
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮೊದಲ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪಿನ ಬಗ್ಗೆ ಚರ್ಚೆಗಳು ಮುಂದುವರೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ವಿರುದ್ಧ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಪರ ಹೆನ್ರಿಕ್ ಕ್ಲಾಸೆನ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಕ್ಲಾಸೆನ್ ಪಂದ್ಯದ 14ನೇ ಓವರ್ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದರು.
ರೊಮೊರಿಯೊ ಶೆಫರ್ಡ್ ಎಸೆದ 14ನೇ ಓವರ್ನ ಮೊದಲ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಹೊಡೆತ ಬಾರಿಸಿದ್ದರು. ಚೆಂಡು ಇನ್ನೇನು ಬೌಂಡರಿ ಲೈನ್ ದಾಟಲಿದೆ ಅನ್ನುವಷ್ಟರಲ್ಲಿ ಫಿಲ್ ಸಾಲ್ಟ್ ಅದ್ಭುತವಾಗಿ ಚೆಂಡನ್ನು ಹಿಡಿದರು. ಆದರೆ, ಚೆಂಡನ್ನು ಹಿಡಿಯುವಾಗ ಸಾಲ್ಟ್ನ ಕಾಲು ಅಥವಾ ಶರೀರ ಬೌಂಡರಿ ಕುಶನ್ (Rope) ಗೆ ತಗುಲಿರಬಹುದು ಎಂಬ ಸಂಶಯವಿತ್ತು.
ಕ್ಯಾಚ್ ಮೇಲೆ ಡೌಟ್ ಇದ್ದ ಕಾರಣ ಆನ್-ಫೀಲ್ಡ್ ಅಂಪೈರ್ ಈ ನಿರ್ಧಾರವನ್ನು ಮೂರನೇ ಅಂಪೈರ್ ರೋಹನ್ ಪಂಡಿತ್ ಅವರಿಗೆ ವಹಿಸಿದರು. ಮರುಪರಿಶೀಲನೆಯ ನಂತರ ಟಿವಿ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಇತ್ತ ಕ್ಯಾಚ್ ಮೇಲೆ ಸಂಶಯಗಳಿದ್ದರೂ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಲು ಇದುವೇ ಮುಖ್ಯ ಕಾರಣ. ಆ ಕಾರಣಗಳೆಂದರೆ…
ಇತ್ತ ಮೂರನೇ ಅಂಪೈರ್ನ ಈ ತೀರ್ಪಿನಿಂದ ಕ್ಲಾಸೆನ್ ತುಂಬಾ ಅಸಮಾಧಾನಗೊಂಡರು. ಅಲ್ಲದೆ ಮೈದಾನದಿಂದ ಹೊರಹೋಗುವಾಗ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿದರು.
ಇದನ್ನೂ ಓದಿ: Virat Kohli: ಒಂದೇ ಪಂದ್ಯದಲ್ಲಿ ಚೇಸ್ ಮಾಸ್ಟರ್ ಹೆಸರಿಗೆ 10 ದಾಖಲೆಗಳು ಸೇರ್ಪಡೆ
ಆದರೆ ಇಂತಹ ಸಂಶಯಾಸ್ಪದ ಕ್ಯಾಚ್ಗಳ ವೇಳೆ ಮೂರನೇ ಅಂಪೈರ್ ತೀರ್ಮಾಣವೇ ಅಂತಿಮ ನಿರ್ಮಾಣವಾಗಿರುತ್ತದೆ. ಅಂದರೆ ಬೌಂಡರಿ ಲೈನ್‌ಗೆ ಫೀಲ್ಡರ್ನ ದೇಹದ ಭಾಗದ ತಾಗಿದೆ ಎಂದು ಸಾಬೀತುಪಡಿಸಲು ಸಾಧ್ಯವಾಗದೇ ಇದ್ದರೆ, ಅದನ್ನು ಕ್ಯಾಚ್ ಔಟ್ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಹೆನ್ರಿಕ್ ಕ್ಲಾಸೆನ್ ಔಟ್ ಎಂದು ಮೂರನೇ ಅಂಪೈರ್ ತೀರ್ಪು ನೀಡಿದ್ದಾರೆ.