IND vs SA: ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಭಾರತಕ್ಕೆ ಆಘಾತ; ತಂಡದ ಆಲ್ರೌಂಡರ್ಗೆ ಕೊರೊನಾ ಸೋಂಕು
IND vs SA: ಭಾರತದ ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದರಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಏಕದಿನ ಸರಣಿಯಲ್ಲಿ ಆಡುವುದು ಅವರಿಗೆ ಕಷ್ಟಕರವಾದಂತಿದೆ .
ಭಾರತದ ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದರಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೂರು ಏಕದಿನ ಸರಣಿಯಲ್ಲಿ ಆಡುವುದು ಅವರಿಗೆ ಕಷ್ಟಕರವಾದಂತಿದೆ . ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ODI ಸರಣಿಯು ಜನವರಿ 19 ರಿಂದ ಪ್ರಾರಂಭವಾಗಲಿದೆ. ವಾಷಿಂಗ್ಟನ್ ಸುಂದರ್ ಭಾರತದ ODI ತಂಡದ ಉಳಿದ ಆಟಗಾರರೊಂದಿಗೆ ಕೇಪ್ ಟೌನ್‌ಗೆ ಹೋಗಬೇಕಿತ್ತು. ಆದರೆ ಈಗ ಅದು ಸುಲಭವಾಗಿ ಕಾಣುತ್ತಿಲ್ಲ. ಸದ್ಯ ಸುಂದರ್ ಮುಂಬೈನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿಂದ ಭಾರತ ಏಕದಿನ ತಂಡದ ಆಟಗಾರರು ದಕ್ಷಿಣ ಆಫ್ರಿಕಾಕ್ಕೆ ತೆರಳಬೇಕಿದೆ. ಈ ಆಟಗಾರರು ಜನವರಿ 12ರ ಬೆಳಗ್ಗೆ ಹೊರಡಲಿದ್ದಾರೆ.
ಸುಂದರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದು ಸುಮಾರು 10 ತಿಂಗಳುಗಳಾಗಿವೆ. ಅವರು ಕೊನೆಯ ಬಾರಿಗೆ ಮಾರ್ಚ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಆಡಿದ್ದರು. ಇದರ ನಂತರ, ಗಾಯದ ಕಾರಣ, ಅವರು ಕ್ರಿಕೆಟ್ ಕ್ಷೇತ್ರದಿಂದ ದೂರವಿದ್ದರು. ಗಾಯದ ಸಮಸ್ಯೆಯಿಂದ ಐಪಿಎಲ್‌ನಿಂದಲೂ ಹೊರಗುಳಿದಿದ್ದರು. ಸುಂದರ್ ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಗಾಗಿ ತಮಿಳುನಾಡು ತಂಡದಲ್ಲಿ ಸ್ಥಾನ ಪಡೆದರು. ಇಲ್ಲಿ ಅವರ ಸಾಧನೆ ಗಮನಾರ್ಹವಾಗಿತ್ತು. ಇದಾದ ಬಳಿಕ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡಲು ಟೀಂ ಇಂಡಿಯಾ ಆಯ್ಕೆಗಾರರು ನಿರ್ಧರಿಸಿದ್ದಾರೆ. ಆದರೆ ಮತ್ತೆ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದು ವಿಳಂಬವಾಗಬಹುದು ಎಂದು ತೋರುತ್ತದೆ.
ಸುಂದರ್ ಅವರ ಸ್ಥಾನಕ್ಕೆ ಬದಲಿ ಆಯ್ಕೆ ಆಗಿಲ್ಲ ಸುಂದರ್ ಬದಲಿ ಆಟಗಾರನನ್ನು ಬಿಸಿಸಿಐ ಇನ್ನೂ ಪ್ರಕಟಿಸಿಲ್ಲ. ಆದಾಗ್ಯೂ, ಸುಂದರ್ ತಂಡದೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ಹೋಗುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ. ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ನಾಯಕರಾಗಿರುತ್ತಾರೆ. ಈ ತಂಡದಲ್ಲಿ ಆರ್ ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್ ರೂಪದಲ್ಲಿ ಇಬ್ಬರು ಸ್ಪಿನ್ನರ್‌ಗಳಿದ್ದಾರೆ. ಸರಣಿಯ ಮೊದಲ ಪಂದ್ಯ ಜನವರಿ 19 ರಂದು ಪಾರ್ಲ್‌ನಲ್ಲಿ ನಡೆಯಲಿದೆ. ನಂತರ ಈ ನಗರದಲ್ಲಿ ಜನವರಿ 21 ರಂದು ಎರಡನೇ ಏಕದಿನ ಪಂದ್ಯ ಮತ್ತು ಜನವರಿ 23 ರಂದು ಕೇಪ್ ಟೌನ್‌ನಲ್ಲಿ ಕೊನೆಯ ಪಂದ್ಯ ನಡೆಯಲಿದೆ.
ಅಂತರಾಷ್ಟ್ರೀಯ ವೃತ್ತಿಜೀವನ ಹೀಗಿದೆ ಸುಂದರ್ ಭಾರತ ಪರ ಇದುವರೆಗೆ ನಾಲ್ಕು ಟೆಸ್ಟ್, ಒಂದು ಏಕದಿನ ಮತ್ತು 31 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 6 ವಿಕೆಟ್ ಮತ್ತು 265 ರನ್, ODIಗಳಲ್ಲಿ ಒಂದು ವಿಕೆಟ್ ಮತ್ತು T20I ನಲ್ಲಿ 25 ವಿಕೆಟ್‌ಗಳನ್ನು ಹೊಂದಿದ್ದಾರೆ. ಅವರು ಜನವರಿ 2021 ರಲ್ಲಿ ಆಸ್ಟ್ರೇಲಿಯಾ ಪ್ರವಾಸದಿಂದ ತಮ್ಮ ಟೆಸ್ಟ್ ಪಾದಾರ್ಪಣೆ ಮಾಡಿದರು. ಇಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲೇ ಅರ್ಧಶತಕ ಬಾರಿಸುವ ಮೂಲಕ ಭಾರತದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ನಂತರ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲೂ ಅವರು ಅದ್ಭುತ ಅರ್ಧಶತಕ ಗಳಿಸಿದರು. ODIಗಳ ಬಗ್ಗೆ ಮಾತನಾಡುವುದಾದರೆ, ಅವರು 2017 ರಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದರು ಮತ್ತು ನಂತರ ಅವರು ಈ ಸ್ವರೂಪದಲ್ಲಿ ಆಡಲಿಲ್ಲ. 2017ರಲ್ಲಿ ಟಿ20ಗೆ ಪದಾರ್ಪಣೆ ಮಾಡಿದ್ದರು.
Published On - 3:34 pm, Tue, 11 January 22