AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಬೆಂಗಳೂರಿನಲ್ಲೇ ನಡೆಯಲಿವೆ ಆರ್​ಸಿಬಿ ಪಂದ್ಯಗಳು; ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ

RCB's IPL 2026 Home:2026ರ ಐಪಿಎಲ್ ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಆರ್​ಸಿಬಿ ಫ್ರಾಂಚೈಸಿ ಮತ್ತು ರಾಜ್ಯ ಸರ್ಕಾರದ ನಡುವಿನ ವಿವಾದ ಕೊನೆಗೊಂಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ಈ ನಿರ್ಧಾರಕ್ಕೆ ಅನುಮತಿ ನೀಡಿದೆ. ಇದು ಆರ್​ಸಿಬಿ ಅಭಿಮಾನಿಗಳಿಗೆ ದೊಡ್ಡ ಸಂತಸ ತಂದಿದೆ.

IPL 2026: ಬೆಂಗಳೂರಿನಲ್ಲೇ ನಡೆಯಲಿವೆ ಆರ್​ಸಿಬಿ ಪಂದ್ಯಗಳು; ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ
Rcb
ಪೃಥ್ವಿಶಂಕರ
|

Updated on:Feb 12, 2026 | 9:35 PM

Share

2026 ರ ಐಪಿಎಲ್ (IPL 2026) ಮಾರ್ಚ್​ ಅಂತ್ಯದಲ್ಲಿ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ತವರು ಪಂದ್ಯಗಳನ್ನು ಎಲ್ಲಿ ಆಡಲಿದೆ ಎಂಬುದು ಇದುವರೆಗು ಖಚಿತವಾಗಿರಲಿಲ್ಲ. ಇದಕ್ಕೆ ಕಾರಣ ಆರ್​ಸಿಬಿ ಫ್ರಾಂಚೈಸಿ ಹಾಗೂ ರಾಜ್ಯ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ. ಇದೀಗ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡಿರುವಂತೆ ಕಾಣುತ್ತಿದ್ದು, ಆರ್​ಸಿಬಿ ತಂಡ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಇಂದು ನಡೆದ ಸಚಿವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸರ್ಕಾರದ ಈ ನಿರ್ಧಾರ ಆರ್​ಸಿಬಿ ಅಭಿಮಾನಿಗಳನ್ನು ಸಂತಸದ ಅಲೆಯಲ್ಲಿ ಮಿಂದೇಳುವಂತೆ ಮಾಡಿದೆ.

ಎಕ್ಸ್‌ಪರ್ಟ್ ಕಮಿಟಿ ವರದಿ

ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಅನುಮತಿ ನೀಡುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಇಂದು ಬೆಳಗ್ಗೆ ಗೃಹ ಇಲಾಖೆ ಜೊತೆ ಗೃಹ ಮಂತ್ರಿ ಪರಮೇಶ್ವರ್ ಸಭೆ ನಡೆಸಿದ್ದರು. ಅದರಂತೆ ಈ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಎಕ್ಸ್‌ಪರ್ಟ್ ಕಮಿಟಿ ವರದಿ ಮೇಲೆ ಕ್ಯಾಬಿನೆಟ್​ನಲ್ಲಿ ಪಂದ್ಯಗಳನ್ನು ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮೂಲ ಸೌಕರ್ಯಗಳ ಕಾಮಗಾರಿ

ಸರ್ಕಾರದ ಈ ನಿರ್ಧಾರಕ್ಕೆ ಪೂರಕವಾಗಿ ನಿವೃತ್ತ ನ್ಯಾಯಮೂರ್ತಿ ಕುನ್ಹಾ ಅವರ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲ ಕೆಎಸ್‌ಸಿಎ ಕೆಲಸ ಆರಂಭಿಸಿದೆ. ಆ ಪ್ರಕಾರ, ಈಗಾಗಲೇ ಕ್ರೀಡಾಂಗಣದಲ್ಲಿ ಕುನ್ಹಾ ವರದಿ ಶಿಫಾರಸ್ಸು ಮಾಡಿರುವಂತೆ ಕೆಲ ಸೌಕರ್ಯ ಒದಗಿಸಲು ಕೆಲಸ‌ ಮಾಡಲಾಗ್ತಿದೆ. ಹೀಗಾಗಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಬಹುದು ಎಂದು ಎಕ್ಸ್‌ಪರ್ಟ್ ಕಮಿಟಿ ವರದಿ ನೀಡತ್ತು. ಇದೀಗ ಎಕ್ಸ್‌ಪರ್ಟ್ ಕಮಿಟಿ ವರದಿಯ ಮೇಲೆ ಸಚಿವ ಸಂಪುಟದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಗೆಯೇ ಐಪಿಎಲ್ ಜೊತೆ ಜೊತೆಗೆ ಮೂಲ ಸೌಕರ್ಯ ಕಾಮಗಾರಿಗಳು ನಡೆಯಲಿದ್ದು, ಎಕ್ಸ್‌ಪರ್ಟ್ ಕಮಿಟಿ ಈ ಕಾಮಗಾರಿಗಳನ್ನ ಮಾನಿಟರಿಂಗ್ ಮಾಡಲಿದೆ.

RCB: ಆರ್​ಸಿಬಿ ಖರೀದಿಗೆ ಖಜಾನೆ ತೆರೆದ 2 ಲಕ್ಷ ಕೋಟಿ ರೂ. ಒಡೆಯ

ಇದರಡಿಯಲ್ಲಿ ಆಸನಗಳ ವ್ಯವಸ್ಥೆಯ ಬಗ್ಗೆಯೂ ಸಮಿತಿ ಪರಿಶೀಲನೆ ನಡೆಸಲಿದ್ದು, ಅಭಿಮಾನಿಗಳ ಸಂಖ್ಯೆಗೆ ಅನುಗುಣವಾಗಿ ಸ್ಟ್ಯಾಂಡ್​ಗಳಿಗೆ ಅನುಮತಿ ನೀಡಲಾಗಿದೆ. ಹಾಗೆಯೇ 30 ರಿಂದ 35 ಸಾವಿರ ಜನರಿಗೆ ಕ್ರೀಡಾಂಗಣದಲ್ಲಿದಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಲಾಗಿದೆ. ಆದಾಗ್ಯೂ ಕೆಎಸ್ಸಿಎ ನೀಡಿರುವ ಭರವಸೆಗಳನ್ನು ಪಾಲಿಸಿದಿದ್ದರೆ ಅನುಮತಿ ಬಗ್ಗೆ ಪುನರ್ ಪರಿಶೀಲನೆ ಮಾಡುವುದಾಗಿಯೂ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 pm, Thu, 12 February 26

ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್
ನೆಲಮಂಗಲದ ಬಳಿ ಆರೆಂಜ್ ತುಂಬಿದ ಲಾರಿ ಪಲ್ಟಿ
ನೆಲಮಂಗಲದ ಬಳಿ ಆರೆಂಜ್ ತುಂಬಿದ ಲಾರಿ ಪಲ್ಟಿ