ವೀರೇಂದ್ರ ಸೆಹ್ವಾಗ್, ಡಯಾನಾ ಎಡುಲ್ಜಿ ಹಾಗೂ ಅರವಿಂದ ಡಿ ಸಿಲ್ವಾಗೆ ಐಸಿಸಿ ‘ಹಾಲ್ ಆಫ್ ಫೇಮ್’ ಗೌರವ

ICC Hall of Fame: ಟೀಂ ಇಂಡಿಯಾದ ಮಾಜಿ ಆಕ್ರಮಣಕಾರಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಶ್ರೀಲಂಕಾದ 1996 ರ ವಿಶ್ವಕಪ್ ವಿಜೇತ ಹೀರೋ ಅರವಿಂದ ಡಿ ಸಿಲ್ವಾ ಮತ್ತು ಭಾರತದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಹಾಲ್ ಆಫ್ ಫೇಮ್‌ ಗೌರವ ನೀಡಿ ಸತ್ಕರಿಸಿದೆ.

ವೀರೇಂದ್ರ ಸೆಹ್ವಾಗ್, ಡಯಾನಾ ಎಡುಲ್ಜಿ ಹಾಗೂ ಅರವಿಂದ ಡಿ ಸಿಲ್ವಾಗೆ ಐಸಿಸಿ ‘ಹಾಲ್ ಆಫ್ ಫೇಮ್’ ಗೌರವ
ಡಯಾನಾ ಎಡುಲ್ಜಿ, ಅರವಿಂದ ಡಿ ಸಿಲ್ವಾ, ವೀರೇಂದ್ರ ಸೆಹ್ವಾಗ್
Follow us
ಪೃಥ್ವಿಶಂಕರ
|

Updated on:Nov 13, 2023 | 12:49 PM

ಟೀಂ ಇಂಡಿಯಾದ ಮಾಜಿ ಆಕ್ರಮಣಕಾರಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag), ಶ್ರೀಲಂಕಾದ 1996 ರ ವಿಶ್ವಕಪ್ ವಿಜೇತ ಹೀರೋ ಅರವಿಂದ ಡಿ ಸಿಲ್ವಾ (Aravinda de Silva) ಮತ್ತು ಭಾರತ ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ (Diana Edulji) ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಐಸಿಸಿ ಹಾಲ್ ಆಫ್ ಫೇಮ್‌ (ICC Hall of Fame) ಪಟ್ಟಿಗೆ ಸೇರ್ಪಡೆಗೊಳಿಸಿದೆ. ಅಸ್ತಿತ್ವದಲ್ಲಿರುವ ಹಾಲ್ ಆಫ್ ಫೇಮರ್ಸ್, ಮಾಧ್ಯಮ ಪ್ರತಿನಿಧಿಗಳು, FICA ಮತ್ತು ಐಸಿಸಿಯ ಹಿರಿಯ ಕಾರ್ಯನಿರ್ವಾಹಕರ ನಡುವೆ ನಡೆಸಿದ ಮತದಾನ ಪ್ರಕ್ರಿಯೆಯ ನಂತರ ಈ ಮೂವರಿಗೆ ಐಸಿಸಿ ಹಾಲ್ ಆಫ್ ಫೇಮ್ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸೆಹ್ವಾಗ್ ವೃತ್ತಿ ಬದುಕು

ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ನಿಂದಾಗಿ ವಿಶ್ವ ಕ್ರಿಕೆಟ್​ನ ದಿಗ್ಗಜ ಬೌಲರ್​ಗಳ ಬೆವರಿಳಿಸಿದ್ದ ವೀರೇಂದ್ರ ಸೆಹ್ವಾಗ್, ಭಾರತದ ಪರ 104 ಟೆಸ್ಟ್, 251 ಏಕದಿನ ಮತ್ತು 19 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್​ನಲ್ಲಿ 49.34 ಸರಾಸರಿಯಲ್ಲಿ 8,586 ರನ್ ಬಾರಿಸಿರುವ ವೀರೂ, ಬೌಲಿಂಗ್​ನಲ್ಲಿ 40 ವಿಕೆಟ್‌ಗಳನ್ನು ಸಹ ಪಡೆದರು. ಹಾಗೆಯೇ 23 ಟೆಸ್ಟ್ ಶತಕಗಳನ್ನು ಸಿಡಿಸಿದ್ದಾರೆ.

ಏಕದಿನ ಮಾದರಿಯಲ್ಲೂ ಗಮನಾರ್ಹ ಪ್ರದರ್ಶನ ನೀಡಿರುವ ಸೆಹ್ವಾಗ್, 1 ದ್ವಿಶತಕ, 15 ಶತಕ ಮತ್ತು 38 ಅರ್ಧಶತಕಗಳೊಂದಿಗೆ 8,273 ರನ್ ದಾಖಲಿಸಿದ್ದಾರೆ. 2011 ರಲ್ಲಿ ಇಂದೋರ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ದಾಖಲೆಯ 219 ರನ್ ಸಿಡಿಸಿದ್ದು, ಸೆಹ್ವಾಗ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಹಾಗೆಯೇ 2011 ರಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಏಕದಿನ ವಿಶ್ವಕಪ್ ಪ್ರಶಸ್ತಿ ಎತ್ತಿ ಹಿಡಿಯುವಲ್ಲಿ ಅಪಾರ ಕೊಡುಗೆ ನೀಡಿದ್ದ ಸೆಹ್ವಾಗ್, ಇಡೀ ವಿಶ್ವಕಪ್​ನಲ್ಲಿ 380 ರನ್‌ ಕಲೆಹಾಕುವುದರೊಂದಿಗೆ ಅಧಿಕ ರನ್ ಕಲೆಹಾಕಿದ ಆಟಗಾರರ ಪೈಕಿ 7ನೇ ಸ್ಥಾನ ಪಡೆದುಕೊಂಡಿದ್ದರು.

ಸಂತಸ ವ್ಯಕ್ತಪಡಿಸಿರುವ ಸೆಹ್ವಾಗ್

ಐಸಿಸಿಯಿಂದ ಹಾಲ್ ಫೇಮ್ ಗೌರವಕ್ಕೆ ಭಾಜನರಾದ ಬಳಿಕ ಸಂತಸ ವ್ಯಕ್ತಪಡಿಸಿರುವ ಸೆಹ್ವಾಗ್, ಈ ಪಟ್ಟಿಗೆ ನನ್ನನ್ನು ಸೇರಿಸಿಕೊಂಡಿದ್ದಕ್ಕಾಗಿ ನಾನು ಐಸಿಸಿ ಮತ್ತು ತೀರ್ಪುಗಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಜೀವನದ ಬಹುಭಾಗವನ್ನು ನಾನು ಹೆಚ್ಚು ಇಷ್ಟಪಟ್ಟ ಕ್ರಿಕೆಟ್​ನಲ್ಲಿ ಕಳೆದಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಕುಟುಂಬ, ಸ್ನೇಹಿತರು, ನನಗಾಗಿ ನಿಸ್ವಾರ್ಥವಾಗಿ ಪ್ರಾರ್ಥಿಸಿದ ಅಸಂಖ್ಯಾತ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಮೊದಲ ಭಾರತೀಯ ಮಹಿಳಾ ಕ್ರಿಕೆಟರ್

ಏತನ್ಮಧ್ಯೆ,  17 ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಎಡುಲ್ಜಿ ಅವರು ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಡುಲ್ಜಿ ಅವರ ಮೂರು ದಶಕಗಳ ವೃತ್ತಿಜೀವನದಲ್ಲಿ ಭಾರತದ ಪರ 54 ಪಂದ್ಯಗಳನ್ನು ಆಡಿದ್ದರು. ಹಾಗೆಯೇ ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಎಂಬ ಖ್ಯಾತಿ ಗಳಿಸಿದ್ದ ಎಡುಲ್ಜಿ ಅವರು ಭಾರತದ ಪರ 100 ಕ್ಕೂ ಹೆಚ್ಚು ವಿಕೆಟ್​ಗಳನ್ನು ಪಡೆದಿದ್ದರು. ವೃತ್ತಿ ಬದುಕಿಗೆ ವಿದಾಯ ಹೇಳಿದ ಬಳಿಕವೂ ಅವರು ಭಾರತ ಮಹಿಳಾ ತಂಡದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದರು.

ಈ ಗೌರವಕ್ಕೆ ಸಂತಸ ವ್ಯಕ್ತಪಡಿಸಿರುವ ಎಡುಲ್ಜಿ ಅವರು, ‘ಭಾರತೀಯ ಮಹಿಳಾ ಕ್ರಿಕೆಟ್‌ಗೆ ಇದು ‘ಹೆಮ್ಮೆಯ ಕ್ಷಣ’. ವೃತ್ತಿಜೀವನಕ್ಕೆ ಬೆನ್ನೆಲುಬಾಗಿ ನಿಂತ ಬಿಸಿಸಿಐ, ಅವರ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ.

ಲಂಕಾದ ನಾಲ್ಕನೇ ಆಟಗಾರ

ಈ ಇಬ್ಬರೊಂದಿಗೆ ಶ್ರೀಲಂಕಾದ ಹಿರಿಯ ಬ್ಯಾಟರ್ ಅರವಿಂದ ಡಿ ಸಿಲ್ವಾ ಕೂಡ ಈ ಗೌರವಕ್ಕೆ ಭಾಜನರಾಗಿದ್ದು, ಅವರು ಈಗ ಮುತ್ತಯ್ಯ ಮುರಳೀಧರನ್, ಕುಮಾರ್ ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನೆ ನಂತರ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಶ್ರೀಲಂಕಾ ದೇಶದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.

1996 ರ ವಿಶ್ವಕಪ್ ಫೈನಲ್‌ನಲ್ಲಿ ಡಿಸಿಲ್ವಾ ಸಿಡಿಸಿದ ಶತಕ, ಶ್ರೀಲಂಕಾ ತಂಡ ವಿಶ್ವ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಡಿಸಿಲ್ವಾ ಅವರು ಲಂಕಾ ತಂಡದ ಪರ 93 ಟೆಸ್ಟ್‌ಗಳಲ್ಲಿ 42.97 ಸರಾಸರಿಯಲ್ಲಿ 6,361 ರನ್‌ಗಳನ್ನು ದಾಖಲಿಸುವುದರೊಂದಿಗೆ 29 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಹಾಗೆಯೇ 308 ಏಕದಿನ ಪಂದ್ಯಗಳಲ್ಲಿ ಅವರು 34.90 ರ ಸರಾಸರಿಯಲ್ಲಿ 9,284 ರನ್ ಮತ್ತು 106 ವಿಕೆಟ್​ಗಳನ್ನು ಪಡೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Mon, 13 November 23

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​