
T20 World Cup 2026: ಟಿ20 ವಿಶ್ವಕಪ್ನ ಸೂಪರ್-8 ಸುತ್ತಿನ ಮೊದಲ ಪಂದ್ಯವೇ ಮಳೆಗೆ ಆಹುತಿಯಾಗಿದೆ. ಕೊಲಂಬೊದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯವನ್ನು ರದ್ದು ಮಾಡಲಾಗಿದೆ. ಇನ್ನು ಪಂದ್ಯ ರದ್ದಾಗಿರುವ ಕಾರಣ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗಿದೆ.
ಇತ್ತ ಉಭಯ ತಂಡಗಳು ಒಂದೊಂದು ಅಂಕ ಪಡೆದಿರುವ ಕಾರಣ ಮುಂದಿನ ಎರಡು ಮ್ಯಾಚ್ಗಳಲ್ಲಿ ಗೆಲ್ಲುವ ಮೂಲಕ ಸೆಮಿಫೈನಲ್ಗೇರಬಹುದು. ಒಂದು ವೇಳೆ ಗ್ರೂಪ್ ಮುಂದಿನ ಪಂದ್ಯಗಳು ಕೂಡ ಮಳೆಗೆ ಆಹುತಿಯಾಗಿ ಎಲ್ಲಾ ತಂಡಗಳು ಸಮವಾದ ಅಂಕಳನ್ನು ಪಡೆದರೆ ಯಾರಿಗೆ ಚಾನ್ಸ್ ಎಂಬ ಪ್ರಶ್ನೆ ಮೂಡುವುದು ಸಹಜ.
ಈ ಪ್ರಶ್ನೆಗೆ ಸಾಮಾನ್ಯವಾಗಿ ಸಿಗುವ ಉತ್ತರ ನೆಟ್ ರನ್ ರೇಟ್. ಅಂದರೆ ಅಂಕ ಪಟ್ಟಿಯಲ್ಲಿ ಎರಡಕ್ಕಿಂತ ಹೆಚ್ಚಿನ ತಂಡಗಳು ಸಮನಾದ ಅಂಕಗಳನ್ನು ಪಡೆದುಕೊಂಡಿದ್ದರೆ ಯಾವ ತಂಡ ಹೆಚ್ಚಿನ ನೆಟ್ ರನ್ ರೇಟ್ ಹೊಂದಿರುತ್ತವೆಯೋ ಆ ತಂಡವು ಮುಂದಿನ ಹಂತಕ್ಕೇರಲಿದೆ. ಒಂದು ವೇಳೆ ಅಂಕಗಳೊಂದಿಗೆ ನೆಟ್ ರನ್ ರೇಟ್ ಕೂಡ ಸಮವಾಗಿದ್ದರೆ? ಈ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ…
ಅಂದರೆ ಐಸಿಸಿ ಟೂರ್ನಿಗಳಲ್ಲಿ ಪಾಯಿಂಟ್ಸ್, ಗೆಲುವು, ನೆಟ್ ರನ್ ರೇಟ್, ಹೆಡ್ ಟು ಹೆಡ್ ಎಲ್ಲವೂ ಸಮವಾಗಿದ್ದರೂ ತಂಡಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲು ಕೊನೆಗೆ ಐಸಿಸಿ ತಂಡಗಳ ರ್ಯಾಂಕಿಂಗ್ ಅನ್ನು ಬಳಸಲಾಗುತ್ತದೆ. ಹೀಗಾಗಿ ಪ್ರಸ್ತುತ ಟೂರ್ನಿಯಲ್ಲಿ ತಂಡಗಳ ಅಂಕಗಳು, ಗೆಲುವು, ನೆಟ್ ರನ್ ರೇಟ್ ಎಲ್ಲವೂ ಸಮವಾದರೂ ಸೂಪರ್-8 ಸುತ್ತಿನಿಂದ 4 ತಂಡಗಳು ಮುಂದಿನ ಹಂತಕ್ಕೇರುವುದು ಖಚಿತ.