. ಆಫ್ರಿಕಾ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ (Team India) ಸಾಕಷ್ಟು ಬೆಳವಣಿಗೆಗಳು ನಡೆದವು. ಹೀಗಾಗಿ ಭಾರತ ತಂಡಕ್ಕೆ ಈ ಸರಣಿ ಮುಖ್ಯವಾಗಿದೆ. ಅಲ್ಲದೆ ಹರಿಣಗಳ ನೆಲದಲ್ಲಿ ಭಾರತ ಇದುವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ಐತಿಹಾಸಿಕ ಸಾಧನೆ ಮಾಡುವ ಅವಕಾಶ ಕೂಡ ಇದೆ. ಇದಕ್ಕಾಗಿ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಸಾರಥ್ಯದಲ್ಲಿ ವಿಶೇಷ ಪ್ಲಾನ್ ಕೂಡ ರೂಪಿಸಿದಂತಿದೆ.

ಸದ್ಯಕ್ಕೆ ಸೆಂಚೂರಿಯನ್‌ನ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಭಾರತ ತಂಡ, ಸೂಪರ್‌ಸ್ಪೋರ್ಟ್ ಪಾಕ್ ಮೈದಾನದಲ್ಲಿ ಕಳೆದ ಒಂದು ವಾರದಿಂದ ಅಭ್ಯಾಸ ನಡೆಸುತ್ತಿದೆ. ಅದರಲ್ಲೂ ಕ್ರೀಡಾಂಗಣದ ಸೆಂಟರ್ ಪಿಚ್‌ನಲ್ಲಿ ಅಭ್ಯಾಸ ನಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ. ಟ್ರೈನಿಂಗ್ ಸೆಷನ್​ನಲ್ಲಿ ಆರ್ ಅಶ್ವಿನ್ ಬೌಲಿಂಗ್ ಅಭ್ಯಾಸ ನಡೆಸಿದರೆ, ನೆಟ್ ಸೆಷನ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಪ್ರಾಕ್ಟೀಸ್ ಬೆವರಿಳಿಸಿದರು. ಇತ್ತ ಕಳೆದ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ಕಿಂಗ್ ಕೊಹ್ಲಿಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಲೋಪಗಳನ್ನು ತಿದ್ದುವ ಮೂಲಕ ಹೊಸ ಹೊಳಪು ನೀಡುವತ್ತ ಗಮನ ಹರಿಸಿತ್ತಿದ್ದಾರೆ. ಎಲ್ಲ ಆಟಗಾರರನ್ನು ಒಟ್ಟುಗೂಡಿಸಿ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಅಂದಹಾಗೆ ಭಾರತ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ ಇದು ಅತ್ಯಂತ ಮಹತ್ವದ ಸರಣಿಯಾಗಿದೆ. ದ್ರಾವಿಡ್‌ ಮಾರ್ಗದರ್ಶನದಲ್ಲಿ ಭಾರತ ತಂಡ ತಾಯ್ನಾಡಿನಲ್ಲಿ ನ್ಯೂಜಿಲೆಂಡ್‌ ಎದುರು ಟೆಸ್ಟ್‌ ಮತ್ತು ಟಿ20 ಕ್ರಿಕೆಟ್‌ ಸರಣಿಯನ್ನು ಗೆದ್ದಾಗಿದೆ. ಈಗ ನೂತನ ಕೋಚ್‌ ಅಡಿ ವಿದೇಶದಲ್ಲಿ ಮೊದಲ ಸರಣಿಯನ್ನಾಡುತ್ತಿದ್ದು, ಭಾರತ ತಂಡಕ್ಕೆ ಯಶಸ್ಸು ತಂದುಕೊಡುವ ಜವಾಬ್ದಾರಿ ದ್ರಾವಿಡ್‌ ಮೇಲಿದೆ.

ಇದರ ನಡುಗೆ ಭಾರತದ ಪ್ಲೇಯಿಂಗ್ ಇಲೆವೆನ್ ಕಟ್ಟುವುದೇ ತಲೆನೋವಾಗಿ ಪರಿಣಮಿಸಿದೆ. ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಮತ್ತು ಹನುಮಾ ವಿಹಾರಿ ಪೈಕಿ ಯಾರಿಗೆ ಸ್ಥಾನ ನೀಡುವುದು ಎಂಬ ಗೊಂದಲ ಟೀಮ್ ಇಂಡಿಯಾದಲ್ಲಿ ಉಂಟಾಗಿದೆ. ಒಬ್ಬ ಬ್ಯಾಟರ್ ಅಥವಾ ಆಲ್ರೌಂಡರ್ ಅನ್ನು ಆಯ್ಕೆ ಮಾಡಬೇಕಾದ ಗೊಂದಲದಲ್ಲಿದೆ. ಆಫ್ರಿಕಾ ವಾತಾವರಣಕ್ಕೆ ಐವರು ವೇಗಿಗಳನ್ನು ಇಳಿಸುವುದು ಕೊಹ್ಲಿಯ ಮೊದಲ ಆಯ್ಕೆ. ಆದರೆ, ಹೀಗಾದಲ್ಲಿ ರಹಾನೆ ಅಥವಾ ವಿಹಾರಿ ಅವರನ್ನು ಕೈಬಿಡಬೇಕಾಗುತ್ತದೆ.

ಹೀಗೆ ಅನೇಕ ವಿಚಾರಗಳಿಂದ ಮೊದಲ ಟೆಸ್ಟ್​ನ ಪ್ಲೇಯಿಂಗ್ ಇಲೆವೆನ್ ಕೊಹ್ಲಿ ಹಾಗೂ ಮ್ಯಾನೇಜ್ಮೆಂಟ್​ಗೆ ಕಬ್ಬಿಣದ ಕಡಲೆಯಂತಾಗಿದೆ. ಹಾಗಾದ್ರೆ ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್‌ 26ರಿಂದ ಆರಂಭವಾಗಲಿರುವ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌ ಹೇಗಿರಬಹುದು ಎಂಬುದನ್ನು ನೋಡುವುದಾದರೆ…

ಭಾರತದ ಸಂಭಾವ್ಯ ಪ್ಲೇಯಿಂಗ್ XI: ಕೆಎಲ್ ರಾಹುಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್/ಅಜಿಂಕ್ಯಾ ರಹಾನೆ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್/ಹನುಮಾ ವಿಹಾರಿ, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

Don Bradman: ಡಾನ್ ಬ್ರಾಡ್ಮನ್ ನಮ್ಮಲ್ಲಿ ಹುಟ್ಟಿದ್ದರೆ ಮೀನುಗಾರನಾಗುತ್ತಿದ್ದರು ಎಂದ ಐಸ್​​ಲೆಂಡ್ ಕ್ರಿಕೆಟ್: ವಿಚಿತ್ರ ಟ್ವೀಟ್​ ಹಿಂದಿದೆ ಕಾರಣ

KL Rahul: ರಹಾನೆ-ಅಯ್ಯರ್ ಪೈಕಿ ಯಾರಿಗೆ ಸ್ಥಾನ?: ಕಠಿಣ ಪ್ರಶ್ನೆಗೆ ಕೆಎಲ್ ರಾಹುಲ್ ಖಡಕ್ ಉತ್ತರ

(Virat Kohli team attempting to conquer their FINAL FRONTIER coach Rahul Dravid discussion the team strategy pitch and playing XI)

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?