WPL 2024: ಟಾಸ್ ಗೆದ್ದ ಡೆಲ್ಲಿ; ಆರ್‌ಸಿಬಿ ಮೊದಲು ಬೌಲಿಂಗ್
WPL 2024: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ಏಳನೇ ಪಂದ್ಯವನ್ನು ಆಡುವ ಸಲುವಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ತಂಡಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಕಣಕ್ಕಿಳಿದಿವೆ. ಅಂಕಪಟ್ಟಿಯಲ್ಲಿ ಡೆಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸ್ತುತ ಮೂರನೇ ಸ್ಥಾನದಲ್ಲಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL 2024) ತಮ್ಮ ಏಳನೇ ಪಂದ್ಯವನ್ನು ಆಡುವ ಸಲುವಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ತಂಡಗಳು (Delhi Capitals vs Royal Challengers Bangalore) ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಕಣಕ್ಕಿಳಿದಿವೆ. ಅಂಕಪಟ್ಟಿಯಲ್ಲಿ ಡೆಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಸ್ಮೃತಿ ಮಂಧಾನ (Smriti Mandhana) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸ್ತುತ ಮೂರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಅದ್ಭುತ ಗೆಲುವು ದಾಖಲಿಸುವ ಮೂಲಕ ಮಂಧಾನ ಪಡೆ ಎರಡನೇ ಸ್ಥಾನಕ್ಕೇರುವ ಗುರಿ ಹೊಂದಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸುವ ಇರಾದೆಯಲ್ಲಿದೆ. ಅಲ್ಲದೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಡೆಲ್ಲಿ ತಂಡಕ್ಕೆ ನಾಕೌಟ್ ಹಂತಕ್ಕೆ ಹೋಗುವ ಅವಕಾಶವಿದ್ದರೆ, ಇತ್ತ ಆರ್‌ಸಿಬಿ ತಂಡಕ್ಕೆ ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಅವಕಾಶವಿದೆ. ಹೀಗಾಗಿ ಉಭಯ ತಂಡಗಳಿಗೂ ಈ ಪಂದ್ಯ ಬಹಳ ಮುಖ್ಯವಾಗಿದೆ. ಇನ್ನು ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಅದರಂತೆ ಟಾಸ್ ಸೋತ ಆರ್‌ಸಿಬಿ ಮೊದಲು ಬೌಲಿಂಗ್ ಮಾಡಲಿದೆ. ಇನ್ನು ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.
ಮುಖಾಮುಖಿ ವರದಿ
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇದುವರೆಗೆ ಮೂರು ಪಂದ್ಯಗಳು ನಡೆದಿವೆ . ಅಚ್ಚರಿಯ ಸಂಗತಿ ಎಂದರೆ ಇಲ್ಲಿಯವರೆಗೂ ದೆಹಲಿ ತಂಡವನ್ನು ಸೋಲಿಸುವಲ್ಲಿ ಬೆಂಗಳೂರು ತಂಡ ವಿಫಲವಾಗಿದೆ. ಅಂದರೆ ಮೂರರಲ್ಲಿ ಮೂರು ಪಂದ್ಯಗಳು ಡೆಲ್ಲಿ ಪರ ಸಾಗಿವೆ. ಹೀಗಾಗಿ ದೆಹಲಿ ವಿರುದ್ಧದ ಮೊದಲ ಗೆಲುವಿಗಾಗಿ ಬೆಂಗಳೂರು ಇನ್ನೂ ಕಾಯುತ್ತಿದೆ. ಕಳೆದ ಸೀಸನ್ನಲ್ಲಿ, ಈ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು, ಎರಡರಲ್ಲೂ ಡೆಲ್ಲಿ ಗೆದ್ದಿದೆ. ಈ ಸೀಸನ್ನಲ್ಲಿ ನಡೆದ ಮೊದಲ ಮುಖಾಮುಖಿಯಲ್ಲೂ ಡೆಲ್ಲಿ ಗೆಲುವು ದಾಖಲಿಸಿದೆ. ಈ ಸೀಸನ್ನಲ್ಲಿ ಡೆಲ್ಲಿ ತಂಡ ತವರಿನಲ್ಲಿ ಬೆಂಗಳೂರು ತಂಡವನ್ನು ಸೋಲಿಸಿತ್ತು. ಹೀಗಾಗಿ ಆರ್‌ಸಿಬಿ ತಂಡ ಇದೀಗ ಡೆಲ್ಲಿಯನ್ನು ಅವರ ನೆಲದಲ್ಲಿ ಸೋಲಿಸುವ ಮೂಲಕ ಸೇಡು ತೀರಿಸಿಕೊಳ್ಳಲು ಇರಾದೆಯಲ್ಲಿದೆ.
WPL 2024: ಸ್ಮೃತಿ- ಪೆರ್ರಿ ಆಟಕ್ಕೆ ತಲೆಬಾಗಿದ ಯುಪಿ; ತವರಿನಲ್ಲಿ ಕೊನೆಯ ಪಂದ್ಯ ಗೆದ್ದ ಆರ್‌ಸಿಬಿ
ಎರಡೂ ತಂಡಗಳು
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಎಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ಶಿಖಾ ಪಾಂಡೆ, ಟಿಟಾಸ್ ಸಾಧು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ದಿಶಾ ಕ್ಯಾಸಟ್, ಜಾರ್ಜಿಯಾ ವೇರ್‌ಹ್ಯಾಮ್, ಸೋಫಿ ಮೊಲಿನೆಕ್ಸ್, ಶ್ರೇಯಾಂಕಾ ಪಾಟೀಲ್, ಆಶಾ ಸೊಭಾನಾ, ಶ್ರದ್ಧಾ ಪೋಖರ್ಕರ್, ರೇಣುಕಾ ಠಾಕೂರ್ ಸಿಂಗ್.
ಆರ್‌ಸಿಬಿ ಗೆಲ್ಲಲೇಬೇಕು
ಮೇಲೆ ಹೇಳಿದಂತೆ ಆರ್‌ಸಿಬಿ ತಂಡಕ್ಕೆ ಈ ಪಂದ್ಯ ಬಹಳ ಮುಖ್ಯವಾಗಿದೆ. ಮುಂದಿನ ಹಂತಕ್ಕೆ ಹೋಗಲು ಆರ್‌ಸಿಬಿ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಒಂದು ವೇಳೆ ಆರ್‌ಸಿಬಿ ತನ್ನ ಎರಡು ಪಂದ್ಯಗಳಲ್ಲಿ ಒಂದನ್ನು ಕಳೆದುಕೊಂಡರೆ, ಯುಪಿ ವಾರಿಯರ್ಸ್ ತಂಡಕ್ಕೆ ಸುವರ್ಣಾವಕಾಶ ಒದಗಿಬರಲಿದೆ. ಈ ಕಾರಣಕ್ಕಾಗಿ ಡೆಲ್ಲಿ ವಿರುದ್ಧದ ಪಂದ್ಯ ಆರ್‌ಸಿಬಿಗೆ ಅತ್ಯಂತ ಮಹತ್ವದ್ದಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:12 pm, Sun, 10 March 24