Yashasvi Jaiswal: ಇಂಗ್ಲೆಂಡ್​ನಲ್ಲಿ ಅಂಪೈರ್ ವಿರುದ್ಧ ಜೈಸ್ವಾಲ್ ಕೋಪ: ಔಟ್ ಕೊಟ್ಟರೂ ಕ್ರೀಸ್ ಬಿಟ್ಟು ತೆರಳದ ಭಾರತೀಯ ಆಟಗಾರ

India A vs England Lions: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ, ಭಾರತ-ಎ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲು ಮೈದಾನಕ್ಕೆ ಬಂದರು. ಜೈಸ್ವಾಲ್ 17 ರನ್ ಗಳಿಸಿದಾಗ ಕ್ರಿಸ್ ವೋಕ್ಸ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಔಟ್ ಆದರು.

Yashasvi Jaiswal: ಇಂಗ್ಲೆಂಡ್​ನಲ್ಲಿ ಅಂಪೈರ್ ವಿರುದ್ಧ ಜೈಸ್ವಾಲ್ ಕೋಪ: ಔಟ್ ಕೊಟ್ಟರೂ ಕ್ರೀಸ್ ಬಿಟ್ಟು ತೆರಳದ ಭಾರತೀಯ ಆಟಗಾರ
Yashasvi Jaiswal

Updated on: Jun 07, 2025 | 8:21 AM

ಬೆಂಗಳೂರು (ಜೂ. 07): ಭಾರತ ತಂಡ ಜೂನ್ 20 ರಿಂದ ಇಂಗ್ಲೆಂಡ್ ಪ್ರವಾಸ (India vs England) ಆರಂಭಿಸಲಿದ್ದು, 5 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಹೆಡಿಂಗ್ಲೆ ಮೈದಾನದಲ್ಲಿ ಆಡಬೇಕಾಗಿದೆ. ಇದಕ್ಕೂ ಮುನ್ನ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದ್ದು, ಈ ಸರಣಿಗೆ ತಯಾರಿ ನಡೆಸಲು ತಂಡದ ಕೆಲವು ಆಟಗಾರರು ಈಗಾಗಲೇ ಇಂಗ್ಲೆಂಡ್ ತಲುಪಿದ್ದಾರೆ. ಈ ಸರಣಿಯ ಎರಡನೇ ಪಂದ್ಯ ಜೂನ್ 6 ರಿಂದ ನಾರ್ಥಾಂಪ್ಟನ್ ಮೈದಾನದಲ್ಲಿ ಶುರುವಾಗಿದೆ. ಇದರಲ್ಲಿ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಕೇವಲ 17 ರನ್ ಗಳಿಸಿ ಔಟಾದರು. ಆದರೆ, ಜೈಸ್ವಾಲ್ ಔಟ್ ಘೋಷಿಸಿದಾಗ ದೊಡ್ಡ ಹೈ-ಡ್ರಾಮವೇ ನಡೆಯಿತು.

ಅಂಪೈರ್ ನಿರ್ಧಾರದ ಬಗ್ಗೆ ಯಶಸ್ವಿ ಜೈಸ್ವಾಲ್ ಆಕ್ರೋಶ

ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ, ಭಾರತ-ಎ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲು ಮೈದಾನಕ್ಕೆ ಬಂದರು. ಮೊದಲ ಓವರ್​ನಿಂದಲೇ ಇಬ್ಬರೂ ಎಚ್ಚರಿಕೆಯಿಂದ ಆಡುತ್ತಿದ್ದರು. ಆದರೆ, ಇದರಲ್ಲಿ ಜೈಸ್ವಾಲ್ 26 ಎಸೆತಗಳನ್ನು ಎದುರಿಸಿ, 2 ಬೌಂಡರಿಗಳೊಂದಿಗೆ 17 ರನ್ ಗಳಿಸಿದಾಗ ಕ್ರಿಸ್ ವೋಕ್ಸ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಔಟ್ ಆದರು.

ಇದನ್ನೂ ಓದಿ
ವಿಧಾನಸೌಧ ಮುಂದೆ RCB ವಿಜಯೋತ್ಸವಕ್ಕೆ 19 ಷರತ್ತು ವಿಧಿಸಿದ್ದ ರಾಜ್ಯ ಸರ್ಕಾರ
ಐಪಿಎಲ್ ಫೈನಲ್ ಸೋಲಿನ ಆಘಾತದಿಂದ ಹೊರಬಂದಿಲ್ವ ಶ್ರೇಯಸ್ ಅಯ್ಯರ್?
ಬಿಸಿಸಿಐ ಆಗಿ ನಾವು ಭಾರತದಲ್ಲಿ ಕ್ರಿಕೆಟ್‌ಗೆ ಜವಾಬ್ದಾರರಾಗಿದ್ದೇವೆ
ನಾವು ಬಯಸಿದ ರೀತಿಯಲ್ಲಿ ಅಂತ್ಯಗೊಳ್ಳಲಿಲ್ಲ; ಪ್ರೀತಿ ಜಿಂಟಾ

ಚೆಂಡು ಪ್ಯಾಡ್​ಗೆ ತಾಗಿದಾಗ ಇಂಗ್ಲೆಂಡ್ ತಂಡ ದೊಡ್ಡ ಮನವಿ ಮಾಡಿತು. ಆಗ ಅಂಪೈರ್ ಜೈಸ್ವಾಲ್ ಅವರನ್ನು ಔಟ್ ಎಂದು ಘೋಷಿಸಿದರು. ಆದರೆ, ಈ ನಿರ್ಧಾರ ಜೈಸ್ವಾಲ್​ಗೆ ಕೋಪ ತರಿಸಿತು. ಅಂಪೈರ್ ಬಳಿ ಲೆಗ್​ ಸೈಡ್ ಎಂದು ಕೈ ಸನ್ನೆ ಮೂಲಕ ತೋರಿಸಿದರು. ಅಂಪೈರ್ ನಿರ್ಧಾರದಿಂದ ಕೋಪಗೊಂಡು ಅವರು ಸ್ವಲ್ಪ ಸಮಯದವರೆಗೆ ತಮ್ಮ ಕ್ರೀಸ್​ನಲ್ಲೇ ನಿಂತು ಅಂಪೈರ್ ಅನ್ನು ದಿಟ್ಟಿಸಿ ನೋಡುತ್ತಿದ್ದರು. ಬಳಿಕ ಅವರು ಕೋಪದಿಂದ ಪೆವಿಲಿಯನ್ ಕಡೆಗೆ ತಿರುಗಿ ಮತ್ತೆ ಹೊರಟುಹೋದರು.

 

ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾಗೆ ಜೈಸ್ವಾಲ್ ಫಾರ್ಮ್ ಬಹಳ ಮುಖ್ಯ

ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ, ಅವರು ನಿರಂತರವಾಗಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಜೈಸ್ವಾಲ್ ತಮ್ಮ ಪ್ರದರ್ಶನದ ಮೂಲಕ ಎಲ್ಲರನ್ನೂ ಮೆಚ್ಚಿಸಿದ್ದರು. ಈಗ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ, ಅಲ್ಲಿ ಯಾವುದೇ ಬ್ಯಾಟ್ಸ್‌ಮನ್‌ಗೆ ಸ್ವಿಂಗ್ ಬೌಲಿಂಗ್ ಎದುರಿಸುವುದು ಸುಲಭದ ಕೆಲಸವಲ್ಲ. ಅಂತಹ ಪರಿಸ್ಥಿತಿಯಲ್ಲಿ, ಜೈಸ್ವಾಲ್ ಈ ಸವಾಲನ್ನು ಹೇಗೆ ಎದುರಿಸುತ್ತಾರೆ ಎಂಬುದರ ಮೇಲೆ ಎಲ್ಲರ ಕಣ್ಣಿದೆ.

ಕೆಎಲ್ ರಾಹುಲ್ ಶತಕ

ಈ ಪಂದ್ಯದಲ್ಲಿ ಕೆಎಲ್ ರಾಹುಲ್ 13 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ತಮ್ಮ ಶತಕ ಪೂರೈಸಿದರು. ಐಪಿಎಲ್ ಮುಗಿಸಿಕೊಂಡು ಇಂಗ್ಲೆಂಡ್‌ಗೆ ಹೋಗಿರುವ ಕೆಎಲ್ ರಾಹುಲ್ ಅವರ ಈ ಶತಕ ತುಂಬಾ ವಿಶೇಷವಾಗಿದೆ. 151 ಎಸೆತಗಳಲ್ಲಿ ಶತಕ ಬಾರಿಸಿದ ರಾಹುಲ್​ಗೆ ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19 ನೇ ಶತಕವಾಗಿದೆ. ಬೇಗನೇ ಬ್ಯಾಟಿಂಗ್​ಗೆ ಬಂದ ರಾಹುಲ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡು ಕರುಣ್ ನಾಯರ್ ಜೊತೆಗೂಡಿ ತಂಡದ ಸ್ಕೋರ್ ಅನ್ನು 126 ರನ್‌ಗಳಿಗೆ ತಲುಪಿಸಿದರು. ಕರುಣ್ ನಾಯರ್ 40 ರನ್‌ಗಳ ವೈಯಕ್ತಿಕ ಸ್ಕೋರ್‌ಗೆ ವಿಕೆಟ್ ಕಳೆದುಕೊಂಡರು. ಇದರ ನಂತರ, ರಾಹುಲ್ ವಿಕೆಟ್ ಕೀಪರ್ ಧ್ರುವ್ ಜುರೆಲ್ ಅವರೊಂದಿಗೆ ಅದ್ಭುತ ಶತಕದ ಪಾಲುದಾರಿಕೆಯನ್ನು ಮಾಡಿ ಇಂಗ್ಲೆಂಡ್ ಲಯನ್ಸ್ ತಂಡವನ್ನು ಹಿನ್ನಡೆಗೆ ತಳ್ಳಿದರು. ಅಂತೆಯೆ ಜುರೆಲ್ ಅರ್ಧಶತಕ ಗಳಿಸಿ ನೆರವಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ