AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆರಿಬಿಯನ್ನರ ಕಮಾಲ್: 9.19 ಎಸೆತಗಳಲ್ಲೇ ವಿಶ್ವ ದಾಖಲೆ!

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಇಂಗ್ಲೆಂಡ್-ವೆಸ್ಟ್ ಇಂಡೀಸ್ ತಂಡಗಳ ಹೆಸರಿನಲ್ಲಿದ್ದರೂ, ಅತ್ಯಂತ ಕಡಿಮೆ ಎಸೆತಗಳಲ್ಲಿ ಸಿಕ್ಸರ್ ಚಚ್ಚಿದ ಹೊಸ ವಿಶ್ವ ದಾಖಲೆಯನ್ನು ವೆಸ್ಟ್ ಇಂಡೀಸ್- ಭಾರತ ಬರೆದಿದೆ. ಅದು ಕೂಡ ಒಂದೇ ಸರಣಿಯಲ್ಲಿ 105 ಸಿಕ್ಸರ್​ಗಳನ್ನು ಚಚ್ಚುವ ಮೂಲಕ ಎಂಬುದು ವಿಶೇಷ.

ಕೆರಿಬಿಯನ್ನರ ಕಮಾಲ್: 9.19 ಎಸೆತಗಳಲ್ಲೇ ವಿಶ್ವ ದಾಖಲೆ!
West Indies Image Credit source: GettyImages
ಝಾಹಿರ್ ಯೂಸುಫ್
|

Updated on:Oct 18, 2026 | 8:25 AM

Share

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಈಗ ಸಂಪೂರ್ಣವಾಗಿ ಬ್ಯಾಟರ್‌ಗಳ ಅಬ್ಬರಕ್ಕೆ ಸಾಕ್ಷಿಯಾಗುತ್ತಿದೆ. ಮೈದಾನ ಸಣ್ಣದಿರಲಿ ಅಥವಾ ದೊಡ್ಡದಿರಲಿ, ಚೆಂಡನ್ನು ಗಡಿ ದಾಟಿಸುವುದೇ ಇಂದಿನ ಬ್ಯಾಟರ್‌ಗಳ ಮುಖ್ಯ ಗುರಿಯಾಗಿದೆ. ಇದಕ್ಕೆ ಇತ್ತೀಚಿನ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟಿ20 ಸರಣಿಯೇ ಅತ್ಯುತ್ತಮ ಸಾಕ್ಷಿ. ಈ ಸರಣಿಯಲ್ಲಿ ಇಂಡೊ-ವಿಂಡೀಸ್ ಬ್ಯಾಟರ್‌ಗಳು ಸಿಡಿಸಿದ ಸಿಕ್ಸರ್‌ಗಳ ಸಂಖ್ಯೆ ಬರೋಬ್ಬರಿ 105 ಎಂದರೆ ನೀವು ನಂಬಲೇಬೇಕು! ಇದಾಗ್ಯೂ ಇದು ವಿಶ್ವ ದಾಖಲೆಯಲ್ಲ. ಆದರೆ, ಈ ಸರಣಿಯ ಐದನೇ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗದೆ ಹೋಗಿದ್ದರೆ, ವೆಸ್ಟ್ ಇಂಡೀಸ್ ತಂಡ ಖಂಡಿತವಾಗಿಯೂ ಹೊಸ ವಿಶ್ವ ದಾಖಲೆ ಬರೆಯುತ್ತಿತ್ತು ಎಂಬುದಕ್ಕೆ ಅವರು ಕೇವಲ ನಾಲ್ಕು ಪಂದ್ಯಗಳಲ್ಲಿ ಬಾರಿಸಿದ ಸಿಕ್ಸರ್‌ಗಳೇ ಸಾಕ್ಷಿ.

ಟಿ20 ಸರಣಿಯೊಂದರಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಐತಿಹಾಸಿಕ ದಾಖಲೆ ಇಂಗ್ಲೆಂಡ್-ವೆಸ್ಟ್ ಇಂಡೀಸ್ ತಂಡಗಳ ಹೆಸರಿನಲ್ಲಿದೆ. ಉಭಯ ತಂಡಗಳು ಸೇರಿ ಒಂದೇ ಸರಣಿಯಲ್ಲಿ ಬರೋಬ್ಬರಿ 120 ಸಿಕ್ಸರ್ ಸಿಡಿಸಿ ಈ ಭರ್ಜರಿ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಮುರಿಯುವ ಅತ್ಯಂತ ಸನಿಹಕ್ಕೆ ವೆಸ್ಟ್ ಇಂಡೀಸ್ ತಲುಪಿದ್ದರೂ, ಕೊನೆಯ ಪಂದ್ಯದ ವೇಳೆ ಸುರಿದ ಮಳೆ ಕೆರಿಬಿಯನ್ನರ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು. ಪರಿಣಾಮವಾಗಿ, ವೆಸ್ಟ್ ಇಂಡೀಸ್-ಭಾರತ ತಂಡಗಳು ಈ ಸಾರ್ವಕಾಲಿಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಇದನ್ನೂ ಓದಿ: ವಿಂಡೀಸ್ ಪಡೆಯ ಕನಸು ನುಚ್ಚುನೂರು: 24 ವರ್ಷಗಳ ಕಾಯುವಿಕೆ ಮುಂದುವರಿಕೆ!

ಇದಾಗ್ಯೂ, ಟಿ20 ಸರಣಿಯೊಂದರಲ್ಲಿ ಅತ್ಯಂತ ಕಡಿಮೆ ಎಸೆತಗಳನ್ನು ಎದುರಿಸಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವ ದಾಖಲೆಯನ್ನು ವೆಸ್ಟ್ ಇಂಡೀಸ್-ಭಾರತ ತನ್ನದಾಗಿಸಿಕೊಂಡಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಈ ಸರಣಿಯಲ್ಲಿ ಉಭಯ ತಂಡಗಳ ಬ್ಯಾಟರ್‌ಗಳು ಪ್ರತಿ 9.19 ಎಸೆತಗಳಿಗೆ ಒಂದರಂತೆ ಬರೋಬ್ಬರಿ 105 ಸಿಕ್ಸರ್ ಚಚ್ಚಿದ್ದಾರೆ. ಎಸೆತಗಳ ಸರಾಸರಿ ಲೆಕ್ಕಾಚಾರದಲ್ಲಿ ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಇಷ್ಟು ವೇಗವಾಗಿ ಯಾವುದೇ ತಂಡಗಳು ಸಿಕ್ಸರ್ ಸುರಿಮಳೆಗೈದ ಉದಾಹರಣೆಯಿಲ್ಲ. ಇದು ಬಾಲ್ ಲೆಕ್ಕಾಚಾರದಲ್ಲಿ ಸಾರ್ವಕಾಲಿಕ ಹೊಸ ವಿಶ್ವ ದಾಖಲೆಯಾಗಿದೆ.

ಅಂದರೆ, ಇಂಗ್ಲೆಂಡ್-ವೆಸ್ಟ್ ಇಂಡೀಸ್ ತಂಡಗಳು ಒಂದೇ ಸರಣಿಯಲ್ಲಿ 120 ಸಿಕ್ಸರ್ ಬಾರಿಸಲು ಸರಾಸರಿ 9.63 ಎಸೆತಗಳನ್ನು ತೆಗೆದುಕೊಂಡಿತ್ತು. ಆದರೆ, ಭಾರತ-ವೆಸ್ಟ್ಇಂಡೀಸ್ ದಾಂಡಿಗರು ಕೇವಲ 9.19 ಎಸೆತಗಳಿಗೆ ಒಂದರಂತೆ ಬರೋಬ್ಬರಿ 105 ಸಿಕ್ಸರ್ ಚಚ್ಚುವ ಮೂಲಕ ಅತ್ಯಂತ ವೇಗವಾಗಿ ಸಿಕ್ಸರ್ ಸಿಡಿಸಿದ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ವಿಶೇಷವೆಂದರೆ, ಈ ಸಿಕ್ಸರ್‌ಗಳ ವಿಶ್ವ ದಾಖಲೆಯಲ್ಲಿ ಕೆರಿಬಿಯನ್ ಪಡೆಯ ಕೊಡುಗೆಯೇ ಸಿಂಹಪಾಲು. ಏಕೆಂದರೆ, ಆತಿಥೇಯ ಟೀಮ್ ಇಂಡಿಯಾ 5 ಇನ್ನಿಂಗ್ಸ್‌ಗಳಲ್ಲಿ ಒಟ್ಟು 48 ಸಿಕ್ಸರ್‌ಗಳನ್ನು ಬಾರಿಸಿದರೆ, ವಿಂಡೀಸ್ ದಾಂಡಿಗರು ಕೇವಲ 4 ಇನ್ನಿಂಗ್ಸ್‌ಗಳಲ್ಲೇ ಬರೋಬ್ಬರಿ 57 ಸಿಕ್ಸರ್‌ಗಳನ್ನು ಚಚ್ಚಿ ಅಬ್ಬರಿಸಿದ್ದರು. ಈ ಮೂಲಕ ಒಟ್ಟಾರೆ 105 ಸಿಕ್ಸರ್‌ಗಳೊಂದಿಗೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗುವಲ್ಲಿ ವೆಸ್ಟ್ ಇಂಡೀಸ್ ತಂಡವೇ ಪ್ರಮುಖ ಪಾತ್ರ ವಹಿಸಿದೆ.

ದ್ವಿಪಕ್ಷೀಯ ಸರಣಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪಟ್ಟಿ (ಫುಲ್ ಮೆಂಬರ್)

ಒಟ್ಟು ಸಿಕ್ಸರ್‌ಗಳು ತಂಡ ಮತ್ತು ಸರಣಿ ವಿವರ ಪ್ರತಿ ಸಿಕ್ಸರ್‌ಗೆ ತೆಗೆದುಕೊಂಡ ಎಸೆತಗಳು 
120 ಇಂಗ್ಲೆಂಡ್ (ವೆಸ್ಟ್ ಇಂಡೀಸ್ ಪ್ರವಾಸ, 2023/24) 9.63
117 ಆಸ್ಟ್ರೇಲಿಯಾ (ವೆಸ್ಟ್ ಇಂಡೀಸ್ ಪ್ರವಾಸ, 2025) 9.61
116 ನ್ಯೂಝಿಲೆಂಡ್ (ಭಾರತ ಪ್ರವಾಸ, 2026) 9.52
105 ವೆಸ್ಟ್ ಇಂಡೀಸ್ (ಭಾರತ ಪ್ರವಾಸ, 2026) 9.19
96 ವೆಸ್ಟ್ ಇಂಡೀಸ್ (ಭಾರತ ಪ್ರವಾಸ, 2019) 14.92
96 ಇಂಗ್ಲೆಂಡ್ (ವೆಸ್ಟ್ ಇಂಡೀಸ್ ಪ್ರವಾಸ, 2021/22) 12.34

ಒಟ್ಟಾರೆಯಾಗಿ ಹೇಳುವುದಾದರೆ, ಇಂದಿನ ಟಿ20 ಕ್ರಿಕೆಟ್‌ ಸಾಗುತ್ತಿರುವ ವೇಗವನ್ನು ನೋಡಿದರೆ ಬೌಲರ್‌ಗಳಿಗೆ ಉಳಿಗಾಲವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಂಗ್ಲೆಂಡ್‌-ವೆಸ್ಟ್ ಇಂಡೀಸ್​ನ ಗರಿಷ್ಠ 120 ಸಿಕ್ಸರ್‌ಗಳ ದಾಖಲೆಯಾಗಲಿ ಅಥವಾ ವೆಸ್ಟ್ ಇಂಡೀಸ್‌-ಭಾರತದ ಪ್ರತಿ 9.19 ಎಸೆತಗಳ ಭೀಕರ ಸರಾಸರಿಯಾಗಲಿ, ಆಧುನಿಕ ಕ್ರಿಕೆಟ್‌ನಲ್ಲಿ ಪವರ್-ಹಿಟ್ಟಿಂಗ್ ಯಾವ ಮಟ್ಟಕ್ಕೆ ಬೆಳೆದಿದೆ ಎಂಬುದಕ್ಕೆ ಕನ್ನಡಿ ಹಿಡಿದಿವೆ. ಮೈದಾನದ ಗಾತ್ರ ಎಷ್ಟೇ ಇದ್ದರೂ ಚೆಂಡನ್ನು ಗ್ಯಾಲರಿಗೆ ಅಟ್ಟುವ ಇಂತಹ ಬ್ಯಾಟಿಂಗ್ ತಂತ್ರಗಾರಿಕೆ ಮುಂದುವರಿದರೆ, ಮುಂಬರುವ ಸರಣಿಗಳಲ್ಲಿ ಇವೆಲ್ಲಾ ದಾಖಲೆಗಳು ಧೂಳೀಪಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ‘ಸಿಕ್ಸರ್ ಸುನಾಮಿ’ಯನ್ನು ಬೌಲರ್‌ಗಳು ಹೇಗೆ ನಿಯಂತ್ರಿಸುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ!

Published On - 8:08 am, Sun, 18 October 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ