AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yashasvi Jaiswal: ಸಮಯ ಮುಗಿದ ಬಳಿಕ ಡಿಆರ್​ಎಸ್ ತೆಗೆದುಕೊಂಡ ಜೈಸ್ವಾಲ್: ಕೋಪದಲ್ಲಿ ಸ್ಟೋಕ್ಸ್ ಏನು ಮಾಡಿದ್ರು ನೋಡಿ

England vs India 2nd Test: ಯಶಸ್ವಿ ಜೈಸ್ವಾಲ್ ಡಿಆರ್ಎಸ್ ತೆಗೆದುಕೊಳ್ಳುವಾಗ 10 ಸೆಕೆಂಡ್ಗಳು ಕಳಿದಿತ್ತು. ಟೈಮ್- ಔಟ್ ಆದ ನಂತರ ಜೈಸ್ವಾಲ್ ಮನವಿ ಮಾಡಿದರು. ಇದನ್ನು ಅರಿತ ಬೆನ್ ಸ್ಟೋಕ್ಸ್ ತುಂಬಾ ಕೋಪಗೊಂಡು ಅಂಪೈರ್ ಕಡೆಗೆ ವೇಗವಾಗಿ ಓಡಿ ಬಂದರು. ರಿವ್ಯೂ ತೆಗೆದುಕೊಳ್ಳುವ ಸಮಯ ಮುಗಿದಿದೆ ಮತ್ತು ಜೈಸ್ವಾಲ್ ಸಮಯ ಮುಗಿದ ನಂತರ ರಿವ್ಯೂಗೆ ಒತ್ತಾಯಿಸಿದ್ದಾರೆ ಎಂದು ಅವರು ಹೇಳಿದರು.

Yashasvi Jaiswal: ಸಮಯ ಮುಗಿದ ಬಳಿಕ ಡಿಆರ್​ಎಸ್ ತೆಗೆದುಕೊಂಡ ಜೈಸ್ವಾಲ್: ಕೋಪದಲ್ಲಿ ಸ್ಟೋಕ್ಸ್ ಏನು ಮಾಡಿದ್ರು ನೋಡಿ
Yashasvi Jaiswal Drs
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 16, 2025 | 6:14 PM

Share

ಬೆಂಗಳೂರು (ಜು. 05): ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​ನ ಮೊದಲ ಇನ್ನಿಂಗ್ಸ್ ಆಧಾರದ ಮೇಲೆ ಭಾರತ ತಂಡವು (Indian Cricket Team) 180 ರನ್‌ಗಳ ಮುನ್ನಡೆ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡುವಾಗ ಟೀಮ್ ಇಂಡಿಯಾ 587 ರನ್ ಗಳಿಸಿದರೆ, ಅತ್ತ ಇಂಗ್ಲೆಂಡ್ ತಂಡವು 407 ರನ್‌ಗಳಿಗೆ ಆಲೌಟ್ ಆಯಿತು. ಜೇಮೀ ಸ್ಮಿತ್ ಮತ್ತು ಹ್ಯಾರಿ ಬ್ರೂಕ್ ಇಂಗ್ಲೆಂಡ್ ಪರ ಶತಕಗಳನ್ನು ಗಳಿಸಿದರು. ಈ ಆಟಗಾರರಿಂದಾಗಿ, ಇಂಗ್ಲೆಂಡ್ ತಂಡವು 400 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಇದಾದ ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆಗೆ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಆದರೆ, ಈ ವಿಕೆಟ್ ಬಗ್ಗೆ ದೊಡ್ಡ ಗದ್ದಲ ಉಂಟಾಯಿತು ಮತ್ತು ಬೆನ್ ಸ್ಟೋಕ್ಸ್ ಅಂಪೈರ್‌ಗಳೊಂದಿಗೆ ವಾದ ನಡೆಸುತ್ತಿರುವುದು ಕಂಡುಬಂದಿತು.

ಎಲ್​ಬಿಡಬ್ಲ್ಯೂ ಔಟಾದ ಯಶಸ್ವಿ ಜೈಸ್ವಾಲ್

ಇದನ್ನೂ ಓದಿ
Image
ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆ
Image
ಇಂಗ್ಲೆಂಡ್​ನ ಎಲ್ಲಾ 10 ವಿಕೆಟ್ ಉರುಳಿಸಿದ ಸಿರಾಜ್- ಆಕಾಶ್
Image
ಲೀಡ್ಸ್ ಟೆಸ್ಟ್ ಸೋಲಿನ ಬಳಿಕವೂ ಎಚ್ಚೆತ್ತುಕೊಳ್ಳದ ಟೀಂ ಇಂಡಿಯಾ
Image
148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಬೌಲಿಂಗ್

ಭಾರತ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ, 7 ನೇ ಓವರ್ ಅನ್ನು ಜೋಸ್ ಟಾಂಗ್ ಬೌಲ್ ಮಾಡಿದರು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ, ಜೈಸ್ವಾಲ್‌ ಚೆಂಡಿನ ಲೈನ್ ಮತ್ತು ಲೆಂತ್ ಅರ್ಥ ಮಾಡಿಕೊಳ್ಳುವಲ್ಲಿ ಎಡವಿದರು. ಚೆಂಡು ಅವರ ಪ್ಯಾಡ್‌ಗೆ ಬಡಿಯಿತು. ಇದಾದ ನಂತರ, ಇಂಗ್ಲೆಂಡ್ ಆಟಗಾರರ ಮನವಿಯ ಮೇರೆಗೆ, ಅಂಪೈರ್ ತಡಮಾಡದೆ ಬೆರಳನ್ನು ಎತ್ತಿ ಔಟ್ ಎಂದು ಘೋಷಿಸಿದರು. ಇಲ್ಲಿಯವರೆಗೂ ಎಲ್ಲವೂ ಸರಿಯಾಗಿತ್ತು.

ಬೆನ್ ಸ್ಟೋಕ್ಸ್ ಕೋಪಗೊಂಡರು

ಅಂಪೈರ್ ಔಟ್ ನೀಡಿದ ಬಳಿಕ ಆ ಮನವಿಯನ್ನು ಪರಿಶೀಲಿಸಲು 10 ಸೆಕೆಂಡ್​ಗಳ ಕಾಲಾವಕಾಶ ನೀಡಲಾಗುತ್ತದೆ. ಅಂದರೆ 10 ಸೆಕೆಂಡ್​ಗಳ ಒಳಗೆ ಬೇಕಿದ್ದರೆ ಡಿಆರ್​ಎಸ್ ತೆಗೆದುಕೊಳ್ಳಬಹುದು. ಇಲ್ಲಿ ಅಂಪೈರ್ ಔಟ್ ಕೊಟ್ಟ ಬಳಿಕ ಯಶಸ್ವಿ ಜೈಸ್ವಾಲ್ ಕೂಡ ಡಿಆರ್‌ಎಸ್‌ಗೆ ಒತ್ತಾಯಿಸಿದರು. ನಂತರ ಅಂಪೈರ್ ಕೂಡ ಅವರ ಪರಿಶೀಲನೆ ಬೇಡಿಕೆಯನ್ನು ಒಪ್ಪಿಕೊಂಡು ಥರ್ಡ್ ಅಂಪೈರ್​ಗೆ ಕೇಳಲು ಹೊರಟರು. ಈ ಸಂದರ್ಭ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕೋಪಗೊಂಡ ಘಟನೆ ನಡೆಯಿತು.

IND vs ENG: 3 ಕ್ಯಾಚ್ ಡ್ರಾಪ್, 12 ನೋ ಬಾಲ್; ತಪ್ಪು ತಿದ್ದಿಕೊಳ್ಳದ ಟೀಂ ಇಂಡಿಯಾ

ಅಸಲಿಗೆ ಇಲ್ಲಿ ಜೈಸ್ವಾಲ್ ಡಿಆರ್​ಎಸ್ ತೆಗೆದುಕೊಳ್ಳುವಾಗ 10 ಸೆಕೆಂಡ್​ಗಳು ಕಳಿದಿತ್ತು. ಟೈಮ್- ಔಟ್ ಆದ ನಂತರ ಜೈಸ್ವಾಲ್ ಮನವಿ ಮಾಡಿದರು. ಇದನ್ನು ಅರಿತ ಬೆನ್ ಸ್ಟೋಕ್ಸ್ ತುಂಬಾ ಕೋಪಗೊಂಡು ಅಂಪೈರ್ ಕಡೆಗೆ ವೇಗವಾಗಿ ಓಡಿ ಬಂದರು. ರಿವ್ಯೂ ತೆಗೆದುಕೊಳ್ಳುವ ಸಮಯ ಮುಗಿದಿದೆ ಮತ್ತು ಜೈಸ್ವಾಲ್ ಸಮಯ ಮುಗಿದ ನಂತರ ರಿವ್ಯೂಗೆ ಒತ್ತಾಯಿಸಿದ್ದಾರೆ ಎಂದು ಅವರು ಹೇಳಿದರು. ನಂತರ ಸ್ಟೋಕ್ಸ್ ಅಂಪೈರ್‌ಗಳೊಂದಿಗೆ ದೀರ್ಘ ಸಂಭಾಷಣೆ ನಡೆಸಿದರು. ಸ್ಟೋಕ್ಸ್ ಕೋಪದಿಂದ ಜೈಸ್ವಾಲ್ ಬಳಿ ಏನೋ ಹೇಳುತ್ತಿರುವುದು ಕಂಡುಬಂದಿದೆ. ಇದು ಮೈದಾನದಲ್ಲಿ ಕೆಲ ಸಮಯ ಗದ್ದಲಕ್ಕೆ ಕಾರಣವಾಯಿತು.

ಕೊನೆಗೂ ಇಂಗ್ಲೆಂಡ್‌ಗೆ ವಿಕೆಟ್ ಸಿಕ್ಕಿತು

ಇದಾದ ನಂತರ, ಕೊನೆಯಲ್ಲಿ ರಿವ್ಯೂ ತೆಗೆದುಕೊಂಡಾಗ, ಚೆಂಡು ಲೆಗ್ ಸ್ಟಂಪ್‌ಗೆ ಬಡಿಯುತ್ತಿರುವುದು ಕಂಡುಬಂದಿತು. ಹೀಗಾಗಿ ಮೂರನೇ ಅಂಪೈರ್ ಯಶಸ್ವಿ ಜೈಸ್ವಾಲ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಎಂದು ಘೋಷಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ಕೇವಲ 28 ರನ್ ಗಳಿಸಿದರು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ, ಅವರ ಬ್ಯಾಟ್‌ನಿಂದ 87 ರನ್‌ಗಳ ಇನ್ನಿಂಗ್ಸ್ ಬಂದಿತ್ತು. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದೆ ಮತ್ತು 244 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಸದ್ಯ ಎರಡು ದಿನಗಳ ಆಟ ಬಾಕಿ ಉಳಿದಿದ್ದು, ಸಾಷ್ಟು ಕುತೂಹಲ ಕೆರಳಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:24 am, Sat, 5 July 25

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ