WTC Points Table: ಲಂಕಾ ದಹನದ ನಂತರವೂ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಮೇಲೇರಲೇ ಇಲ್ಲ ಭಾರತ!
WTC Points Table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಲು ಭಾರತ ತಂಡವು ಈಗ ಪ್ರತಿ ಪಂದ್ಯವನ್ನು ಗೆಲ್ಲಬೇಕಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಭಾರತವು ಶ್ರೀಲಂಕಾ ವಿರುದ್ಧ ಒಂದು ಮತ್ತು ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ತವರಿನಲ್ಲಿ ಆಡಬೇಕಿದೆ.
ಶ್ರೀಲಂಕಾ ವಿರುದ್ಧದ (India vs Sri Lanka) ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಅನ್ನು ಭಾರತ ಅದ್ಭುತ ರೀತಿಯಲ್ಲಿ ಗೆದ್ದಿದೆ. ಮೊಹಾಲಿಯಲ್ಲಿ ನಡೆದ ಈ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು ಇನ್ನಿಂಗ್ಸ್ ಮತ್ತು 222 ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾಗೆ ಈ ಗೆಲುವು ವಿಶೇಷವಾಗಿದೆ ಏಕೆಂದರೆ ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ICC World Test Championship)ನಲ್ಲಿ ಪ್ರಮುಖ ಅಂಕಗಳನ್ನು ಪಡೆದಿದೆ. ಆದಾಗ್ಯೂ, ಈ ಗೆಲುವಿನ ನಂತರವೂ, ಭಾರತ ತಂಡವು ಪಾಯಿಂಟ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಈಗಲೂ ಐದನೇ ಸ್ಥಾನದಲ್ಲಿದೆ, ಆದರೆ ಸೋಲಿನ ಹೊರತಾಗಿಯೂ ಶ್ರೀಲಂಕಾ ಭಾರತಕ್ಕಿಂತ ಮೇಲಿದೆ.
ಕಳೆದ ಬಾರಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ್ದ ಭಾರತ ತಂಡ ಈ ಬಾರಿಯ ಚಾಂಪಿಯನ್‌ಶಿಪ್‌ನಲ್ಲಿಯೂ ಶುಭಾರಂಭ ಮಾಡಿದೆ. ಟೀಂ ಇಂಡಿಯಾ ಇಂಗ್ಲೆಂಡ್‌ನಲ್ಲಿ 2 ಟೆಸ್ಟ್‌ಗಳನ್ನು ಗೆದ್ದು ಒಂದರಲ್ಲಿ ಮಾತ್ರ ಸೋತಿದೆ. ನಂತರ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಗೆದ್ದಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಅನಿರೀಕ್ಷಿತ ಸೋಲು ಟೀಮ್ ಇಂಡಿಯಾವನ್ನು ಬೆಚ್ಚಿಬೀಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಸತತ ಎರಡನೇ ಬಾರಿ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಬರಲು ಬಹುತೇಕ ಎಲ್ಲ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ.
ಇದರಿಂದಾಗಿ ಭಾರತ ಶ್ರೀಲಂಕಾಕ್ಕಿಂತ ಕೆಳಗಿದೆ ಮೊಹಾಲಿ ಟೆಸ್ಟ್ ಗೆದ್ದ ನಂತರ ಭಾರತ 12 ಅಂಕಗಳನ್ನು ಪಡೆದಿದೆ. ಈಗ ಭಾರತ 10 ಟೆಸ್ಟ್ ಪಂದ್ಯಗಳಿಂದ 65 ಅಂಕಗಳನ್ನು ಹೊಂದಿದೆ. ಅದೇ ಸಮಯದಲ್ಲಿ, ಈ ಸೋಲಿನ ನಂತರ, ಶ್ರೀಲಂಕಾ 3 ಟೆಸ್ಟ್‌ಗಳಲ್ಲಿ ಕೇವಲ 24 ಅಂಕಗಳನ್ನು ಹೊಂದಿದೆ. ಇದರ ಹೊರತಾಗಿಯೂ ಪಾಯಿಂಟ್ ಪಟ್ಟಿಯಲ್ಲಿ ಶ್ರೀಲಂಕಾ ಮೂರನೇ ಮತ್ತು ಭಾರತ ಐದನೇ ಸ್ಥಾನದಲ್ಲಿದೆ. ಸರಣಿ ಆರಂಭಕ್ಕೂ ಮುನ್ನವೇ ಭಾರತ ಐದನೇ ಸ್ಥಾನದಲ್ಲಿತ್ತು. ಇದಕ್ಕೆ ಕಾರಣ ಅಂಕಗಳ ವ್ಯವಸ್ಥೆ.
ಹೊಸ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ, ICC ಅಂಕಗಳ ಶೇಕಡಾವಾರು ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ, ಇದರ ಅಡಿಯಲ್ಲಿ ಶೇಕಡಾವಾರು ಅಂಕಲ ಹಾಗೂ ಒಟ್ಟು ಅಂಕಗಳು ಮತ್ತು ಆಡಿದ ಟೆಸ್ಟ್ ಪಂದ್ಯದ ಒಟ್ಟು ಅಂಕಗಳ ನಡುವಿನ ವ್ಯತ್ಯಾಸದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಇದರ ಪ್ರಕಾರ ಭಾರತ ಇಲ್ಲಿಯವರೆಗೆ 120 ಅಂಕಗಳಿಗಾಗಿ ಹೋರಾಡಿ 65 ಅಂಕಗಳನ್ನು ಪಡೆದಿದೆ. ಅದರ ಪ್ರಕಾರ ಭಾರತವು ಒಟ್ಟು 54.16 ಅಂಕಗಳನ್ನು ಹೊಂದಿದೆ. 36 ಅಂಕಗಳಿಗಾಗಿ ಆಡುತ್ತಿರುವ ಶ್ರೀಲಂಕಾ ಎರಡು ಗೆಲುವು ಮತ್ತು ಒಂದು ಸೋಲಿನ ನಂತರ 66.6 ಶೇಕಡಾ ಅಂಕಗಳನ್ನು ಹೊಂದಿದೆ. 86.66 ಶೇಕಡಾದೊಂದಿಗೆ ಆಸ್ಟ್ರೇಲಿಯ ನಂಬರ್ ಒನ್ ಸ್ಥಾನದಲ್ಲಿದೆ.
The latest #WTC23 standings after India’s big win in the first #INDvSL Test ? pic.twitter.com/ECmTOqQNvl
— ICC (@ICC) March 6, 2022
ಭಾರತ 8 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಲು ಭಾರತ ತಂಡವು ಈಗ ಪ್ರತಿ ಪಂದ್ಯವನ್ನು ಗೆಲ್ಲಬೇಕಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಭಾರತವು ಶ್ರೀಲಂಕಾ ವಿರುದ್ಧ ಒಂದು ಮತ್ತು ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ತವರಿನಲ್ಲಿ ಆಡಬೇಕಿದೆ. ಅದೇ ಸಮಯದಲ್ಲಿ, ಇಂಗ್ಲೆಂಡ್ ವಿರುದ್ಧ ಒಂದು ಮತ್ತು ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಪಂದ್ಯಗಳು ವಿದೇಶದಲ್ಲಿ ನಡೆಯಲಿವೆ. ಒಂದು ವೇಳೆ ಟೀಂ ಇಂಡಿಯಾ ಈ ಎಲ್ಲಾ ಪಂದ್ಯಗಳನ್ನು ಗೆದ್ದರೆ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳುವುದು ಖಚಿತ.
ಇದನ್ನೂ ಓದಿ:IPL 2022: CSK-KKR ನಡುವೆ ಮೊದಲ ಪಂದ್ಯ! ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ; ಪೂರ್ಣ ಮಾಹಿತಿ ಇಲ್ಲಿದೆ