AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಯುವಕನೊಂದಿಗೆ ಅನ್ಯಕೋಮಿನ ಯುವತಿ ಓಡಾಟ; ಜೋಡಿಗೆ ಕಿರುಕುಳ ನೀಡಿದ ಅಪ್ರಾಪ್ತರು ಪೊಲೀಸ್ ವಶಕ್ಕೆ

ಚಿಕ್ಕಬಳ್ಳಾಪುರದಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಅನ್ಯಕೋಮಿನ ಅಪ್ರಾಪ್ತ ಬಾಲಕರು ಹಿಂದೂ ಹುಡುಗ ಮತ್ತು ಯುವತಿಗೆ ರಸ್ತೆಯಲ್ಲಿ ಕಿರುಕುಳ ನೀಡಿದ್ದಾರೆ. ಇಬ್ಬರು ಸ್ನೇಹಿತರೆಂದು ಹೇಳಿದರೂ ಬಿಟ್ಟಿಲ್ಲ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಅಪ್ರಾಪ್ತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇಂತಹ ಘಟನೆಗಳನ್ನು ತಡೆಯಲು ಕಾನೂನು ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಹಿಂದೂ ಯುವಕನೊಂದಿಗೆ ಅನ್ಯಕೋಮಿನ ಯುವತಿ ಓಡಾಟ; ಜೋಡಿಗೆ ಕಿರುಕುಳ ನೀಡಿದ ಅಪ್ರಾಪ್ತರು ಪೊಲೀಸ್ ವಶಕ್ಕೆ
ನೈತಿಕ ಪೊಲೀಸ್​ಗಿರಿ ಮಾಡಿದ್ದಕ್ಕೆ ಬಾಲಕರು ಅಂದರ್
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Feb 03, 2026 | 12:06 PM

Share

ಚಿಕ್ಕಬಳ್ಳಾಪುರ, ಫೆಬ್ರುವರಿ 03: ನಗರದಲ್ಲಿ (Chikkaballapur) ಅನ್ಯಕೋಮಿನ ಅಪ್ರಾಪ್ತ ಬಾಲಕರಿಂದ ನಡೆದ ನೈತಿಕ ಪೊಲೀಸ್‌ಗಿರಿ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟುಹಾಕಿದೆ. ಸ್ಥಳೀಯರು ಹೇಳಿರುವಂತೆ, ಹಿಂದೂ ಹುಡುಗನೊಂದಿಗೆ ಅನ್ಯಕೋಮಿನ ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರ ವೀಡಿಯೋ ಮಾಡಿದ್ದ ಪುಂಡರು, ಅವರನ್ನು ಅಡ್ಡಗಟ್ಟಿ ಕಿರುಕುಳ ನೀಡಿದ್ದಾರೆ.

ನಾವಿಬ್ಬರೂ ಸ್ನೇಹಿತರೆಂದರೂ ಬಿಡದ ಪುಂಡರು

ಶಿಡ್ಲಘಟ್ಟ ಮೂಲದ ವಿದ್ಯಾರ್ಥಿಗಳಿಬ್ಬರು ಪರಸ್ಪರ ಸ್ನೇಹಿತರಾಗಿದ್ದು, ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಇಬ್ಬರನ್ನು ಅಡ್ಡಗಟ್ಟಿದ ಅಪ್ರಾಪ್ತರು ಸ್ನೇಹಿತರು ಒಟ್ಟಿಗಿದ್ದ ವೀಡಿಯೋ ತೋರಿಸಿ ಕಿರುಕುಳ ನೀಡಲು ಮುಂದಾಗಿದ್ದರು. ಈ ವೇಳೆ ತಾವಿಬ್ಬರೂ ಒಂದೇ ಊರಿನವರೆಂದೂ, ಸ್ನೇಹಿತರೆಂದೂ ಯುವಕ ಮತ್ತು ಯುವತಿ ಹೇಳಿಕೊಂಡಿದ್ದಾರೆ. ಆದರೂ ಸುಮ್ಮನಾಗದ ಪುಂಡರು ನೈತಿಕ ಪೊಲೀಸ್‌ಗಿರಿ ತೋರಿಸಿದ್ದಾರೆ.

ನೈತಿಕ ಪೊಲೀಸ್​ಗಿರಿ ಮಾಡಿದ್ದಕ್ಕೆ ಬಾಲಕರು ಅಂದರ್

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಚಿಕ್ಕಬಳ್ಳಾಪುರ ನಗರ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದು, ಕಿರುಕುಳ ನೀಡಿದ್ದ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ನಗರ ನಿವಾಸಿಗಳು ಈ ರೀತಿಯ ನೈತಿಕ ಪೊಲೀಸ್‌ಗಿರಿಯಿಂದಾಗುವ ತೊಂದರೆಯನ್ನು ತಡೆಯಲು ಕಾನೂನು ಕ್ರಮ ವಹಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ