AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2025: ಡಬ್ಲ್ಯುಪಿಎಲ್​ನ ಎಲ್ಲಾ ಐದು ಫ್ರಾಂಚೈಸಿಗಳ ಧಾರಣ ಪಟ್ಟಿ ಬಿಡುಗಡೆ

WPL Retention 2025: ಮಹಿಳಾ ಪ್ರೀಮಿಯರ್ ಲೀಗ್‌ನ ಮುಂಬರುವ ಮೂರನೇ ಆವೃತ್ತಿಗಾಗಿ ಎಲ್ಲಾ ಐದು ತಂಡಗಳು ತಮ್ಮ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಮ್ಮ ತಂಡದಲ್ಲಿ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿರುವ ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಿವೆ.

WPL 2025: ಡಬ್ಲ್ಯುಪಿಎಲ್​ನ ಎಲ್ಲಾ ಐದು ಫ್ರಾಂಚೈಸಿಗಳ ಧಾರಣ ಪಟ್ಟಿ ಬಿಡುಗಡೆ
ಮಹಿಳಾ ಪ್ರೀಮಿಯರ್ ಲೀಗ್
ಪೃಥ್ವಿಶಂಕರ
|

Updated on:Nov 07, 2024 | 7:33 PM

Share

ಮುಂಬರುವ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ಗಾಗಿ ಎಲ್ಲಾ 5 ತಂಡಗಳು ತಮ್ಮ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಅದರಂತೆ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳು ತಾವು ತಂಡದಲ್ಲೇ ಉಳಿಸಿಕೊಂಡಿರುವ ಆಟಗಾರ್ತಿಯರು ಹಾಗೂ ತಂಡದಿಂದ ಬಿಡುಗಡೆ ಮಾಡಿರುವ ಆಟಗಾರ್ತಿಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ತಲಾ 14 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದರೆ, ಯುಪಿ ವಾರಿಯರ್ಸ್ 15 ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಉಳಿದಂತೆ ದೆಹಲಿ ಒಟ್ಟು ನಾಲ್ವರು ಆಟಗಾರ್ತಿಯರನ್ನು ಬಿಡುಗಡೆ ಮಾಡಿದ್ದರೆ, ಗುಜರಾತ್ ಏಳು ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿದೆ.

ಎಲ್ಲಾ 5 ತಂಡಗಳ ಧಾರಣ ಪಟ್ಟಿ ಹೀಗಿದೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಉಳಿಸಿಕೊಂಡಿರುವವರು: ಸ್ಮೃತಿ ಮಂಧಾನ (ನಾಯಕಿ), ಸಬ್ಬಿನೇನಿ ಮೇಘನಾ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವಾರೆಹಮ್, ಶ್ರೇಯಾಂಕ ಪಾಟೀಲ್, ಆಶಾ ಶೋಭನಾ, ಸೋಫಿ ಡಿವೈನ್, ರೇಣುಕಾ ಸಿಂಗ್, ಸೋಫಿ ಮೊಲಿನೆಕ್ಸ್, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ, ಡೇನಿಯಲ್ ವ್ಯಾಟ್.

ಬಿಡುಗಡೆಯಾದವರು: ದಿಶಾ ಕ್ಯಾಸಟ್, ಇಂದ್ರಾಣಿ ರಾಯ್, ನಡಿನ್ ಡಿ ಕ್ಲರ್ಕ್, ಶುಭಾ ಸತೀಶ್, ಶ್ರದ್ಧಾ ಪೋಕರ್ಕರ್, ಸಿಮ್ರಾನ್ ಬಹದ್ದೂರ್, ಹೀದರ್ ನೈಟ್.

ಮುಂಬೈ ಇಂಡಿಯನ್ಸ್

ಉಳಿಸಿಕೊಂಡಿರುವವರು: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ನೇಟ್ ಸಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಅಮನ್‌ಜೋತ್ ಕೌರ್, ಸೈಕಾ ಇಶಾಕ್, ಜಿಂತಿಮಣಿ ಕಲಿತಾ, ಎಸ್ ಸಜ್ನಾ, ಕೀರ್ತನ್ ಬಾಲಕೃಷ್ಣನ್, ಶಬ್ನಿಮ್ ಇಸ್ಮಾಯಿಲ್.

ಬಿಡುಗಡೆಯಾದವರು: ಪ್ರಿಯಾಂಕಾ ಬಾಲಾ, ಹುಮೈರಾ ಕಾಜಿ, ಫಾತಿಮಾ ಜಾಫರ್, ಇಸಿ ವಾಂಗ್.

ದೆಹಲಿ ಕ್ಯಾಪಿಟಲ್ಸ್

ಉಳಿಸಿಕೊಂಡವರು: ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ತಾನಿಯಾ ಭಾಟಿಯಾ, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ಮಿನ್ನು ಮಣಿ, ಟೈಟಾಸ್ ಸಾಧು, ಮೆಗ್ ಲ್ಯಾನಿಂಗ್, ಆಲಿಸ್ ಕ್ಯಾಪ್ಸೆ, ಮರಿಜಾನ್ನೆ ಕಪ್, ಜೆಸ್ ಜೊನಾಸೆನ್, ಅನ್ನಾಬೆಲ್ ಸದರ್ಲ್ಯಾಂಡ್.

ಬಿಡುಗಡೆಯಾದವರು: ಲಾರಾ ಹ್ಯಾರಿಸ್, ಅಶ್ವಿನಿ ಕುಮಾರಿ, ಪೂನಂ ಯಾದವ್, ಅಪರ್ಣಾ ಮೊಂಡಲ್.

ಯುಪಿ ವಾರಿಯರ್ಸ್

ಉಳಿಸಿಕೊಂಡಿರುವವರು: ಅಲಿಸ್ಸಾ ಹೀಲಿ (ನಾಯಕಿ), ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ದೀಪ್ತಿ ಶರ್ಮಾ (ಉಪನಾಯಕಿ), ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ಚಾಮರಿ ಅಟಪಟ್ಟು, ಕಿರಣ್ ನವಗಿರೆ, ರಾಜೇಶ್ವರಿ ಗಾಯಕ್‌ವಾಡ್, ಅಂಜಲಿ ಸರ್ವಾಣಿ, ಉಮಾ ಛೆಟ್ರಿ, ಪೂನಮ್ ಥಾಕೋನರ್, ಸಮಾ ಖ್ಮಾಕೊಹರ್ ಸುಲ್ತಾನಾ, ವೃಂದಾ ದಿನೇಶ್

ಬಿಡುಗಡೆಯಾದವರು: ಲಕ್ಷ್ಮಿ ಯಾದವ್, ಪಾರ್ಶ್ವಿ ಚೋಪ್ರಾ, ಲಾರೆನ್ ಬೆಲ್, ಎಸ್ ಯಶಶ್ರೀ.

ಗುಜರಾತ್ ಜೈಂಟ್ಸ್

ಉಳಿಸಿಕೊಂಡಿರುವವರು: ಹರ್ಲೀನ್ ಡಿಯೋಲ್, ದಯಾಲನ್ ಹೇಮಲತಾ, ತನುಜಾ ಕನ್ವರ್, ಶಬನಮ್ ಶಕೀಲ್, ಮನ್ನತ್ ಕಶ್ಯಪ್, ವೇದಾ ಕೃಷ್ಣಮೂರ್ತಿ, ತರನ್ನುಮ್ ಪಠಾಣ್, ಸಯಾಲಿ ಸತ್ಗರೆ, ಮೇಘನಾ ಸಿಂಗ್, ತ್ರಿಶಾ ಪೂಜಿತಾ, ಪ್ರಿಯಾ ಮಿಶ್ರಾ, ಬೆತ್ ಮೂನಿ, ಆಶ್ಲೇ ಗಾರ್ಡ್ನರ್, ಲಾರಾ ವೊಲ್ವಾರ್ಡ್, ಕ್ಯಾಥರೀನ್ ಬ್ರೈಸ್

ಬಿಡುಗಡೆಯಾದವರು: ಸ್ನೇಹ ರಾಣಾ, ಕ್ಯಾಥರೀನ್ ಬ್ರೈಸ್, ತ್ರಿಶಾ ಪೂಜಿತಾ, ವೇದಾ ಕೃಷ್ಣಮೂರ್ತಿ, ತರನ್ನುಮ್ ಪಠಾಣ್, ಲೀ ತಹುಹು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:30 pm, Thu, 7 November 24