
ಭಾರತ ವಿರುದ್ಧದ ನೆದರ್ಲೆಂಡ್ಸ್ ಮತ್ತು ಭಾರತ vs ದಕ್ಷಿಣ ಆಫ್ರಿಕಾದ ಐಸಿಸಿ ಏಕದಿನ ವಿಶ್ವಕಪ್ 2023 (ODI World Cup 2023) ಪಂದ್ಯದ ಟಿಕೆಟ್‌ಗಳು ಇಂದಿನಿಂದ ಮಾರಾಟವಾಗಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾವು ನವೆಂಬರ್ 5 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ನಂತರ, ನವೆಂಬರ್ 12 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಎರಡೂ ಪಂದ್ಯಗಳ ಟಿಕೆಟ್ ಇಂದು ಮಾರಾಟ ಕಾಣಲಿದೆ.
ಟಿಕೆಟ್ ಮಾರಾಟವು ರಾತ್ರಿ 8 ಗಂಟೆಗೆ ತೆರೆಯುತ್ತದೆ. ಅಭಿಮಾನಿಗಳು tickets.cricketworldcup.com ಮತ್ತು BookMyShow ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಈ ಬಾರಿ ಯಾವುದೇ ಇ-ಟಿಕೆಟ್‌ಗಳು ಇರುವುದಿಲ್ಲ. ಕಳೆದ ಐಪಿಎಲ್ನಲ್ಲಿ ಇ-ಟಿಕೆಟ್ ಮಾರಾಟದ ವೇಳೆ ಕಾಲ್ತುಳಿತ ಸಂಭವಿಸಿದ ಕಾರಣ ಬಿಸಿಸಿಐ ಈ ಅವಕಾಶ ಕಲ್ಪಿಸಿಲ್ಲ. ಅಭಿಮಾನಿಗಳು ತಮ್ಮ ಟಿಕೆಟ್‌ಗಳನ್ನು ಕೊರಿಯರ್ ಮೂಲಕ ಪಡೆಯಬಹುದು ಅಥವಾ ಆಯಾ ಕ್ರೀಡಾಂಗಣದಿಂದ ಬಾಕ್ಸ್ ಆಫೀಸ್ ಕೌಂಟರ್‌ಗಳಲ್ಲಿ ಸಂಗ್ರಹಿಸಬಹುದು.
ಹೈವೋಲ್ಟೇಜ್ ಕದನಕ್ಕೂ ಮುನ್ನ ಪಾಕ್ ಬೌಲರ್ಗಳ ಜೊತೆ ಸಮಯ ಕಳೆದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ
ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಲಿದೆ. ಭಾರತ ಒಟ್ಟು ಒಂಬತ್ತು ಮೈದಾನಗಳಲ್ಲಿ ವಿಶ್ವಕಪ್ ಆಡಲಿದೆ. ಚೆನ್ನೈ, ಪುಣೆ, ಧರ್ಮಶಾಲಾ, ಮುಂಬೈ, ಲಕ್ನೋ ಮತ್ತು ದೆಹಲಿಯಲ್ಲಿ ಭಾರತದ ಪಂದ್ಯಗಳ ಟಿಕೆಟ್ ಮಾರಾಟವು ಈಗಾಗಲೇ ಮಾರಾಟವಾಗಿದೆ.
ಏಕದಿನ ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಲು ಸೆಪ್ಟೆಂಬರ್ 5 ಕೊನೆಯ ದಿನಾಂಕವಾಗಿದೆ. ಹೀಗಾಗಿ ಹೆಚ್ಚಿನ ತಂಡಗಳು ಈಗಾಗಲೇ ತಂಡವನ್ನು ಹೆಸರಿಸಿದೆ. ಆದರೆ, ಬಿಸಿಸಿಐ ಮಾತ್ರ ಟೀಮ್ ಇಂಡಿಯಾವನ್ನು ಇನ್ನೂ ಆಯ್ಕೆ ಮಾಡಿಲ್ಲ. ಇದೀಗ ಬಂದಿರುವ ಮಾಹಿತಿಯ ಪ್ರಕಾರ, 2023ರ ಏಕದಿನ ವಿಶ್ವಕಪ್‌ಗೆ ಭಾರತ ತಂಡ ಮುಂದಿನ ವಾರ ಪ್ರಕಟವಾಗಲಿದೆ ಎಂದು ಹೇಳಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯು ಸೆಪ್ಟೆಂಬರ್ 5 ರಂದು ಸಭೆ ಕರೆದು ವಿಶ್ವಕಪ್ 2023 ಕ್ಕಾಗಿ ಭಾರತ ತಂಡವನ್ನು ಆಯ್ಕೆ ಮಾಡಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ