INDW vs UAEW: ಇಂದು ಭಾರತ vs ಯುಎಇ ಪಂದ್ಯ: ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ

Womens Asia Cup T20, 2024: ಏಷ್ಯಾಕಪ್​ನ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿರುವ ಭಾರತ ತಂಡವು ತನ್ನ 2ನೇ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ ಸೆಮಿಫೈನಲ್ ಆಡುವುದು ಖಚಿತವಾಗಲಿದೆ.

INDW vs UAEW: ಇಂದು ಭಾರತ vs ಯುಎಇ ಪಂದ್ಯ: ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ
UAE vs IND
Follow us
ಝಾಹಿರ್ ಯೂಸುಫ್
|

Updated on: Jul 21, 2024 | 7:21 AM

ಮಹಿಳಾ ಏಷ್ಯಾಕಪ್​ ಟಿ20 ಟೂರ್ನಿಯ 5ನೇ ಪಂದ್ಯದಲ್ಲಿ ಭಾರತ ಮತ್ತು ಯುಎಇ ತಂಡಗಳು ಮುಖಾಮುಖಿಯಾಗಲಿದೆ. ದಂಬುಲ್ಲಾದ ರಂಗಿರಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡವು ಗೆದ್ದರೆ ಸೆಮಿಫೈನಲ್​ಗೆ ಎಂಟ್ರಿ ಕೊಡಲಿದೆ. ಏಕೆಂದರೆ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಮಹಿಳಾ ತಂಡದ ವಿರುದ್ಧ ಭಾರತೀಯ ಮಹಿಳೆಯರು ಭರ್ಜರಿ ಜಯ ಸಾಧಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.2 ಓವರ್​ಗಳಲ್ಲಿ 108 ರನ್ ಬಾರಿಸಿ ಆಲೌಟ್ ಆಗಿದ್ದರು. ಈ ಗುರಿಯನ್ನು ಬೆನ್ನತ್ತಿದ ಭಾರತ 14.1 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 109 ರನ್​ ಬಾರಿಸಿ ಅಮೋಘ ಗೆಲುವು ದಾಖಲಿಸಿತು.

ಈ ಗೆಲುವಿನೊಂದಿಗೆ ಭಾರತ ತಂಡವು ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಅಲ್ಲದೆ +2.294 ನೆಟ್​ ರನ್ ರೇಟ್ ಹೊಂದಿರುವ ಭಾರತ ತಂಡವು ಯುಎಇ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದರೆ ಸೆಮಿಫೈನಲ್ ಹಂತಕ್ಕೇರುವುದು ಖಚಿತ. ಈ ಪಂದ್ಯದ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಎಷ್ಟು ಗಂಟೆಗೆ ಪಂದ್ಯ ಶುರು?

ಭಾರತ ಮತ್ತು ಯುಎಇ ನಡುವಣ ಪಂದ್ಯದ ಟಾಸ್ ಪ್ರಕ್ರಿಯೆಯು ಮಧ್ಯಾಹ್ನ 1.30 ಕ್ಕೆ ನಡೆಯಲಿದ್ದು, ಪಂದ್ಯವು 2 PM ಗಂಟೆಯಿಂದ ಶುರುವಾಗಲಿದೆ.

ಯಾವ ಚಾನೆಲ್​ನಲ್ಲಿ ವೀಕ್ಷಿಸಬಹುದು?

ಈ ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್​ ನೆಟ್​ವರ್ಕ್​ನ ಚಾನೆಲ್​ಗಳಲ್ಲಿ ಇರಲಿದೆ. ಹಾಗೆಯೇ ಡಿಸ್ನಿ ಹಾಟ್ ಸ್ಟಾರ್ ಆ್ಯಪ್​ ಮೂಲಕ ಕೂಡ ಈ ಪಂದ್ಯವನ್ನು ಲೈವ್ ವೀಕ್ಷಿಸಬಹುದು.

ಉಭಯ ತಂಡಗಳು:

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಸಜನಾ ಸಜೀವನ್.

ಇದನ್ನೂ ಓದಿ: Asia Cup 2024: ಮಹಿಳಾ ಏಷ್ಯಾಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಯುಎಇ ತಂಡ: ಇಶಾ ರೋಹಿತ್ ಓಜಾ (ನಾಯಕಿ), ಕವಿಶಾ ಕುಮಾರಿ, ರಿತಿಕಾ ರಜಿತ್, ಸಮೈರಾ ಧರ್ಣಿಧರ್ಕಾ, ಲಾವಣ್ಯ ಕೇನಿ, ಎಮಿಲಿ ಥಾಮಸ್, ಹೀನಾ ಹರೀಶ್ ಹೊಚ್ಚಂದಾನಿ, ಮೆಹಕ್ ಠಾಕೂರ್, ಇಂಧುಜಾ ನಂದಕುಮಾರ್, ರಿನಿತಾ ರಜಿತ್, ಖುಷಿ ಮೋಹನ್ ಶರ್ಮಾ, ರಿಷಿತಾ ರಜಿತ್, ಸುರಕ್ಷಾ ಕೊಟ್ಟೆ ಸತೀಶ್, ವೈಷ್ಣವೆ ಮಹೇಶ್.