AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2024: ಆಸೀಸ್ ವಿರುದ್ಧ 257 ರನ್ ಚಚ್ಚಿದ ವಿಂಡೀಸ್​ಗೆ 37 ರನ್ ಜಯ..!

T20 World Cup 2024 warm-up: ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾವನ್ನು 35 ರನ್‌ಗಳಿಂದ ಸೋಲಿಸಿ, ಟೂರ್ನಿ ಆರಂಭದಲ್ಲೇ ಕಾಂಗರೂಗಳಿಗೆ ಸೋಲಿನ ಶಾಕ್ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಪರ ತಂಡದ ಬ್ಯಾಟ್ಸ್‌ಮನ್‌ಗಳು ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಹೀಗಾಗಿ ಆತಿಥೇಯ ವಿಂಡೀಸ್ 20 ಓವರ್​ಗಳಲ್ಲಿ 257 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೇವಲ 222 ರನ್ ಗಳಿಸಲಷ್ಟೇ ಶಕ್ತವಾಯಿತು.

T20 World Cup 2024: ಆಸೀಸ್ ವಿರುದ್ಧ 257 ರನ್ ಚಚ್ಚಿದ ವಿಂಡೀಸ್​ಗೆ 37 ರನ್ ಜಯ..!
ಆಸ್ಟ್ರೇಲಿಯಾ- ವೆಸ್ಟ್ ಇಂಡೀಸ್
ಪೃಥ್ವಿಶಂಕರ
|

Updated on: May 31, 2024 | 3:03 PM

Share

ಟಿ20 ವಿಶ್ವಕಪ್ (T20 World Cup 2024) ಆರಂಭವಾಗಲು ಕೇವಲ ಇನ್ನೊಂದೆ ದಿನ ಬಾಕಿ ಉಳಿದಿದೆ. ಅದರ ಹೊರತಾಗಿಯೂ ಈಗಾಗಲೇ ವಿಶ್ವಕಪ್ ಜ್ವರ ಏರಲು ಶುರುವಾಗಿದೆ. ಜೂನ್ 2 ರಿಂದ ಚುಟುಕು ಮಾದರಿಯ ವಿಶ್ವ ಸಮರ 20 ತಂಡಗಳ ನಡುವೆ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಎಲ್ಲಾ ತಂಡಗಳು ಸಿದ್ಧತೆಗಾಗಿ ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ. ಅದರ ಭಾಗವಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾವನ್ನು (West Indies vs Australia) 35 ರನ್‌ಗಳಿಂದ ಸೋಲಿಸಿ, ಟೂರ್ನಿ ಆರಂಭದಲ್ಲೇ ಕಾಂಗರೂಗಳಿಗೆ ಸೋಲಿನ ಶಾಕ್ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಪರ ತಂಡದ ಬ್ಯಾಟ್ಸ್‌ಮನ್‌ಗಳು ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಹೀಗಾಗಿ ಆತಿಥೇಯ ವಿಂಡೀಸ್ 20 ಓವರ್​ಗಳಲ್ಲಿ 257 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೇವಲ 222 ರನ್ ಗಳಿಸಲಷ್ಟೇ ಶಕ್ತವಾಯಿತು.

ಪೂರನ್- ಪೊವೆಲ್ ಸಿಡಿಲಬ್ಬರದ ಅರ್ಧಶತಕ

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 4 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಅಂತ್ಯಕ್ಕೆ 257 ರನ್ ಕಲೆಹಾಕಿತು. ತಂಡದ ಪರವಾಗಿ ನಿಕೋಲಸ್ ಪೂರನ್ ಮತ್ತು ರೋವ್ಮನ್ ಪೊವೆಲ್ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಬ್ಯಾಟ್ಸ್‌ಮನ್‌ಗಳಿಂದಲೇ ವೆಸ್ಟ್ ಇಂಡೀಸ್ ತಂಡ ದೊಡ್ಡ ಸ್ಕೋರ್ ಮಾಡುವಲ್ಲಿ ಯಶಸ್ವಿಯಾಯಿತು. ಪೂರನ್ 25 ಎಸೆತಗಳಲ್ಲಿ ಐದು ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 75 ರನ್ ಕಲೆಹಾಕಿದರೆ, ರೋವ್ಮನ್ ಪೊವೆಲ್ 52 ರನ್ ಕೊಡುಗೆ ನೀಡಿದರು. ಆಸ್ಟ್ರೇಲಿಯಾ ಪರ ಆಡಮ್ ಝಂಪಾ ಗರಿಷ್ಠ ಎರಡು ವಿಕೆಟ್ ಪಡೆದರು.

T20 World Cup: ರೋಹಿತ್, ಕೊಹ್ಲಿ ಅಲ್ಲ; ಟಿ20 ವಿಶ್ವಕಪ್​ನಲ್ಲಿ ಶತಕ ಸಿಡಿಸಿದ ಏಕೈಕ ಭಾರತೀಯ ಯಾರು ಗೊತ್ತಾ?

ಆಸೀಸ್ ಬ್ಯಾಟರ್​​ಗಳ ನೀರಸ ಪ್ರದರ್ಶನ

ವಿಂಡೀಸ್ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅನುಭವಿ ವಾರ್ನರ್ 15 ರನ್​​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಮತ್ತೊಬ್ಬ ಆರಂಭಿಕ ಆಸ್ಟನ್ ಆಗರ್ 28 ರನ್​ಗಳಿಗೆ ಬ್ಯಾಟ್ ಎತ್ತಿಟ್ಟರು. ತಂಡದ ನಾಯಕ ಮಿಚೆಲ್ ಮಾರ್ಷ್​ ತಮ್ಮ ಕಳಪೆ ಫಾರ್ಮ್​ ಅನ್ನು ಇಲ್ಲೂ ಮುಂದುವರೆಸಿ ಕೇವಲ 4 ರನ್​​ಗಳಿಗೆ ಸುಸ್ತಾದರು. ಹೀಗಾಗಿ ತಂಡ ಆರಂಭದಲ್ಲೇ ಆಘಾತ ಎದುರಿಸಿತು. ತಂಡದ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಇಂಗ್ಲಿಷ್ ಅತ್ಯಧಿಕ 55 ರನ್ ಗಳಿಸಿದರು. ಅವರನ್ನು ಹೊರತುಪಡಿಸಿ ಇತರ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಟಿಮ್ ಡೇವಿಡ್ 25 ರನ್, ಮ್ಯಾಥ್ಯೂ ವೇಡ್ 25 ರನ್ ಮತ್ತು ನಾಥನ್ ಎಲ್ಲಿಸ್ 39 ರನ್ ಕೊಡುಗೆ ನೀಡಿದರು. ಅಂತಿಮವಾಗಿ ಆಸ್ಟ್ರೇಲಿಯ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಲಷ್ಟೇ ಶಕ್ತವಾಗಿದ್ದು, ಅಭ್ಯಾಸ ಪಂದ್ಯದಲ್ಲಿ ತಂಡ 35 ರನ್‌ಗಳಿಂದ ಸೋಲನುಭವಿಸಬೇಕಾಯಿತು. ವೆಸ್ಟ್ ಇಂಡೀಸ್ ಪರ ಅಲ್ಜಾರಿ ಜೋಸೆಫ್ ಮತ್ತು ಗುಡಕೇಶ್ ಮೋತಿ ಗರಿಷ್ಠ 2 ವಿಕೆಟ್ ಪಡೆದರು.

ಉಭಯ ತಂಡಗಳ ಲೀಗ್ ಪಂದ್ಯ ಯಾವಾಗ?

ಪ್ರಸ್ತುತ ಅಭ್ಯಾಸ ಪಂದ್ಯದಲ್ಲಿ ಗೆಲ್ಲುವ ಮೂಲಕ ಶುಭಾರಂಭ ಮಾಡಿರುವ ಆತಿಥೇಯ ವಿಂಡೀಸ್ ಪಡೆ ಜೂನ್ 2 ರಂದು ತನ್ನ ಮೊದಲ ಲೀಗ್ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ವಿಂಡೀಸ್​ಗೆ ಕ್ರಿಕೆಟ್ ಶಿಶು ಪಪುವಾ ನ್ಯೂ ಗಿನಿಯಾ ಎದುರಾಳಿಯಾಗಲಿದೆ. ಆಸ್ಟ್ರೇಲಿಯಾ ತಂಡ ಜೂನ್ 6 ರಂದು ತನ್ನ ಮೊದಲ ಲೀಗ್ ಪಂದ್ಯವನ್ನು ಆಡಲಿದ್ದು, ಈ ಪಂದ್ಯದಲ್ಲಿ ಒಮಾನ್ ತಂಡವನ್ನು ಎದುರಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ