ವಿರಾಟ್ ಕೊಹ್ಲಿ ಪತ್ನಿ, ರೋಹಿತ್ ಶರ್ಮಾ ಹೆಂಡ್ತಿ ನಡುವೆ ಎಲ್ಲವೂ ಸರಿಯಿಲ್ವಾ? ಇಲ್ಲಿದೆ ಉತ್ತರ
India vs New Zealand: ದುಬೈನಲ್ಲಿ ನಡೆದ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಹಾಗೂ ವಿರಾಟ್ ಕೊಹ್ಲಿಯ ಹೆಂಡತಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದರು. ಈ ವೇಳೆ ಭೇಟಿಯಾದ ಇಬ್ಬರ ವಿಡಿಯೋ ಇದೀಗ ವೈರಲ್ ಆಗಿದೆ.

ಟೀಮ್ ಇಂಡಿಯಾದ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪತ್ನಿಯರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದನ್ನು ಪುಷ್ಠೀಕರಿಸುವಂತೆ ಇಬ್ಬರೂ ಜೊತೆಯಾಗಿ ಕೂತು ಟೀಮ್ ಇಂಡಿಯಾದ ಪಂದ್ಯವನ್ನು ವೀಕ್ಷಿಸಿದ್ದು ಬಲು ಅಪರೂಪ. ಹೀಗಾಗಿಯೇ ಅನುಷ್ಕಾ ಶರ್ಮಾ ಹಾಗೂ ರಿತಿಕಾ ಸಜ್ದೇಹ್ ನಡುವಣ ಬಾಂಧವ್ಯ ಅಷ್ಟಕ್ಕಷ್ಟೇ ಎಂಬ ಸುದ್ದಿಗಳು ಹರಿದಾಡುತ್ತಿದ್ದವು.
ಆದರೆ ಹೀಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂಬುದನ್ನು ನಿರೂಪಿಸಿದ್ದಾರೆ ಅನುಷ್ಕಾ ಹಾಗೂ ರಿತಿಕಾ. ಏಕೆಂದರೆ ಭಾನುವಾರ (ಮಾ.2) ದುಬೈನಲ್ಲಿ ನಡೆದ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಪತ್ನಿ ಹಾಗೂ ರೋಹಿತ್ ಶರ್ಮಾರ ಹೆಂಡ್ತಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಈ ವೇಳೆ ರಿತಿಕಾ-ರೋಹಿತ್ ಅವರ 2ನೇ ಮಗುವನ್ನು ಅನುಷ್ಕಾ ಶರ್ಮಾ ಮುದ್ದಾಡಿದ್ದಾರೆ. ರಿತಿಕಾ ಸಜ್ದೇಹ್ ಜೊತೆ ಮಾತನಾಡುತ್ತ ಮಗುವಿನ ಕುಶಲೋಪರಿ ವಿಚಾರಿಸುತ್ತಿರುವ ಅನುಷ್ಕಾ ಶರ್ಮಾ ಅವರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೋದೊಂದಿಗೆ ಅನುಷ್ಕಾ ಹಾಗೂ ರಿತಿಕಾ ನಡುವೆ ಎಲ್ಲವೂ ಸರಿಯಿದ್ದು, ಇಬ್ಬರು ಲೈವ್ ವೇಳೆ ಕ್ಯಾಮೆರಾ ಮುಂದೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದು ಜಗಜ್ಜಾಹೀರಾಗಿದೆ.
ಅನುಷ್ಕಾ ಶರ್ಮಾ – ರಿತಿಕಾ ಸಜ್ದೇಹ್ ವೈರಲ್ ವಿಡಿಯೋ:
ಗೆದ್ದು ಬೀಗಿದ ಟೀಮ್ ಇಂಡಿಯಾ:
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಶ್ರೇಯಸ್ ಅಯ್ಯರ್ (77) ಅರ್ಧಶತಕ ಬಾರಿಸಿದರೆ, ಅಕ್ಷರ್ ಪಟೇಲ್ 42 ರನ್ಗಳ ಕೊಡುಗೆ ನೀಡಿದರು. ಇನ್ನು ಹಾರ್ದಿಕ್ ಪಾಂಡ್ಯ 45 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 249 ಕ್ಕೆ ತಂದು ನಿಲ್ಲಿಸಿದರು.
ಇದನ್ನೂ ಓದಿ: ಹೀಗೂ ಉಂಟೆ.. ವಿರಾಟ್ ಕೊಹ್ಲಿ ಔಟಾಗಿದಕ್ಕೆ ಫಿಲಿಪ್ಸ್ ಕಂಪೆನಿಗೆ ಬೈಗುಳ..!
250 ರನ್ಗಳ ಗುರಿ ಬೆನ್ನತ್ತಿದ ನ್ಯೂಝಿಲೆಂಡ್ ಪರ ಕೇನ್ ವಿಲಿಯಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಜವಾಬ್ದಾರಿಯುತ ಇನಿಂಗ್ಸ್ ಆಡಿದ ಕೇನ್ 120 ಎಸೆತಗಳಲ್ಲಿ 81 ರನ್ ಬಾರಿಸಿ ಔಟಾದರು. ಇತ್ತ ಟೀಮ್ ಇಂಡಿಯಾ ಪರ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ 10 ಓವರ್ಗಳಲ್ಲಿ ಕೇವಲ 42 ರನ್ ನೀಡಿ 5 ವಿಕೆಟ್ ಕಬಳಿಸಿದರು. ಪರಿಣಾಮ ನ್ಯೂಝಿಲೆಂಡ್ ತಂಡವು 45.3 ಓವರ್ಗಳಲ್ಲಿ 205 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 44 ರನ್ಗಳ ಗೆಲುವು ದಾಖಲಿಸಿದೆ.
