Smriti Mandhana WPL Auction: 3.40 ಕೋಟಿಗೆ ಆರ್​ಸಿಬಿ ಸೇರಿದ ಸ್ಫೋಟಕ ಓಪನರ್ ಸ್ಮೃತಿ ಮಂಧಾನ..!

Smriti Mandhana WPL Auction: ಸ್ಮೃತಿ ಅವರನ್ನು ಖರೀದಿಸಲು ಮುಂಬೈ ಮತ್ತು ಆರ್‌ಸಿಬಿ ನಡುವೆ ತೀವ್ರ ಫೈಪೋಟಿ ನಡೆಯಿತು. ಅಂತಿಮವಾಗಿ ಮಂಧಾನ ಅವರನ್ನು 3.40 ಕೋಟಿ ರೂ.ಗೆ ಖರೀದಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಯಿತು.

Smriti Mandhana WPL Auction: 3.40 ಕೋಟಿಗೆ ಆರ್​ಸಿಬಿ ಸೇರಿದ ಸ್ಫೋಟಕ ಓಪನರ್ ಸ್ಮೃತಿ ಮಂಧಾನ..!
ಸ್ಮೃತಿ ಮಂಧಾನ
Follow us
TV9 Web
| Updated By: ಪೃಥ್ವಿಶಂಕರ

Updated on:Feb 13, 2023 | 3:33 PM

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ಮೆಗಾ ಹರಾಜು ಇಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್​ನಲ್ಲಿ ಪ್ರಾರಂಭವಾಗಿದೆ. ಈ ಮೆಗಾ ಹರಾಜಿನಲ್ಲಿ ಮೊದಲ ಮಾಕ್ರ್ಯ್​ ಆಟಗಾರ್ತಿಯಾಗಿ ಹರಾಜಿಗೆ ಎಂಟ್ರಿಯಾದ ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಮೇಲೆ ಕೋಟಿಗಳ ಸುರಿ ಮಳೆಯಾಗಿದೆ. ಸ್ಮೃತಿ ಅವರನ್ನು ಖರೀದಿಸಲು ಮುಂಬೈ ಮತ್ತು ಆರ್‌ಸಿಬಿ (RCB) ನಡುವೆ ತೀವ್ರ ಫೈಪೋಟಿ ನಡೆಯಿತು. ಅಂತಿಮವಾಗಿ ಮಂಧಾನ ಅವರನ್ನು 3.40 ಕೋಟಿ ರೂ.ಗೆ ಖರೀದಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಯಿತು. ಸದ್ಯಕ್ಕೆ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಆರ್​ಸಿಬಿ ತಂಡಕ್ಕೆ ಸೇರಿಕೊಂಡಿರುವ ಸ್ಮೃತಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಏಕೆಂದರೆ ಈಗಾಗಲೇ ಟೀಂ ಇಂಡಿಯಾದ (Team India) ಉಪನಾಯಕಿಯಾಗಿರುವ ಮಂಧಾನಗೆ ತಂಡವನ್ನು ಮುನ್ನಡೆಸುವ ಸಾಮಥ್ರ್ಯವಿರುವುದರಿಂದಲೇ ಆರ್​ಸಿಬಿ, ಸ್ಮೃತಿಗೆ ಅಧಿಕ ಬೆಲೆ ನೀಡಿ ಖರೀದಿಸಿದೆ.

ಟಿ20 ಕ್ರಿಕೆಟ್​ನಲ್ಲಿ ಸ್ಮೃತಿ ದಾಖಲೆ

ವಿಶ್ವದ ಅತ್ಯುತ್ತಮ ಟಿ20 ಬ್ಯಾಟರ್​ಗಳಲ್ಲಿ ಸ್ಮೃತಿ ಮಂಧಾನ ಕೂಡ ಒಬ್ಬರು. ಈ ಆಟಗಾರ್ತಿ ಇದುವರೆಗು ಆಡಿರುವ 112 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 27.32 ಸರಾಸರಿಯಲ್ಲಿ 2651 ರನ್ ಗಳಿಸಿದ್ದಾರೆ. ಇದರಲ್ಲಿ 20 ಅರ್ಧಶತಕಗಳು ಸೇರಿದ್ದು, ಅಂತಾರಾಷ್ಟ್ರೀಯ ಟಿ20ಯಲ್ಲಿ ಮಂಧಾನ ಸ್ಟ್ರೈಕ್ ರೇಟ್ 123ಕ್ಕಿಂತ ಹೆಚ್ಚಿದೆ.

ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸ್ಮೃತಿ ದಾಖಲೆ

ಸ್ಮೃತಿ ಮಂಧಾನ ಕೂಡ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಲೀಗ್‌ನಲ್ಲಿ ಈ ಆಟಗಾರ್ತಿ 38 ಪಂದ್ಯಗಳಲ್ಲಿ 784 ರನ್ ಗಳಿಸಿದ್ದಾರೆ. ಮಂಧಾನ ಸ್ಟ್ರೈಕ್ ರೇಟ್ 130ಕ್ಕಿಂತ ಹೆಚ್ಚಿದೆ. ಇದಲ್ಲದೆ ದಿ ಹಂಡ್ರೆಡ್​ನಲ್ಲೂ ಮಂಧಾನ ಆಡಿದ್ದಾರೆ. ಅಲ್ಲಿಯೂ ಅವರ ಬ್ಯಾಟ್‌ನಿಂದ ರನ್‌ಗಳು ಹರಿದು ಬಂದಿವೆ. ದಿ ಹಂಡ್ರೆಡ್ 2022 ರಲ್ಲಿ ಸದರ್ನ್ ಬ್ರೇವ್ ಪರ ಆಡಿದ ಮಂಧಾನ 8 ಪಂದ್ಯಗಳಲ್ಲಿ 211 ರನ್ ಗಳಿಸಿದ್ದರು. ಈ ಸಮಯದಲ್ಲಿ, ಅವರ ಸ್ಟ್ರೈಕ್ ರೇಟ್ 151 ಕ್ಕಿಂತ ಹೆಚ್ಚಿತ್ತು.

ಸ್ಮೃತಿ ಮಂಧಾನ ವಿಶೇಷತೆ

WPL 2023 ಹರಾಜಿನಲ್ಲಿ ಸ್ಮೃತಿ ಮಂಧಾನಾ ಮೇಲೆ ಹಣದ ಸುರಿಮಳೆಯಾಗಲು ಅವರ ಆಟವೇ ಕಾರಣ. ಸ್ಮೃತಿ ಮಂಧಾನ ಟಿ20ಯಲ್ಲೂ ಸುದೀರ್ಘ ಇನ್ನಿಂಗ್ಸ್ ಆಡುವ ಶಕ್ತಿ ಹೊಂದಿದ್ದಾರೆ. ನಾಯಕಿ ಸ್ಥಾನಕ್ಕೆ ಸ್ಮೃತಿ ಮಂಧಾನ ಅತ್ಯುತ್ತಮ ಆಯ್ಕೆ. ಸ್ಮೃತಿ ಮಂಧಾನ ಅವರ ಅನುಭವವು ಕೂಡ ಅವರಿಗೆ ದುಬಾರಿ ಬೆಲೆ ನೀಡಲು ಕಾರಣವಾಗಿದೆ.

ಸದ್ಯ ಆರ್​ಸಿಬಿ ಖರೀದಿಸಿರುವ ಆಟಗಾರ್ತಿಯರು

– ಸ್ಮೃತಿ ಮಂಧಾನ (ಭಾರತ)

– ರೇಣುಕಾ ಸಿಂಗ್ (ಭಾರತ)

– ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ)

-ಸೋಫಿ ಡಿವೈನ್ (ನ್ಯೂಜಿಲೆಂಡ್)

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Mon, 13 February 23